ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಹಲಗೂರು ಹೋಬಳಿಯ ವಿವಿಧ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಥಕ್ಕೆ ಭವ್ಯ ಸ್ವಾಗತ ಕೋರಲಾಯಿತು.ಮಳವಳ್ಳಿ ತಾಲೂಕಿನ ನಿಟ್ಟೂರು, ಲಿಂಗಪಟ್ಟಣ್ಣ, ಟಿ.ಕೆ.ಹಳ್ಳಿ, ಎಚ್.ಬಸಾಪುರ, ಬ್ಯಾಡರಹಳ್ಳಿ, ತೊರೆಕಾಡನಹಳ್ಳಿ, ಹಲಗೂರು ಹಾಗೂ ಕಸಬ ಹೋಬಳಿಯ ಹಲವು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಂಚಾಯ್ತಿ ಸದಸ್ಯರು, ಸಿಬ್ಬಂದಿ , ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಕನ್ನಡ ಅಭಿಮಾನಿಗಳು ಅದ್ಧೂರಿಯಾಗಿ ರಥವನ್ನು ಬರಮಾಡಿಕೊಂಡರು.
ನಾಡದೇವಿ ಭುವನೇಶ್ವರಿ ದೇವಿಗೆ ಹಲಗೂರು ಗ್ರಾಪಂ ಅಧ್ಯಕ್ಷೆ ಶಶಿಕಲಾ.ಆರ್.ಶ್ರೀನಿವಾಸಚಾರಿ ಪುಷ್ಪಾರ್ಚನೆ ಮಾಡುವ ಮೂಲಕ ಭವ್ಯ ಸ್ವಾಗತ ಕೋರಲಾಯಿತು. ಹಲಗೂರಿನ ಪ್ರಮುಖ ಬೀದಿಗಳಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಥವು ಸಂಚರಿಸಿತು. ಮುಖ್ಯ ವೃತ್ತದಲ್ಲಿ ಕನ್ನಡ ನಾಡು ನುಡಿಗೆ ಸಂಬಂಧಿಸಿದ ನೃತ್ಯ ರೂಪಕವನ್ನ ಕಲಾವಿದರು ಪ್ರದರ್ಶಿದರು.ಗ್ರಾಪಂ ಅಧ್ಯಕ್ಷೆ ಶಶಿಕಲಾ ಶ್ರೀನಿವಾಸ್ ಆಚಾರಿ ಮಾತನಾಡಿ, ಎಲ್ಲರೂ ಹೆಚ್ಚಿನ ಸಹಕಾರ ನೀಡಿ ಸಮ್ಮೇಳನವನ್ನು ಯಶಸ್ವಿಗೊಳಿಸಿವಂತೆ ಮನವಿ ಮಾಡಿದರು.
ಜಿಲ್ಲಾ ಕಸಾಪ ಉಪಾಧ್ಯಕ್ಷ ದೇವರಾಜು ಕೊದೇನಕೊಪ್ಪಲು ಮಾತನಾಡಿ, ಡಿ.20, 21, 22 ,ರಂದು ಅಖಿಲ ಭಾರತ ಸಾಹಿತ್ಯ ಸಮ್ಮೇಳನ 30 ವರ್ಷಗಳ ನಂತರ ಮಂಡ್ಯ ಜಿಲ್ಲೆಗೆ ಬಂದಿದೆ. ಜಿಲ್ಲೆಯಲ್ಲಿ ಸಾಂಸ್ಕೃತಿಕ, ಜಾನಪದ, ಸಾಹಿತ್ಯ, ಕಲೆ, ಕೃಷಿಗೆ ಸಂಬಂಧಪಟ್ಟ ಗೋಷ್ಠಿಗಳು ನಡೆಯುವುದರಿಂದ ಇಡೀ ವಿಶ್ವ, ದೇಶ, ರಾಜ್ಯವೇ ನೋಡುವಂತಹ ಅದ್ಭುತ ಕಾರ್ಯಕ್ರಮ ಇದಾಗಲು ಒಗ್ಗಟ್ಟಿನಿಂದ ಒಳ್ಳೆಯ ಸಂದೇಶ ಕೊಡೋಣ ಎಂದು ಕರೆ ನೀಡಿದರು.ನಿವೃತ್ತ ಶಿಕ್ಷಕ ಡಿ.ರಾಮು ಮಾತನಾಡಿ, ಸಮ್ಮೇಳನಕ್ಕೆ ಗೊರೂರು ಚೆನ್ನಬಸಪ್ಪ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಮಂಜಸವಾದ ವ್ಯಕ್ತಿ ಆಯ್ಕೆಯಾಗಿದ್ದು ಇದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಸಮ್ಮೇಳನಕ್ಕೆ ಜಾತಿ ಧರ್ಮ ಮತಗಳ ಭೇದವಿಲ್ಲದೆ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಈ ಮೂಲಕ ಪ್ರಾರ್ಥಿಸಿಕೊಳ್ಳುತ್ತೇನೆ ಎಂದರು.
ಈ ವೇಳೆ ಗ್ರಾಪಂ ಉಪಾಧ್ಯಕ್ಷೆ ಲತಾ ಮಹದೇವ್, ಸದಸ್ಯರು ಸಿಬ್ಬಂದಿ ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷ ಎನ್. ಕೆ .ಕುಮಾರ್ ಮತ್ತು ಸದಸ್ಯರು, ಕಸಾಪ ಹೋಬಳಿ ಘಟಕದ ಅಧ್ಯಕ್ಷರಾದ ಭಕ್ತವತ್ಸಲ ( ಬಾಬು) , ಪದ್ಮನಾಭ,ಹೆಚ್.ವಿ ರಾಜು,ಡಿ.ಎಲ್.ಮಾದೇಗೌಡ, ಗಂಗರಾಜು, ಮನೋಹರ್, ಎ.ವಿ.ಟಿ.ಕುಮಾರ್, ಗಿರೀಶ್ ,ಶ್ರೀನಿವಾಸಚಾರಿ, ಮನೋಹರ ಮಲ್ಲಿಕ್, ಜೆ.ದೇವರಾಜು, ಎ .ಟಿ. ಶ್ರೀನಿವಾಸ್ ,ಶಿವರಾಜು, ಎಚ್. ಎಸ್. ಕೃಷ್ಣ, ಮೋದಿ ರವಿ, ಗುರುಬಸವೇಗೌಡ, ಅಭಿ ಬಸವರಾಜು ಸೇರಿದಂತೆ ಇತರರು ಇದ್ದರು.