ಸಾರಾಂಶ
ಧರ್ಮದ ಪ್ರಚಾರ, ಸಂಸ್ಕಾರ, ಆರೋಗ್ಯ ಪ್ರಾಪ್ತಿ ಮುಂತಾದವುಗಳು ಸಕಲರಿಗೆ ದೊರೆಯಬೇಕು ಎಂದು ವಿಶ್ವ ಮಧ್ವ ಮಹಾಪರಿಷತ್ತು ಎಂಬ ಬೃಹತ್ತಾದ ಸಂಸ್ಥೆಯನ್ನು ಸ್ಥಾಪನೆ ಮಾಡಲಾಗಿದೆ ಎಂದು 1008 ಸತ್ಯಾತ್ಮ ತೀರ್ಥ ಶ್ರೀಪಾದರು ನುಡಿದಿದ್ದಾರೆ.
- ರಾಯರ ಮಠದಲ್ಲಿ ರಜತ ಮಹೋತ್ಸವ ಕಾರ್ಯಕ್ರಮ - - - ದಾವಣಗೆರೆ: ಧರ್ಮದ ಪ್ರಚಾರ, ಸಂಸ್ಕಾರ, ಆರೋಗ್ಯ ಪ್ರಾಪ್ತಿ ಮುಂತಾದವುಗಳು ಸಕಲರಿಗೆ ದೊರೆಯಬೇಕು ಎಂದು ವಿಶ್ವ ಮಧ್ವ ಮಹಾಪರಿಷತ್ತು ಎಂಬ ಬೃಹತ್ತಾದ ಸಂಸ್ಥೆಯನ್ನು ಸ್ಥಾಪನೆ ಮಾಡಲಾಗಿದೆ ಎಂದು 1008 ಸತ್ಯಾತ್ಮ ತೀರ್ಥ ಶ್ರೀಪಾದರು ನುಡಿದರು.
ನಗರದ ಪಿ.ಜೆ. ಬಡಾವಣೆಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀಗಳು, ಭಕ್ತಾದಿಗಳಿಗೆ ಆರ್ಶೀವಚನ ಹಾಗೂ ಅನುಗ್ರಹ ಸಂದೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.ಭಾರತದ ಅನೇಕ ರಾಜ್ಯಗಳಲ್ಲಿ ಕೇಂದ್ರಗಳನ್ನು ಹೊಂದಿದೆ. ವೈದ್ಯಕೀಯ ಶಿಬಿರಗಳು, ಸಾಮಾಜಿಕ ಕಾರ್ಯಗಳನ್ನು ಆಯೋಜಿಸುವ ಮೂಲಕ ಸಾವಿರಾರು ಜನರಿಗೆ ಸಹಕಾರಿಯಾಗಿದೆ. ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಇದರ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ವಿಶ್ವ ಮಧ್ವ ಮಹಾಪರಿಷತ್ತು ವತಿಯಿಂದ ರಜತ ಮಹೋತ್ಸವ ಅಂಗವಾಗಿ 2024ರ ಡಿ.24ರಿಂದ 2025ರ ನ.25 ರವರೆಗೆ ಪ್ರತಿ ತಿಂಗಳು ಒಬ್ಬ ಶ್ರೇಷ್ಠ ವಿದ್ವಾಂಸರಿಂದ ಮಹಾಭಾರತದ ಪ್ರವಚನ ನಡೆಸಲಾಗುತ್ತದೆ ಹಾಗೂ ರಜತ ಮಹೋತ್ಸವ ವರ್ಷದಲ್ಲಿ ಅನೇಕ ಹೋಮ ಹವನಗಳನ್ನು ಹಮ್ಮಿಕೊಳ್ಳಲಾಗಿದೆ. ರಜತ ಮಹೋತ್ಸವ ಅಂಗವಾಗಿ ನಡೆಯುವ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶ್ರೀಗಳು ತಿಳಿಸಿದರು.ಈ ವೇಳೆ ದಾವಣಗೆರೆ ಕೇಂದ್ರದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಉತ್ತರಾದಿ ಮಠದ ಭಕ್ತರು ಉಪಸ್ಥಿತರಿದ್ದರು.
- - - -6 ಕೆಡಿವಿಜಿ34, 35ಃದಾವಣಗೆರೆಯಲ್ಲಿ ರಜತ ಮಹೋತ್ಸವ ಕಾರ್ಯಕ್ರಮವನ್ನು ಶ್ರೀ 1008 ಸತ್ಯಾತ್ಮತೀರ್ಥ ಶ್ರೀಪಾದರು ಉದ್ಘಾಟಿಸಿ, ಅನುಗ್ರಹ ಸಂದೇಶ ನೀಡಿದರು.