ಅಂಕೋಲಾದಲ್ಲಿ ದೇವರ ಮೂರ್ತಿ ಕಳ್ಳತನ ಮಾಡಿದ ಆರೋಪಿಗಳ ಸೆರೆ

| Published : Dec 11 2024, 12:46 AM IST

ಅಂಕೋಲಾದಲ್ಲಿ ದೇವರ ಮೂರ್ತಿ ಕಳ್ಳತನ ಮಾಡಿದ ಆರೋಪಿಗಳ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಪಿಸಿಯಲ್ಲಿ ನೌಕರನಾಗಿರುವ ಕದ್ರಾದ ಕೆಪಿಸಿ ಕಾಲನಿಯ ಶ್ರೀನಿವಾಸ, ಅಶೋಕ ಬಂಡಿವಡ್ಡರ, ಮೌಲಾಲಿ ಸೈಯದ, ಮುಬಾರಕ ಶೇಖ್‌, ಎ.ಎಸ್. ಶೇಖ್ ಶರೀಫ್, ಅಬ್ದುಲ್ ರಹೀಮ್, ಫುರಖಾನ ಮೆಹಬೂಬಖಾನ ಬಂಧಿತ ಆರೋಪಿಗಳು.

ಅಂಕೋಲಾ: ದೇವರ ಕೋಣೆಯಲ್ಲಿದ್ದ ಹಿತ್ತಾಳೆ ಹಾಗೂ ಪಂಚಲೋಹದ ಮೂರ್ತಿಯನ್ನು ರಾತ್ರಿ ಹೊತ್ತು ಕದ್ದೊಯ್ದಿದ್ದ ಕಳ್ಳರ ತಂಡವನ್ನು ಪೊಲೀಸರು ಬಂಧಿಸಿ, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಾರು, ಬೈಕ್ ಹಾಗೂ ಮೂರ್ತಿಗಳನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ.

ಕೆಪಿಸಿಯಲ್ಲಿ ನೌಕರನಾಗಿರುವ ಕದ್ರಾದ ಕೆಪಿಸಿ ಕಾಲನಿಯ ಶ್ರೀನಿವಾಸ, ಅಶೋಕ ಬಂಡಿವಡ್ಡರ, ಮೌಲಾಲಿ ಸೈಯದ, ಮುಬಾರಕ ಶೇಖ್‌, ಎ.ಎಸ್. ಶೇಖ್ ಶರೀಫ್, ಅಬ್ದುಲ್ ರಹೀಮ್, ಫುರಖಾನ ಮೆಹಬೂಬಖಾನ ಬಂಧಿತ ಆರೋಪಿಗಳು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮೂರು ಕಾರು, ಒಂದು ಬೈಕ್ ಕೃತ್ಯಕ್ಕೆ ಬಳಸಿದ ವಾಹನಗಳಲ್ಲಿ ಒಟ್ಟು 16 ಹಿತ್ತಾಳೆಯ ನಮೂನೆಯ ದೇವರ ಮೂರ್ತಿಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೃತ್ಯ ನಡೆದ 24 ಗಂಟೆಯ ಒಳಗಾಗಿ ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಪ್ರಕರಣವನ್ನು ಭೇದಿಸಿದ್ದು, ಪತ್ತೆ ಕಾರ್ಯ ನಡೆದ ತಂಡವನ್ನು ಎಸ್ಪಿ ಎಂ. ನಾರಾಯಣ ಅಭಿನಂದಿಸಿದ್ದಾರೆ.ಪ್ರಕರಣ ಏನಾಗಿತ್ತು?

ಡಿ. 9ರ ತಡರಾತ್ರಿ 2.30 ಗಂಟೆಯ ನಡುವಿನ ಅವಧಿಯಲ್ಲಿ ಹಿಲ್ಲೂರು ಗ್ರಾಮದ ತಿಂಗಳಬೈಲ್‌ನಲ್ಲಿ ಮನೆ ಜನರು ಮನೆಯಲ್ಲಿ ಮಲಗಿರುವಾಗ, ಕಳ್ಳರು ಮನೆಯ ಒಳಗೆ ಪ್ರವೇಶಿಸಿ, ದೇವರ ಕೋಣೆಯ ಬೀಗ ಮುರಿದು ಹಿತ್ತಾಳೆಯ ಲೋಹದ ದೇವರ 47 ಮೂರ್ತಿಗಳನ್ನು ಕದ್ದೊಯ್ದಿದ್ದರು. ಇದರ ಮೌಲ್ಯ ₹1,3 ಲಕ್ಷ ಆಗಿತ್ತು.

ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಕಾರವಾರ: ತಾಲೂಕಿನ ಮಲ್ಲಾಪುರದಲ್ಲಿರುವ ಕೈಗಾ ಎನ್‌ಪಿಸಿಎಲ್ ವಸತಿ ಸಮುಚ್ಛಯದಲ್ಲಿ ಡಿ- 29ರ ಮನೆಯ ಬಾಗಿಲು ಒಡೆದು ಚೋರರು ಅಪಾರ ಪ್ರಮಾಣದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ.

ಉತ್ತರಕುಮಾರ ಎಂಬವರ ಮನೆ ಕಳ್ಳತನವಾಗಿದ್ದು, ಅಂದಾಜು ₹10 ಲಕ್ಷ ಬೆಲೆಯ ಚಿನ್ನಾಭರಣ ದೋಚಿದ್ದಾರೆ. ಮನೆ ಮಾಲೀಕರು ತಮ್ಮ ಸ್ವಂತ ಊರಾದ ಬಿಹಾರಕ್ಕೆ ತೆರಳಿದ್ದು, ಡಿ. ೯ರ ರಾತ್ರಿ ಕಳ್ಳತನವಾಗಿರಬಹುದು ಎಂದು ಅಂದಾಜಿಸಲಾಗಿದೆ. ನೆರೆ ಮನೆಯವರಾದ ಪ್ರವೀರಕುಮಾರ ಪ್ರಭಾಕರ ಸರಣಪ್ರಸಾದ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ಯಲ್ಲಾಪುರ: ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸಹಸ್ರಳ್ಳಿ ಗ್ರಾಮದ ರಾಮನಕೊಪ್ಪದಲ್ಲಿ ಮಂಗಳವಾರ ನಡೆದಿದೆ.ಅಭಿಷೇಕ ಶ್ರೀಕಾಂತ ಮರಾಠಿ(11) ಮೃತ ವಿದ್ಯಾರ್ಥಿ. ವಾಂತಿಯಾಗುತ್ತಿದೆ ಎಂದು ಶಾಲೆಗೆ ಹೋಗದೇ ಮನೆಯಲ್ಲಿದ್ದ ಈತ, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.