ಸಾರಾಂಶ
ಬಂಡೀಪುರ ಸಫಾರಿ ಜೋನ್‌ನಲ್ಲಿ ಮೂರ್ಕೆರೆ ಫೀಮೇಲ್ ಎಂದು ಕರೆಯಲ್ಪಡುವ ಹುಲಿ ಕುಟುಂಬ ಸಫಾರಿ ರಸ್ತೆ ದಾಟಿದೆ. ಸಫಾರಿಗೆ ತೆರಳಿದ್ದ ಪ್ರವಾಸಿಗರೊಬ್ಬರು ಮೂರ್ಕೆರೆ ಫೀಮೇಲ್ ಹುಲಿ ಸಫಾರಿ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ನಡೆದು ಬರುವಾಗ ಹುಲಿ ಕುಂಟುತ್ತ ಸಾಗುವ ವೀಡಿಯೋ ವೈರಲ್ ಆಗಿದೆ.
ಗುಂಡ್ಲುಪೇಟೆ: ಬಂಡೀಪುರ ಸಫಾರಿ ಜೋನ್‌ನಲ್ಲಿ ಮೂರ್ಕೆರೆ ಫೀಮೇಲ್ ಎಂದು ಕರೆಯಲ್ಪಡುವ ಹುಲಿ ಕುಟುಂಬ ಸಫಾರಿ ರಸ್ತೆ ದಾಟಿದೆ. ಸಫಾರಿಗೆ ತೆರಳಿದ್ದ ಪ್ರವಾಸಿಗರೊಬ್ಬರು ಮೂರ್ಕೆರೆ ಫೀಮೇಲ್ ಹುಲಿ ಸಫಾರಿ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ನಡೆದು ಬರುವಾಗ ಹುಲಿ ಕುಂಟುತ್ತ ಸಾಗುವ ವೀಡಿಯೋ ವೈರಲ್ ಆಗಿದೆ.
ಸಫಾರಿ ರಸ್ತೆಯ ಬದಿಯ ಗುತ್ತಿಯಲ್ಲಿ ಹುಲಿ ಕಾಣಿಸಿಕೊಂಡ ದೃಶ್ಯವನ್ನು ಪ್ರವಾಸಿಗ ಬಂಕ್ ಮಾದಪ್ಪ ಮೊಬೈಲ್ ನಲ್ಲಿ ಸೆರೆ ಹಿಡಿಯುವ ಸಮಯದಲ್ಲಿ ಮತ್ತೊಂದು ಬದಿಯ ರಸ್ತೆಯಲ್ಲಿ ಸಫಾರಿ ಜೀಪು ಬರುವುದನ್ನು ಗಮನಿಸಿದ ಹುಲಿ ಕೆಲ ಕ್ಷಣ ನಿಂತ ಬಳಿಕ ಸಫಾರಿ ರಸ್ತೆಗೆ ಹುಲಿ ಕುಂಟುತ್ತ ಸಾಗಿದೆ.ಹುಲಿ ಕುಂಟುತ್ತ ಸಾಗುವ ವಿಷಯ ಅರಣ್ಯ ಇಲಾಖೆಗೆ ಗೊತ್ತಿದೆ. ಸ್ವಲ್ಪ ಕುಂಟುತ್ತ ನಡೆಯುತ್ತಿದೆ ಎಂದು ಬಂಡೀಪುರ ವಲಯ ಅರಣ್ಯಾಧಿಕಾರಿ ಮಹದೇವ್ ತಿಳಿಸಿದ್ದಾರೆ. ಸಫಾರಿಗೆ ತೆರಳುವ ಪ್ರವಾಸಿಗರಿಗೆ ಮುದ ನೀಡುವ ಮೂರ್ಕೆರೆ ಫೀಮೇಲ್ ಹೆಸರಿನ ಹುಲಿಗೆ ಅರಣ್ಯ ಇಲಾಖೆ ತಪಾಸಣೆ ನಡೆಸಿ ಚಿಕಿತ್ಸೆ ಕೊಡಿಸಲಿ ಎಂಬುದು ಸಾರ್ವಜನಿಕರ ಆಶಯ.