ಗಾಂಧಿಯವರ ಪ್ರತಿಮೆಯನ್ನು ಎಲ್ಲಡೆ ನಿಲ್ಲಿಸಿದ್ದೇವೆ. ಅಂತೆಯೇ ಅವರ ತತ್ವಾದರ್ಶಗಳನ್ನು ಆಚರಣೆಯಲ್ಲಿ ನಿಲ್ಲಿಸಿದ್ದೇವೆ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಬೇಸರಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಗಾಂಧಿಯವರ ಪ್ರತಿಮೆಯನ್ನು ಎಲ್ಲಡೆ ನಿಲ್ಲಿಸಿದ್ದೇವೆ. ಅಂತೆಯೇ ಅವರ ತತ್ವಾದರ್ಶಗಳನ್ನು ಆಚರಣೆಯಲ್ಲಿ ನಿಲ್ಲಿಸಿದ್ದೇವೆ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಬೇಸರಿಸಿದರು.

ಪಟ್ಟಣದ ಟಿ.ವಿ.ವಿ.ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ನೋಟು,ನಾಣ್ಯ,ಅಂಚೆ ಚೀಟಿಯಲ್ಲಿ ಮುಖ ಮುದ್ರೆ ಅವರ ವಿಚಾರ ಧಾರೆಗಳಿಗೆ ಕುಂಭಕರ್ಣ ನಿದ್ರೆ, ರಸ್ತೆ, ಬಡಾವಣೆ, ಭವನ, ಬಜಾರ್‌ಗೆ ಹೆಸರಿಟ್ಟಿದ್ದೇವೆ. ಅವರಿವರು ಇವರ ಹೆಸರನ್ನು ಚಿಂತೆಗಳ ವಿರುದ್ಧ ಮಾತನಾಡಿ, ಪುಕ್ಕಟ್ಟೆ ಪ್ರಚಾರ ಪ್ರಸಿದ್ಧಿ ಪಡೆದು ಕೊಳ್ಳುತ್ತಿದ್ದಾರೆ. ಗಾಂಧಿ ಅವರು, ಪರ ಧರ್ಮ ಸಹಿಷ್ಣತೆ ವಿವಿಧ ಧರ್ಮಗಳ ಸಮಾನತೆಯಲ್ಲಿ ಬಹು ಸಂಸ್ಕೃತಿಯ ಆದರ್ಶ ಕಂಡವರು ಎಂದರು.

ರಾಷ್ಟ್ರಪಿತ ಮಹಾತ್ಮಗಾಂಧಿ ಹಂತಕನ ಗುಂಡಿಗೆ ಬಲಿಯಾದ ಕರಾಳ ದಿನ. ಈ ದಿನವನ್ನು ಹುತಾತ್ಮರ , ಸರ್ವೋದಯ ದಿನ ಮತ್ತು ಕುಷ್ಠರೋಗ ನಿವಾರಣಾ ಹೀಗೆ ತ್ರಿವಳಿ ದಿನವನ್ನಾಗಿ ಆಚರಿಸುತ್ತೇವೆ.. ಸ್ವಾತಂತ್ರ್ಯ ಹೋರಾಟದಲ್ಲಿ ಅಸಂಖ್ಯಾತರು ಹುತಾತ್ಮರಾದರು. ಕೆಲವು ಪ್ರಸಿದ್ಧರು ಇತಿಹಾಸದಲ್ಲಿ ದಾಖಲಾದರು. ಲಕ್ಷಾಂತರ ಮಂದಿ ದಾಖಲಾಗದವರನ್ನು ಸ್ಮರಿಸಿ ಕೃತಜ್ಞತೆ ಗೌರವ ತೋರುವುದು ಭಾರತೀಯರ ನೈತಿಕ ಕರ್ತವ್ಯ ಎಂದರು. ಭಾರತದ ಗಾಳಿ, ಬೆಳಕು, ನೆಲ, ಜಲದಲ್ಲಿ ಗಾಂಧಿ ಬೆರೆತು ಹೋಗಿದ್ದು ,ಗಾಂಧಿ ವ್ಯಕ್ತಿಯಾಗಿ ಕಾಣುವುದಕ್ಕಿಂತ ಈ ದೇಶದ ಸ್ವಾತಂತ್ರ್ಯದ ಅಂತರಗಂದ ಶಕ್ತಿಯಾಗಿ ಗುರುತಿಸಬೇಕು ಎಂದರು.

ಟಿವಿವಿ ಪಪೂ ಕಾಲೇಜು ಪ್ರಾಂಶುಪಾಲ ಹನುಮಂತರಾಯಪ್ಪ ಮಾತನಾಡಿ, ಗಾಂಧಿಜೀ ವಿನೋಭ ಭಾವೆ ,ಜೆಪಿ ಅವರ ಸರ್ವೋದಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಉಪನ್ಯಾಸಕಿಯರಾದ ವಾಣಿ,ಮನಸ್ವಿನಿ,ಇಂದು ಗಾಂಧಿ ವಿಚಾರ ಎಷ್ಟು ಪ್ರಸ್ತುತ ಎಂದು ತಮ್ಮ ಅಭಿಪ್ರಾಯ ಮಂಡಿಸಿದರು.

ಕಾರ್ಯಕ್ರಮದಲ್ಲಿ ಗೋಪಾಲ, ದಾಸಪ್ಪ, ವಿದ್ಯಾರ್ಥಿಗಳಾದ ಗಾಯಿತ್ರಿ, ತ್ರಿವೇಣಿ, ಜಮುನಾ , ವರಲಕ್ಷ್ಮೀ, ಶ್ವೇತಾ, ಲತಾಶ್ರೀ, ಲಿಖಿತ, ಕುಷ್ಠ ರೋಗ ನಿವಾರಣೆ ಕುರಿತು ಸಂವಾದ ನಡೆಸಿದರು.ಹುತಾತ್ಮರಿಗೆ 2 ನಿಮಿಷ ಮೌಲ ಆಚರಿಸಿ ಗೌರವ ಸಲ್ಲಿಸಲಾಯಿತು.