ನಗರದ ಹೃದಯ ಭಾಗದಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ಅಂಬೇಡ್ಕರ್ ಭವನಕ್ಕೆ ಹೆಚ್ಚುವರಿಯಾಗಿ ₹3 ಕೋಟಿ ಅನುದಾನ ಕೊಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹರಿಹರದಲ್ಲಿ ಭರವಸೆ ನೀಡಿದರು.
- ಭೂಮಿಪೂಜೆ ನೆರವೇರಿಸಿದ ಸಚಿವ । ಅಂಬೇಡ್ಕರ್ ಆಶಯದಂತೆ ಈ ಭವನ ಇರಬೇಕು
- - -ಕನ್ನಡಪ್ರಭ ವಾರ್ತೆ ಹರಿಹರ
ನಗರದ ಹೃದಯ ಭಾಗದಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ಅಂಬೇಡ್ಕರ್ ಭವನಕ್ಕೆ ಹೆಚ್ಚುವರಿಯಾಗಿ ₹3 ಕೋಟಿ ಅನುದಾನ ಕೊಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಭರವಸೆ ನೀಡಿದರು.ನಗರದ ಹಳೇ ಕೋರ್ಟ್ ಸ್ಥಳದಲ್ಲಿ ಮಂಗಳವಾರ ನಡೆದ ಅಂಬೇಡ್ಕರ್ ಭವನದ ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದರು. ಭವನ ನಿರ್ಮಾಣಕ್ಕೆ ಈಗಾಗಲೇ ₹2 ಕೋಟಿ ಅನುದಾನ ಮೀಸಲಿರಿಸಿದ್ದು, ₹50 ಲಕ್ಷ ಬಿಡುಗಡೆಯಾದ ಮಾಹಿತಿಯಿದೆ. ಆದರೆ, ಇಷ್ಟರಲ್ಲಿ ಸುಸಜ್ಜಿತ ಹಾಗೂ ವ್ಯವಸ್ಥಿತವಾಗಿ ನಿರ್ಮಾಣ ಮಾಡಲು ಅಸಾಧ್ಯ. ಸರ್ಕಾರದಿಂದ ಹೆಚ್ಚುವರಿಯಾಗಿ ₹3 ಕೋಟಿ ಅನುದಾನ ಕೋಡಿಸುತ್ತೇನೆ ಎಂದು ಭರವಸೆ ನೀಡಿದರು.
ಸ್ಥಳಕ್ಕೆ ಎಂಜಿನಿಯರ್ ಅವರನ್ನು ಕರೆಸಿ ಈ ಭವನದ ಸಂಪೂರ್ಣ ಮಾಹಿತಿಯನ್ನು ತೆಗೆದುಕೊಂಡು ಕಚೇರಿಗೆ ಬನ್ನಿ. ಪರಿಶೀಲಿಸಿದ ಬಳಿಕ ಸುಂದರ ಹಾಗೂ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳೊಣ ಎಂದು ಸೂಚನೆ ನೀಡಿದರು.ಅಂಬೇಡ್ಕರ್ ಆಶಯದಂತೆ ಈ ಭವನ ನಿರ್ಮಾಣವಾಗಬೇಕು. ಅಲ್ಲದೇ ಎಲ್ಲ ವರ್ಗದವರು ಇದರ ಉಪಯೋಗ ಪಡೆಯುವಂತಾಗಬೇಕು. ಆಗ ಈ ಭವನ ನಿರ್ಮಾಣ ಕಾರ್ಯ ಸಾರ್ಥಕವಾಗುತ್ತದೆ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳು ಜನಸಮಾನ್ಯರ ಬದುಕಲ್ಲಿ ಬೆಳಕನ್ನು ಮೂಡಿಸಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನುಡಿದಂತೆ ನಡೆದ ಸರ್ಕಾರ ದೇಶದಲ್ಲಿ ನಮ್ಮದೇ ಎಂದರು.
