ಒಬ್ಬ ಯೋಧ ಹೇಗೆ ದೇಶಕ್ಕಾಗಿ ತನ್ನ ಕೊನೆಯ ಉಸಿರಿನವರೆಗೆ ಹೋರಾಡುತ್ತಾನೋ ಅದೇ ರೀತಿ ಒಬ್ಬ ಕ್ರೀಡಾಪಟು ತಾನು ಭಾಗವಹಿಸಿದ ಕ್ರೀಡೆಯಲ್ಲಿ ಸೋಲಿಗೆ ದೃತಿಗೆಡದೇ ಸೋಲೇ ಗೆಲುವಿನ ಮೆಟ್ಟಿಲು ಎಂದು ಭಾವಿಸಿ ಕ್ರೀಡೆಯನ್ನು ಪೂರ್ಣಗೊಳಿಸುವವನು ಮುಂದೆ ಉತ್ತಮ ಕ್ರೀಡಾ ಪಟುವಾಗುತ್ತಾನೆ ಎಂದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕ್ರೀಡೆಯಲ್ಲಿ ಸೋಲು- ಗೆಲುವನ್ನು ಸಮಾನವಾಗಿ ಸ್ವೀಕರಿಸಿದರೆ ಮಾತ್ರ ಜೀವನದಲ್ಲಿ ಉತ್ತಮ ಕ್ರೀಡಾಪಟು ಆಗಲು ಸಾಧ್ಯ ಎಂದು ಸಮಾಜ ಸೇವಕ ಆರ್ ಟಿ ಒ ಮಲ್ಲಿಕಾರ್ಜುನ್ ತಿಳಿಸಿದರು.

ಪಟ್ಟಣದ ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಕ್ರೀಡಾಂಗಣ ಆವರಣದಲ್ಲಿ ರಾಯಲ್ ಸ್ಪೋರ್ಟ್ಸ್ ಕ್ಲಬ್ ವ್ಯವಸ್ಥಾಪಕ ಹೊಸಹೊಳಲು ರಾಘವ ನೇತೃತ್ವದಲ್ಲಿ ನಡೆದ ಪ್ರೀಮಿಯರ್ ಲೀಗ್ ಸೀಸನ್- 2 ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ವಿಜೇತ ತಂಡಗಳಿಗೆ ಬಹುಮಾನ, ಟ್ರೋಫಿ ವಿತರಿಸಿ ಮಾತನಾಡಿದರು.

ಒಬ್ಬ ಯೋಧ ಹೇಗೆ ದೇಶಕ್ಕಾಗಿ ತನ್ನ ಕೊನೆಯ ಉಸಿರಿನವರೆಗೆ ಹೋರಾಡುತ್ತಾನೋ ಅದೇ ರೀತಿ ಒಬ್ಬ ಕ್ರೀಡಾಪಟು ತಾನು ಭಾಗವಹಿಸಿದ ಕ್ರೀಡೆಯಲ್ಲಿ ಸೋಲಿಗೆ ದೃತಿಗೆಡದೇ ಸೋಲೇ ಗೆಲುವಿನ ಮೆಟ್ಟಿಲು ಎಂದು ಭಾವಿಸಿ ಕ್ರೀಡೆಯನ್ನು ಪೂರ್ಣಗೊಳಿಸುವವನು ಮುಂದೆ ಉತ್ತಮ ಕ್ರೀಡಾ ಪಟುವಾಗುತ್ತಾನೆ ಎಂದರು.

ಕ್ರಿಕೆಟ್ ಇಂದು ದೇಶದ ಎಲ್ಲಾ ಕ್ರೀಡಾ ಪ್ರೇಮಿಗಳು ಇಷ್ಟಪಡುವ ಕ್ರೀಡೆ. ಇಲ್ಲಿಯೂ ಪಂದ್ಯಾವಳಿಗಳು ನಡೆಯುವುದರಿಂದ ಅನೇಕ ಕ್ರಿಕೆಟ್ ಪಟುಗಳ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಗಿದೆ. ತಾಲೂಕು ಅಲ್ಲದೆ ಹೊರಜಿಲ್ಲೆಯಿಂದ ಹತ್ತಾರು ಶ್ರೇಷ್ಠ ಕ್ರಿಕೆಟ್ ಆಟಗಾರರು ಇಂದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ ಎಂದರು.

ಕ್ರೀಡೆಗೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರವು ಕೋಟ್ಯಂತರ ಅನುದಾನ ನೀಡಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕ್ರೀಡೆಯನ್ನು ಆಯೋಜಿಸಿದ ಹೊಸಹೊಳಲು ರಾಘವ ಮಾಲೀಕತ್ವದ ರಾಯಲ್ ಸ್ಪೋರ್ಟ್ಸ್ ಕ್ಲಬ್ ವಿನ್ನರ್ ಆಗಿ 2 ಲಕ್ಷ ರು. ಬಹುಮಾನ, ಜೊತೆಗೆ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಸದ್ದಾಮ್ ಫ್ರೆಂಡ್ಸ್ 80 ಸಾವಿರ ನಗದು, ಜೊತೆಗೆ ಟ್ರೋಫಿ, ಮೂರನೇ ಸ್ಥಾನ ಶ್ರೀ ಕಿಕ್ಕೇರಮ್ಮ ಕ್ರಿಕೆಟರ್ಸ್ 40 ಸಾವಿರ ಜೊತೆಗೆ ಟ್ರೋಫಿ, ನಾಲ್ಕನೇ ಬಹುಮಾನ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಕ್ರಿಕೆಟರ್ಸ್ 30 ಸಾವಿರ ನಗದು, ಆಕರ್ಷಕ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.

ಈ ವೇಳೆ ಯುವ ಉದ್ಯಮಿ ವಾಸು, ರಾಯಲ್ ಸ್ಪೋರ್ಟ್ಸ್ ಕ್ಲಬ್ ವ್ಯವಸ್ಥಾಪಕ ಹೊಸ ಹೊಳಲು ರಾಘು, ಹೊಸಹೊಳಲು ಮಾರುತಿ ಯುವಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಯುವ ಮುಖಂಡ ಅಜಯ್ ಕುಮಾರ್, ಬಾಬು, ಕಾರ್ತಿಕ್, ಜೈಕುಮಾರ್, ಧನುಷ್ ಗೌಡ, ಅನಿಲ್, ಪುನೀತ್, ಸಾಗರ್, ಸೇರಿದಂತೆ ಕ್ರೀಡಾಭಿಮಾನಿಗಳಿದ್ದರು.