ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಿ

| Published : Dec 15 2023, 01:30 AM IST

ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಡರಗಿ ಪಟ್ಟಣದಲ್ಲಿ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ ಮುಂಡರಗಿ ವತಿಯಿಂದ ಶ್ರೀ ವೀರಭದ್ರೇಶ್ವರ ದೇವಸ್ಥಾನದ 16 ನೇ ವಾರ್ಷಿಕೋತ್ಸವ, ನೂತನ ಗೋಪುರದ ಕಳಸಾರೋಹಣ, ಅಗ್ನಿ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅನ್ನದಾನೀಶ್ವರ ಮಹಾಸ್ವಾಮೀಜಿ

ಮುಂಡರಗಿ: ಇಂದು ನವಜೀವನಕ್ಕೆ ಕಾಲಿಟ್ಟ 42 ಜೋಡಿಗಳು ನಿತ್ಯ ನಿಷ್ಠೆಯಿಂದ ಕಾಯಕ ಮಾಡುವ ಮೂಲಕ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಬೇಕು ಎಂದು ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.

ಅವರು ಗುರುವಾರ ಪಟ್ಟಣದಲ್ಲಿ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ ಮುಂಡರಗಿ ವತಿಯಿಂದ ಶ್ರೀ ವೀರಭದ್ರೇಶ್ವರ ದೇವಸ್ಥಾನದ 16 ನೇ ವಾರ್ಷಿಕೋತ್ಸವ, ನೂತನ ಗೋಪುರದ ಕಳಸಾರೋಹಣ, ಅಗ್ನಿ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನವದಂಪತಿಗಳು ಪ್ರಕೃತಿ ಪ್ರೇಮಿಗಳಾಗಿ ನಿಮ್ಮ ಹೊಲದ ಬದು, ಮನೆಯ ಮುಂದೆ ಹೀಗೆ ಅವಕಾಶವಿದ್ದಲ್ಲಿ ಗಿಡಮರಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಬೆಳೆಸಬೇಕು. ಮುಂದೊಂದು ದಿನ ಅವು ನಿಮ್ಮ ಮಕ್ಕಳಿಗೆ,ನಿಮ್ಮ ಕುಟುಂಬಕ್ಕೆ ಆಸರೆಯಾಗುತ್ತವೆ ಎಂದರು.