ಪೌರಕಾರ್ಮಿಕರ ಕೋರಿಕೆ:ಪೌರಕಾರ್ಮಿಕರಿಗೆ ನಿವೇಶನವಿಲ್ಲ ಸಾರ್ ಅದನ್ನು ನೇರವೇರಿಸಿ ಎಂದು ಪೌರಕಾರ್ಮಿಕರ ಕೇಳಿದರು. ಆಗ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ನೀಡುವ ಕೆಲಸವನ್ನು ಕ್ಷೇತ್ರದ ಶಾಸಕರು ಗಮನಹರಿಸಬೇಕು. ಆದರೆ, ನಿಮ್ಮ ಶಾಸಕರಿಗೆ ನಮ್ಮನ್ನು ತೆಗಳುವುದೇ ಕಾಯಕವಾಗಿದೆ. ನಮ್ಮ ಕಚೇರಿಗೆ ಬನ್ನಿ, ಪರೀಶಿಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಮಾಜಿ ಶಾಸಕ ಎಸ್.ರಾಮಪ್ಪ, ಮರಾಠ ಅಭಿವೃದ್ಧಿ ನಿಗಮ ಅಧ್ಯಕ್ಷ ಮರಿಯೋಜಿ ರಾವ್, ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಜಿ.ಬಿ. ಹಾಲೇಶ್ ಗೌಡ್ರು, ಬಿ.ಎಂ.ವಾಗೀಶ್ ಸ್ವಾಮಿ, ನಿಖಿಲ್ ಕೊಂಡಜ್ಜಿ, ಎಲ್.ಬಿ.ಹನುಮಂತಪ್ಪ, ವಿವಿಧ ಮುಖಂಡರು ಉಪಸ್ಥಿತರಿದ್ದರು.- - -
(ಬಾಕ್ಸ್) * ಸಂವಿಧಾನದ ಸರ್ವಕಾಲಕ್ಕೂ ಅಜರಾಮರ: ಡಾ. ಪ್ರಭಾಹರಿಹರ: ಸಮಾಜದಲ್ಲಿನ ಜಾತಿ ವ್ಯವಸ್ಥೆ, ಶೋಷಣೆ, ಮಹಿಳಾ ಸಬಲೀಕರಣ ಹಾಗೂ ಸಮಾನತೆಯನ್ನು ಗಮನದಲ್ಲಿಟ್ಟುಕೊಂಡು ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಸರ್ವಕಾಲಕ್ಕೂ ಅಜರಾಮರ ಎಂದು, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಹೇಳಿದರು. ಡಾ. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಸಂವಿಧಾನಶಿಲ್ಪಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಮಹಿಳಾ ಮೀಸಲಾತಿ ಕಾನೂನು-2023 ರಲ್ಲೇ ಸರ್ವಪಕ್ಷದ ಬೆಂಬಲದೊಂದಿಗೆ ರಚನೆಯಾಗಿದೆ. ಅದನ್ನ ಈಗಿನ ಪ್ರಧಾನಿ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ ಬದಲಾಯಿಸಿ ಅದಕ್ಕೊಂದು ಹೊಸ ಹೆಸರನ್ನ ಇಟ್ಟು, ನಾರಿಶಕ್ತಿ, ವಂದನಾ ಅಧಿನಿಯಮ ಎಂದು ಬದಲಾಹಿಸಿ ಕಳೆದ ಏಪ್ರಿಲ್‌ನಲ್ಲಿ ಕರೆದಿದ್ದ ಅಧಿವೇಶನದಲ್ಲಿ, ಮುಂದಿನ 2029ರ ಲೋಕ ಸಭಾ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಮಹಿಳಾ ಮೀಸಲಾತಿ ಬಿಲ್ ಜೊತೆ, ಡಿ ಲಿಮಿಟೆಷನ್ ಬಿಲ್ ಸೇರಿಸಿ ಪಾಸ್ ಮಾಡಲು ಹೊರಟಿದ್ದರು ಎಂದರು. ಬಿಜೆಪಿಯವರು ಅದು ಪಾಸ್ ಅದ್ರೆ ಅದರ ಶ್ರೇಯಸ್ಸು ನಾವು ತಗೋಬೇಕು. ಫೇಲಾದ್ರೆ ಕಾಂಗ್ರೆಸ್‌ಗೆ ಮಹಿಳಾ ವಿರೋಧಿಪಟ್ಟ ಕಟ್ಟಬೇಕು ಅನ್ನೋ ಹುನ್ನಾರ ನಡೆಸಿದ್ದರು. ಅದು ಈಗ ಬಿಜೆಪಿಯವರ ಹುನ್ನಾರ ಎಂದು ಜಗಜ್ಜಾಹೀರಾಗಿದೆ ಎಂದು ಟೀಕಿಸಿದರು.- - --28HRR01:
ಹರಿಹರ ನಗರದ ಹಳೇ ಕೋರ್ಟ್ ಸ್ಥಳದಲ್ಲಿ ನಿರ್ಮಾಣ ಆಗುತ್ತಿರುವ ಅಂಬೇಡ್ಕರ್ ಭವನದ ಭೂಮಿ ಪೂಜೆಯನ್ನು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನೇರವೇರಿಸಿದರು, ಎಸ್.ರಾಮಪ್ಪ, ನಂದಿಗಾವಿ ಶ್ರಿನಿವಾಸ್ ಹಾಗೂ ಇತರರಿದ್ದರು.- - -
(** ಡಾ.ಪ್ರಭಾ ಫೋಟೋ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಬಹುದು) -28HRRA: ಹರಿಹರದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ವೇದಿಕೆಯಲ್ಲಿ ಮಾತನಾಡಿದರು.