ಸಾರಾಂಶ
ಘಟಪ್ರಭಾಪುರಸಭೆ ಕಾರ್ಯಾಲಯ ಆವರಣದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಘಟಪ್ರಭಾ
ಪುರಸಭೆ ಕಾರ್ಯಾಲಯ ಆವರಣದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಆ.13 ರಿಂದ 15ರವರೆಗೆ ಮನೆ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಎಲ್ಲರೂ ಉತ್ಸಾಹದಿಂದ ಭಾಗಿಯಾಗಿ ದೇಶಕ್ಕೆ ಗೌರವ ಸಲ್ಲಿಸುವುದರ ಜೊತೆಗೆ ಭಾರತ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಂವಿಧಾನದ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ಎಂ.ಎಸ್. ಪಾಟೀಲ, ಹಿರಿಯರಾದ ಡಿ.ಎಂ. ದಳವಾಯಿ, ವಕೀಲ ಕೆಂಪಣ್ಣ ಚೌಕಶಿ, ಕಲ್ಲಪ್ಪ ಕೊಂಕಣಿ, ಮಲ್ಲು ಕೋಳಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಈರಗೌಡ ಕಲಕುಟಗಿ, ಸುರೇಶ ಪೂಜಾರಿ, ಸಲೀಂ ಕಬ್ಬೂರ್, ಇಮ್ರಾನ್ ಬಟಕುರ್ಕಿ, ಸುನಿಲ ನಾಯಕ್, ಶೇಖರ ಕುಲಗೋಡ, ವಕೀಲ ಅರವಿಂದ ಬಡಕುಂದ್ರಿ, ಕಾಡಪ್ಪ ಕರೋಶಿ, ಪರಶುರಾಮ ಗೋಕಾಕ, ಯಲ್ಲಪ್ಪ ಅಟಿಮಿಟ್ಟಿ, ಜಗದೀಶ ಕಟ್ಟಿಮನಿ ಹಾಗೂ ಮಾಜಿ ಸದಸ್ಯರು ಹಾಗೂ ಸಿಬ್ಬಂದಿ, ಸಾರ್ವಜನಿಕರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))