ರಾಮನಗರ: ಇಡೀ ಜಗತ್ತನ್ನೇ ಬದಲಾಯಿಸುವ ಮಾಂತ್ರಿಕ ಶಕ್ತಿ ಶಿಕ್ಷಣಕ್ಕೆ ಇದೆ. ವಿದ್ಯಾರ್ಥಿಗಳು ಶಿಕ್ಷಣ ಎಂಬ ಜ್ಞಾನದ ಸಂಪತ್ತು ಪಡೆದು ಸಾಧನೆಯತ್ತ ಹೆಜ್ಜೆ ಇಡಬೇಕು ಎಂದು ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.
ನಗರದ ರಾಯರದೊಡ್ಡಿಯಲ್ಲಿನ ಆರ್‌ವಿಸಿಎಸ್ ಸಭಾಂಗಣದಲ್ಲಿ ಲಿಂಗಾಯತ ಒಕ್ಕೂಟ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯ, ಜಗಜ್ಯೋತಿ ಬಸವೇಶ್ವರರು, ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರ ಸಂಸ್ಮರೋಣತ್ಸವ, ಜಿಲ್ಲಾಮಟ್ಟದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದುಕಿನಲ್ಲಿ ಶಿಕ್ಷಣದ ಅನಿವಾರ್ಯತೆ ಸೃಷ್ಟಿ ಮಾಡಿದೆ. ಒಬ್ಬ ವ್ಯಕ್ತಿ ನೆಮ್ಮದಿಯಾಗಿ ಬದುಕಲು ಶಿಕ್ಷಣ ಬೇಕಾಗಿದೆ ಎಂದರು.ಒಬ್ಬ ವ್ಯಕ್ತಿಯ ಚಾರಿತ್ರ್ಯ ನಿರ್ಮಾಣ ಮಾಡುವುದರಲ್ಲಿ, ಒಬ್ಬ ವ್ಯಕ್ತಿಯ ಸಾಮರ್ಥ್ಯ ಹೆಚ್ಚಿಸುವುದರಲ್ಲಿ, ಒಬ್ಬ ವ್ಯಕ್ತಿಯ ಉತ್ತಮವಾಗಿರತಕ್ಕಂತ ಭವಿಷ್ಯವನ್ನು ರೂಪಿಸುವುದರಲ್ಲಿ ಶಿಕ್ಷಣ ಅತ್ಯಂತ ಹೆಚ್ಚು ಮಹತ್ತರವಾಗಿದೆ. ಹಾಗಾಗಿ ಬದುಕಿನಲ್ಲಿ ಶಿಕ್ಷಣವೇ ಪ್ರಧಾನವಾಗಿದ್ದು ವಿದ್ಯಾರ್ಥಿಗಳು ಹಿರಿಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಹಡೆದ ತಂದೆ ತಾಯಿಗಳಿಗೆ ಕೀರ್ತಿ ತರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಡ್ಡದಾರಿಗೆಳೆಯುವ ಸಾಧನಗಳಿಗೆ ದಾಸರಾಗಬೇಡಿ :ಶಿವಗಂಗೆ ಮೇಲಣ ಗವೀಮಠಾಧ್ಯಕ್ಷ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿಭಾಂವತರಾಗಿರುವ ಕಾರಣ ನಿಮ್ಮನ್ನು ವಿಶ್ವ ವೀರಶೈವ ಲಿಂಗಾಯತ ಒಕ್ಕೂಟ ಪ್ರತಿಭಾ ಪುರಸ್ಕಾರದ ಅಭಿನಂದನೆ ಸಲ್ಲಿಸುತ್ತಿದೆ. ಹಿಂದೆ ಹತ್ತು ಇಪ್ಪತ್ತು ವರ್ಷದಲ್ಲಿ ವಿದ್ಯಾರ್ಥಿಗಳ ಮನಸ್ಸನ್ನು ಕೆಡಿಸುವಂತ ಸಾಧನಗಳು ಇರಲಿಲ್ಲ. ಆಗ ಪ್ರತಿಭಾವಂತರಾಗೋದು ಏನು ದೊಡ್ಡ ಮಾತಿರಲಿಲ್ಲ. ಇವತ್ತಿನ ದಿವಸ ವಿದ್ಯಾರ್ಥಿಗಳನ್ನು ಅಡ್ಡದಾರಿಗೆ ಎಳೆಯುವಂತ ನೂರಾರು ಸಾಧನಗಳಿವೆ. ಅವು ಯಾವುವು ಅಂತ ನಿಮಗೆ ಗೊತ್ತಾಗಿದೆ. ನೀವುಗಳು ಈಗಾಗಲೇ ಆ ಎಲ್ಲಾ ಸಾಧನಗಳನ್ನು ತಿರಸ್ಕಾರ ಮಾಡಿದ್ದಕ್ಕಾಗಿ ನಿಮಗೆ ಈದಿನ ಪುರಸ್ಕಾರ ಸಿಗುತ್ತಿದೆ ಎಂದರು.
ಆ ಸಾಧನಗಳಿಗೆ ನೀವು ದಾಸರಾಗಿದ್ದರೆ ಪರೀಕ್ಷೆಯಲ್ಲಿ ಪಾಸ್ ಕೂಡ ಆಗುತ್ತಿರಲಿಲ್ಲ. ಮುಂದೆ ನೀವು ಇನ್ನೂ ಹೆಚ್ಚು ಸಾಧನೆ ಮಾಡಿದರೆ ವಿಶ್ವವಿದ್ಯಾಲಯ ನಿಮ್ಮ ಕೊರಳಿಗೆ ಬಂಗಾರದ ಪದಕ ಕೊಡಬಹುದು. ಆದರೆ, ಎಚ್ಚರವಿರಲಿ ಬಂಗಾರ ಹುಡುಕಿಕೊಂಡು ಹೋದರೆ ನಿಮಗೆ ಬಂಗಾರ ಸಿಗುವುದಿಲ್ಲ. ನಿರಂತರವಾಗಿ ಅಭ್ಯಾಸ ಮಾಡಿದರೆ ಆ ಬಂಗಾರದ ಪದಕ ತಾನಾಗಿಯೇ ನಿಮ್ಮ ಕೊರಳಿಗೆ ಬರುತ್ತದೆ. ಅದು ನಿಜವಾದ ವಿದ್ಯಾರ್ಥಿಯ ಸಾಧನೆ ಎಂದು ಹೇಳಿದರು.
ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ಜಿಲ್ಲಾಧ್ಯಕ್ಷ ಪೋಲೀಸ್ ರುದ್ರೇಶ್ ಮಾತನಾಡಿ, ಜಗದ್ಗುರು ರೇಣುಕಾಚಾರ್ಯ, ಜಗಜ್ಯೋತಿ ಬಸವೇಶ್ವರರು, ಸಿದ್ದಗಂಗಾ ಮಠದ ನಡೆದಾಡುವ ದೇವರು ಶಿವಕುಮಾರ ಮಾಹಾಸ್ವಾಮೀಜಿಯವರ ಸಂಸ್ಮರೋಣತ್ಸವದ ಅಂಗವಾಗಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವೀರಶೈವ ಲಿಂಗಾಯಿತ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಹರಗುರು ಚರಮೂರ್ಥಿಗಳ, ಸಮಾಜದ ಹಿರಿಯರ, ಗಣ್ಯರ ಸಮ್ಮುಖದಲ್ಲಿ ನೆರವೇರಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.
ಬೆಂಗಳೂರು ಸಮಾಧಾನ ಮಠಾಧ್ಯಕ್ಷರಾದ ಮೌನತಪಸ್ವಿ ಜಡೇ ಶಾಂತಲಿಂಗಸ್ವಾಮೀಜಿ ಆಶೀರ್ವದಿಸಿದರು.ರಾಮನಗರ ತಾಲೂಕು ಯರೇಹಳ್ಳಿ ವನಸಿರಿ ಆಶ್ರಮದ ಶ್ರೀ ಶಂಕರ್ ಆರಾಧ್ಯ ಗುರೂಜಿ, ರಾಜ್ಯ ವೀರಶೈವ ಲಿಂಗಾಯಿತ ಒಕ್ಕೂಟದ ಅಧ್ಯಕ್ಷ ಜ್ಯೋತಿಪ್ರಕಾಶ ಮಿರ್ಜಿ, ಸೋಲೂರು ಎಂ.ಆರ್.ಆರ್. ನೇಚರ್ ಕ್ಯೂರ್ ಆರ್ಜಿಐ ಡಾ. ಆರ್. ಚೇತನ್ ಕುಮಾರ್, ವೈದ್ಯೆ ಡಾ. ಪುಣ್ಯವತಿ ನಾಗರಾಜ್, ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಮಾತನಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಾಧಿಕಾರ ಮಾಜಿ ಅಧ್ಯಕ್ಷರಾದ ಎಸ್.ಆರ್. ನಾಗರಾಜು, ರಾಜಶೇಖರ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷಸಬ್ಬಕೆರೆ ಶಿವಲಿಂಗಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ ಮುಖಂಡರಾದ ಎ.ಜೆ. ಸುರೇಶ್, ವೇದಮೂರ್ತಿ, ಗುರುಮಾದಯ್ಯ, ವಿದ್ವಾನ್ ಚಂದ್ರಶೇಖರಯ್ಯ, ಮಹದೇವಶಾಸ್ತ್ರಿ, ಕುಮಾರ್, ರಾಜಶೇಖರ್, ಶಿವಲಿಂಗಪ್ರಸಾದ್, ಮಂಜುನಾಥ್, ಎಂ. ರೇವಣ್ಣ, ಉಮೇಶ್, ಶಿವಸ್ವಾಮಿ, ಪ್ರಭು, ಸಿದ್ದಲಿಂಗಮೂರ್ತಿ, ಶಿವಸ್ವಾಮಿ, ರವಿ, ವಿಜಯಕುಮಾರ್, ಸರ್ವೇಶ್, ಚಂದ್ರಣ್ಣ, ಸುಧಾ, ದೇವರಾಜು, ಯಶೋಧ ಉಪಸ್ಥಿತರಿದ್ದರು.ಕೋಟ್ .........
ಜಗಜ್ಯೋತಿ ಬಸವೇಶ್ವರರು, ಶ್ರೀ ರೇಣುಕಾಚಾರ್ಯರು ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಆದರ್ಶ ಪುರುಷರು. ಈ ಮೂವರು ಶ್ರೀಗಳ ಮೌಲ್ಯಗಳು ನಮ್ಮ ಬದುಕಿಗೆ ಆದರ್ಶವಾಗಿವೆ. ವಿದ್ಯಾರ್ಥಿಗಳು ಇಂತಹ ಮಹಾನ್ ಪುರಷರ ಮೌಲ್ಯಗಳು ಆದರ್ಶಗಳನ್ನು ಮೈಗೂಡಿಸಿಕೊಂಡು ಸದಾ ಅವರ ಆಶೀರ್ವಾದಲ್ಲಿ ಬದುಕು ನಡೆಸಬೇಕು.- ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠ
18ಕೆಆರ್ ಎಂಎನ್ 7.ಜೆಪಿಜಿರಾಮನಗರದ ರಾಯರದೊಡ್ಡಿಯಲ್ಲಿನ ಆರ್.ವಿ.ಸಿಎಸ್. ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಜಿಲ್ಲಾಮಟ್ಟದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.