ಸುರ್ಯ ದೇವಸ್ಥಾನಕ್ಕೆ ನಟ ರಕ್ಷಿತ್ ಶೆಟ್ಟಿ

| Published : Mar 27 2024, 01:06 AM IST

ಸುರ್ಯ ದೇವಸ್ಥಾನಕ್ಕೆ ನಟ ರಕ್ಷಿತ್ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ನಡ ಗ್ರಾಮದ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಬೆಳ್ತಂಗಡಿ: ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್‌ ಶೆಟ್ಟಿ ಮಣ್ಣಿನ ಹರಕೆ ಖ್ಯಾತಿಯ ನಡ ಗ್ರಾಮದ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತಸರ ಡಾ. ಸತೀಶ್ಚಂದ್ರ ಸುರ್ಯಗುತ್ತು ರಕ್ಷಿತ್ ಶೆಟ್ಟಿ ಅವರಿಗೆ ದೇವಸ್ಥಾನದ ವತಿಯಿಂದ ಗೌರವ ಸಲ್ಲಿಸಿ ಶುಭ ಹಾರೈಸಿದರು. ಡಾ. ಸಂಪ್ರತಿ ವೈಶಾಖ್ ಸುರ್ಯ ಗುತ್ತು, ಶಶಿಧ‌ರ್ ಶೆಟ್ಟಿ ಬರೋಡಾ , ರವಿ ಚಕ್ಕಿತ್ತಾಯ ಮತ್ತಿತರರು ಉಪಸ್ಥಿತರಿದ್ದರು.