ಸಾರಾಂಶ
ಡಾನ್ ಬಾಸ್ಕೋ ಶಾಲೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಜರುಗಿತು.
ಕನ್ನಡಪ್ರಭ ವಾರ್ತೆ ದೇವದುರ್ಗ
ಮಕ್ಕಳಿಗೆ ಕಲಿಕೆಯ ಜೊತೆಗೆ ಅವರಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ಹಾಗೂ ಸೂಕ್ತ ಅವಕಾಶಗಳನ್ನು ಒದಗಿಸಬೇಕೆಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.ಪಟ್ಟಣದ ಡಾನ್ ಬಾಸ್ಕೋ ಶಾಲೆಯಲ್ಲಿ ಜಿಪಂ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರಗಳ ಸಹಯೋಗದಲ್ಲಿ ಮಂಗಳವಾರ ಜರುಗಿದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಭಾಗದ ಮಕ್ಕಳು ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿ ಪ್ರತಿಭೆ ಪ್ರದರ್ಶಿಸಿರುವದು ಹೆಮ್ಮೆಯ ಸಂಗತಿ. ಕಲಿಕಾ ಮಟ್ಟದಲ್ಲಿ ಯೂ ಕೂಡ ತಾಲೂಕಿನ ವಿದ್ಯಾರ್ಥಿಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನಿರೀಕ್ಷಿತ ಗುರಿ ತಲುಪಿರುವುದು ಶಿಕ್ಷಣದ ಅಭಿವೃದ್ಧಿಗೆ ನಾಂದಿಯಾಗಿದೆ ಎಂದು ಶಾಸಕಿ ಕರೆಮ್ಮ ಹೇಳಿದರು.ಎಪಿಎಂಸಿ ಅಧ್ಯಕ್ಷ ಆದನಗೌಡ ಪಾಟೀಲ್ ಬುಂಕಲದೊಡ್ಡಿ, ಬಿಆರ್‌ಸಿ ಶಿವರಾಜ ನಾಯಕ ಪೂಜಾರಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ರಾಮಣ್ಣ ಕರಡಿಗುಡ್ಡ, ತಾಲೂಕು ನೌಕರರ ಸಂಘ ಅಧ್ಯಕ್ಷ ಹನುಮಂತ್ರಾಯ ಶಾಖೆ, ಡಾನ್ ಬಾಸ್ಕೋ ಫಾದರ್, ಮುಖಂಡರಾದ ಶರಣಪ್ಪ ಬಳೆ, ರೇಣುಕಾ ಎಂ.ಸ್ವಾಮಿ, ಮಂಜುನಾಥ ಮಾತ್ಪಳ್ಳಿ, ಪ್ರಾ.ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ವಿರುಪನಗೌಡ ನಾಗಡದಿನ್ನಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ 25 ಕ್ಲಷ್ಟರ್‌ಗಳ ವಿಜೇತ ಮಕ್ಕಳು ಪಾಲ್ಗೊಂಡಿದ್ದರು. ವೇದಿಕೆ ಮುಂಭಾಗದಲ್ಲಿ ದೇವಿ ಅವತಾರ ಮತ್ತು ಶ್ರೀ ಕೃಷ್ಣ ಅವತಾರದ ಪಾತ್ರಧಾರಿಗಳು ಗಮನ ಸೆಳೆದರು. ಶಿಕ್ಷಣ ಇಲಾಖೆ ಮನೋಹರ ಶಾಸ್ತ್ರಿ ನಿರೂಪಿಸಿದರು.
---03ಕೆಪಿಡಿವಿಡಿ01: ದೇವದುರ್ಗ ಪಟ್ಟಣದ ಡಾನ್ ಬಾಸ್ಕೋ ಶಾಲೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಶಾಸಕ ಕರೆಮ್ಮ ಜಿ.ನಾಯಕ ಉದ್ಘಾಟಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))