ವಿವಾಹಿತೆಯ ಅಶ್ಲೀಲ ಚಿತ್ರ ಗೋಡೆಗಂಟಿಸಿ ವಿಕೃತಿ

| Published : Mar 23 2024, 01:05 AM IST

ವಿವಾಹಿತೆಯ ಅಶ್ಲೀಲ ಚಿತ್ರ ಗೋಡೆಗಂಟಿಸಿ ವಿಕೃತಿ
Share this Article
  • FB
  • TW
  • Linkdin
  • Email

ಸಾರಾಂಶ

ನೊಂದ ಮಹಿಳೆ ದೂರು ಸಲ್ಲಿಸಿದ ಹಿನ್ನೆಲೆ ಆರೋಪಿ ಸತೀಶ್‌ ಭಟ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ಹೊನ್ನಾವರ: ತಾಲೂಕಿನ ಕವಲಕ್ಕಿಯಲ್ಲಿ ವಿವಾಹಿತ ಮಹಿಳೆಯ ಅಶ್ಲೀಲ ಚಿತ್ರವನ್ನು ಗೋಡೆಗಂಟಿಸಿ ಹೀನ ಕೃತ್ಯ ನಡೆಸಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ತಾಲೂಕಿನ ಕವಲಕ್ಕಿಯ ಮಹಿಳೆಯೊಬ್ಬರ ಪೋಟೊಗಳನ್ನು ಶಾಲೆಯೊಂದರ ಕಾಪೌಂಡ್‌ ಹಾಗೂ ಅಕ್ಕಪಕ್ಕದ ಗೋಡೆಗೆ ಅಂಟಿಸಿಲಾಗಿತ್ತು. ಬುಧವಾರ ಬೆಳಗ್ಗೆ ಇದನ್ನು ಗಮನಿಸಿದ ಜನರಿಂದ ವಿಷಯ ತಿಳಿದ ಪೋಟೋದಲ್ಲಿರುವ ಮಹಿಳೆ ಮತ್ತು ಆಕೆಯ ಪತಿ ಪೋಟೋಗಳನ್ನು ಕಿತ್ತು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಬಳಿಕ ನೊಂದ ಮಹಿಳೆ ದೂರು ಸಲ್ಲಿಸಿದ ಹಿನ್ನೆಲೆ ಆರೋಪಿ ಸತೀಶ್‌ ಭಟ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆರೋಪಿ ಗುರುವಾರ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದವನೇ ಮನೆಯಲ್ಲಿ ಪತ್ರ ಬರೆದಿಟ್ಟು ನಾಪತ್ತೆಯಾಗಿರುವುದಾಗಿ ಆತನ ಸಂಬಂಧಿಗಳು ಪೊಲೀಸರಿಗೆ ದೂರು ನೀಡಿದ್ದರು.ಸತೀಶ ರೂಮಿನ ಟೇಬಲ್ ಮೇಲೆ ಒಂದು ಚೀಟಿ ಸಿಕ್ಕಿದ್ದು ಅದರಲ್ಲಿ, "ನನ್ನ ಮೇಲೆ ಪ್ರಕರಣ ದಾಖಲಾಗಿದ್ದರಿಂದ ಮನನೊಂದು ಮರ್ಯಾದೆ ಕಳೆದುಕೊಂಡು ಬದುಕುವುದಕ್ಕಿಂತ ಸಾಯುವುದೇ ಮೇಲು. ನನ್ನ ಸಾವಿಗೆ ನನ್ನ ಮೇಲೆ ದೂರು ನೀಡಿದ ಮಹಿಳೆಯೇ ನೇರ ಕಾರಣ " ಎಂದು ಬರೆದಿದ್ದ. ನಾಪತ್ತೆಯಾದ ಸತೀಶ್ ಭಟ್ ಗುರುವಾರ ಸಂಜೆ ವೇಳೆ ಪತ್ತೆಯಾಗಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.ಈ ಕುರಿತು ನೊಂದ ಮಹಿಳೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ತಾನು ಕೆಲವು ತಿಂಗಳ ಹಿಂದೆ ಕವಲಕ್ಕಿಯ ಮನೆಯೊಂದರಲ್ಲಿ ಮನೆಗೆಲಸಕ್ಕೆ ಹೋಗುತ್ತಿದ್ದೆ. ಆಗ ಮನೆಯ ಮಾಲೀಕ ನನ್ನ ಜತೆಗೆ ಅಸಭ್ಯವಾಗಿ ವರ್ತಿಸಿ ಪೋಟೋಗಳನ್ನು ತೆಗೆದಿದ್ದ. ಹೀಗಾಗಿ ಅಲ್ಲಿ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದೆ. ಅಶ್ಲೀಲ ಪೋಟೊ ಕ್ಲಿಕ್ಕಿಸಿದ ಆತನ ಮೇಲೆ ಹಾಗೂ ಗೋಡೆಗಳಿಗೆ ಅದನ್ನು ಅಂಟಿಸಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದೇನೆ ಎಂದಿದ್ದಾಳೆ.