ಸಾರಾಂಶ
ಅತಿವೃಷ್ಟಿಯಿಂದ ಹೆಸರು, ಶೇಂಗಾ, ಹತ್ತಿ, ಉದ್ದು, ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳು ಹಾಳಾಗಿದೆ. ಸರ್ಕಾರ ಇದಕ್ಕಾಗಿ ಪ್ರತಿ ಹೆಕ್ಟರ್‌ಗೆ 50 ಸಾವಿರ ಪರಿಹಾರ ನೀಡಬೇಕು.
ಕುಂದಗೋಳ:
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.ಈ ವೇಳೆ ಕರವೇ ತಾಲೂಕು ಅಧ್ಯಕ್ಷ ಕಲ್ಲಪ್ಪ ಹರಕುಣಿ ಮಾತನಾಡಿ, ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹೆಸರು, ಶೇಂಗಾ, ಹತ್ತಿ, ಉದ್ದು, ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳು ಹಾಳಾಗಿದೆ. ಸರ್ಕಾರ ಇದಕ್ಕಾಗಿ ಪ್ರತಿ ಹೆಕ್ಟರ್‌ಗೆ ₹ 50 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ನಮ್ಮ ಹೊಲ ನಮ್ಮ ರಸ್ತೆ ಸುಧಾರಣೆ ಹಾಗೂ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆ, ಜಿಪಂ, ರಾಜ್ಯ ಎಂಜಿನಿಯರಿಂಗ್ ಉಪವಿಭಾಗ ವ್ಯಾಪ್ತಿಯಲ್ಲಿ ಒಳಪಡುವ, ಹಿರೇನೆರ್ತಿ-ಚಾಕಲಬ್ಬಿ, ಕುಂದಗೋಳ- ಕಡಪಟ್ಟಿ, ಕುಂದಗೋಳ- ತರ್ಲಘಟ್ಟ, ಸಂಶಿ-ರೋಟ್ಟಿಗವಾಡ, ಸಂಶಿ- ಹಿರೇಗುಂಜಳ, ಕುಂದಗೋಳ- ರಾಮನಕೋಪ್ಪ, ಕುಂದಗೋಳ- ಬೆಟದೂರ, ಹಿರೇನೆರ್ತಿ- ಶಿರೂರ ಹೀಗೆ ಅನೇಕ ರಸ್ತೆಗಳು ಸಂಪೂರ್ಣ ಹಾಳಾಗಿದ್ದು. ಇವುಗಳ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಪಟ್ಟುಹಿಡಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಸುಧಾಕರ ಭಾಗೇವಾಡಿ ಮಾತನಾಡಿ, ತಾವು ಮನವಿಯಲ್ಲಿ ಸಲ್ಲಿಸಿರುವ ರಸ್ತೆಗೆ ಟೆಂಡರ್ ಕರೆಯಲಾಗಿದ್ದು, ಎರಡ್ಮೂರು ದಿನಗಳಲ್ಲಿ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದರು.
ಈ ವೇಳೆ ಅಡಿವೆಪ್ಪ ಹೆಬಸೂರ, ಮಂಜುನಾಥ ಹಾದಿಮನಿ, ಅಶೋಕ ಸಂಶಿ, ಅಡಿವೆಪ್ಪ ತಳವಾರ, ಪ್ರಭುಗೌಡ ಸಂಕ್ಯಾಗೌಡಶ್ಯಾನಿ, ರವಿ ಶಿರಸಂಗಿ, ಮಂಜು ಪೂಜಾರ, ಪ್ರವೀಣ ಭರದೆಲಿ, ಶ್ರೀಂಕಾತ ನಾಗರಳ್ಳಿ, ನಿಂಗರಾಜ ಕುಬಿಹಾಳ, ಚಂದ್ರಗೌಡ ಪಾಟೀಲ ಸೇರಿದಂತೆ ಹಲವರಿದ್ದರು.