ಸಾರಾಂಶ
ಅಫಘಾತ: ದ್ವಿಚಕ್ರ ವಾಹನ ಸವಾರ ಸಾವು
ಕಡೂರು: ದ್ವಿಚಕ್ರ ವಾಹನ ಮತ್ತು ಬೊಲೆರೊ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಒಬ್ಬರು ಮೃತಪಟ್ಟಿರುವ ಘಟನೆ ಕಡೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಲೋಹಿತ್ ಮೃತ ದುರ್ದೈವಿ. ನ. 8 ರ ಬುಧವಾರ ಸಂಜೆ ತಾಲೂಕಿನ ಕಂಸಾಗರ ಗ್ರಾಮದಿಂದ ಲೋಹಿತ್ ತಮ್ಮ ಬೈಕಿನಲ್ಲಿ ಕಡೂರಿಗೆ ತೆರಳುತ್ತಿರುವ ವೇಳೆ ಪಟ್ಟಣಗೆರೆ ಸಮೀಪ ಕಡೂರು ಕಡೆಯಿಂದ ಚಿಕ್ಕಮಗಳೂರು ಕಡೆ ಹೋಗುತ್ತಿದ್ದ ಬೊಲೆರೋ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಲೋಹಿತ್ ಗಂಭೀರವಾಗಿ ಗಾಯಗೊಂಡಿದ್ದರು.ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ದಾಖಲಿಸಲಾಗಿತ್ತು. ಆದರೆ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ಲೋಹಿತ್ ಮೃತಪಟ್ಟಿದ್ದಾರೆ. ಈ ಬಗ್ಗೆ ಕಡೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.