ಅನ್ನದಾನೀಶ್ವರನ ಈ ಪುಣ್ಯ ನೆಲದಲ್ಲಿ ನಿರ್ಮಾಣಗೊಂಡಿರುವ ಅನೇಕ ಗುಡಿ ಗುಂಡಾರಗಳು ಪ್ರಗತಿ ಹೊಂದುತ್ತಿವೆ. ಕಳೆದ 16 ವರ್ಷಗಳ ಹಿಂದೆ ನಿರ್ಮಾಣವಾದ ವೀರಭದ್ರೇಶ್ವರ ದೇವಸ್ಥಾನ ವರ್ಷದಿಂದ ವರ್ಷಕ್ಕೆ ಪ್ರತಿ ಹಂತದಲ್ಲಿಯೂ ಅಭಿವೃದ್ಧಿಗೊಳ್ಳುತ್ತಾ ಬಂದಿದೆ. ಪ್ರತಿ ವರ್ಷ ಜಾತ್ರಾ ಮಹೋತ್ಸವ ಹಾಗೂ ಅದರ ಅಂಗವಾಗಿ ವಿವಿಧ ಕಾರ್ಯಕ್ರಮ ಮಾಡುತ್ತಾ ಬಂದಿದೆ. ಪ್ರಸ್ತುತ ವರ್ಷದಿಂದ ಶ್ರೀವೀರಭದ್ರೇಶ್ವರ ಪ್ರತಿಷ್ಠಾನ ಪುರಸ್ಕಾರ ಪ್ರಾರಂಭಿಸಿದ್ದು, ಪ್ರಥಮ ಬಾರಿಗೆ ಈ ಪ್ರಶಸ್ತಿ ನಮ್ಮವರೇ ಆದ ಗಂಗಾಧರಸ್ವಾಮಿಯವರಿಗೆ ನೀಡಿದ್ದು ಸೂಕ್ತವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ, ರಂಗನಿರ್ದೇಶಕ ಪಿ. ಗಂಗಾಧರಸ್ವಾಮಿ ಅವರಿಗೆ ಶ್ರೀ ವೀರಭದ್ರೇಶ್ವರ ಪ್ರತಿಷ್ಠಾನ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನೂರಿನ ದೇವಸ್ಥಾನದ ವತಿಯಿಂದ ಶ್ರೀ ವೀರಭದ್ರೇಶ್ವರ ಪ್ರತಿಷ್ಠಾನ ಪುರಸ್ಕಾರ ಪಡೆಯುತ್ತಿರುವುದು ಅತ್ಯಂತ ಖುಷಿ ತಂದಿದೆ. ನಾನು ರಂಗಭೂಮಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ನಮ್ಮ ತಂದೆಯವರ ಪ್ರೋತ್ಸಾಹವೇ ಕಾರಣವಾಗಿದೆ. ನಾಟಕಗಳಿಂದ ಏನನ್ನಾದರೂ ಸಾಧಿಸಬೇಕೆಂದು ನಾಟಕ ಕ್ಷೇತ್ರ ಆಯ್ಕೆ ಮಾಡಿಕೊಂಡು ರಂಗಭೂಮಿ ವಿಷಯದಲ್ಲಿ ಪದವಿ ಪಡೆದುಕೊಂಡಿದ್ದೇನೆ ಎಂದರು.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸುಮಾರು 42 ಜೋಡಿ ನವದಂಪತಿಗಳು ಹೊಸ ಜೀವನಕ್ಕೆ ಕಾಲಿಟ್ಟರು. ಇದೇ ಸಂದರ್ಭದಲ್ಲಿ ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ ಅಧ್ಯಕ್ಷ ಸಂಗಣ್ಣ ಲಿಂಬಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಜಾತ್ರಾ ಸಮೀತಿ ಅಧ್ಯಕ್ಷ ಪ್ರದೀಪಗೌಡ ಗುಡದಪ್ಪನವರ, ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವತಿ ಕುಸಬದ, ಪುರಸಭೆ ಸದಸ್ಯ ಕವಿತಾ ಉಳ್ಳಾಗಡ್ಡಿ, ಕೆ.ಎಫ್. ಅಂಗಡಿ, ಈರಣ್ಣ ಕರ್ಜಗಿ, ಕಾಶಿನಾಥ ಸೊಟಾರಿ, ರಂಗಪ್ಪ ಕೊಳಿ, ಮಂಜುನಾಥ ಕಾಶಿಗಾವಿ, ಮಹಾಂತೇಶ ಕೊರಡಕೇರಿ, ವಿ.ಜೆ. ಹಿರೇಮಠ, ದೀಪಾ ಗುಗ್ಗರಿ,ಲತಾ ಲಿಂಬಿಕಾಯಿ, ರೇಖಾ ಹುಲ್ಲೂರು, ಮಂಗಳಾ ಕರ್ಜಗಿ, ಅಮೃತಾ ಲಿಂಬಿಕಾಯಿ, ಎಸ್.ಪಿ. ಕೊಪ್ಪಳ, ರವೀಂದ್ರಗೌಡ ಪಾಟೀಲ, ಅಜ್ಜಪ್ಪ ಲಿಂಬಿಕಾಯಿ, ಮುತ್ತಣ್ಣ ಬಣಕಾರ, ವಿರೇಶ ಸಜ್ಜನರ, ಶರಣಪ್ಪ ಕುಬಸದ, ಮಹಾಂತೇಶ ತ್ಯಾಮನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಲತಾ ಕಡ್ಡಿ ಸ್ವಾಗತಿಸಿದರು, ಕೊಟ್ರೇಶ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಹಿಣಿ ಕುಬಸದ ಹಾಗೂ ಕಾಶಿನಾಥ ಬಿಳಿಮಗ್ಗದ ನಿರೂಪಿಸಿದರು.