ಅಂಬೇಡ್ಕರ್ ಜೀವನ ಚರಿತ್ರೆಯನ್ನು ಸಮಗ್ರ ಅಧ್ಯಯನ ಮಾಡಿದರೆ, ಸಮಾಜ ಒಡೆಯುವವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂಬ ಕಾರಣಕ್ಕಾಗಿ ತಮಗೆ ಬೇಕಾದಷ್ಟು ಮಾತ್ರ ಅವರ ಚರಿತ್ರೆಯನ್ನು ಸಮಾಜಕ್ಕೆ ತಿಳಿಸುವ ಕೆಲಸ ಆಗುತ್ತಿದೆ. ಆ ಮೂಲಕ ಸಮಾಜವನ್ನು ವೋಟ್‌ ಬ್ಯಾಂಕ್ ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಹುಬ್ಬಳ್ಳಿ:

ಶಾಲಾ- ಕಾಲೇಜು, ವಿಚಾರ ಸಂಕಿರಣ ಸೇರಿದಂತೆ ಇತರೆಡೆ ತಮಗೆ ಬೇಕಾದಂತೆ ಡಾ. ಬಿ.ಆರ್. ಅಂಬೇಡ್ಕರ್ ಜೀವನ ಚರಿತ್ರೆ ಹೇಳುವ ಮೂಲಕ ಅವರ ಹೆಸರನ್ನು ಸಮಾಜ ಒಡೆಯಲು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಹಿಂದೂ ಸಮಾಜ ತನ್ನ ಮಹಾಪುರುಷರ ಬಗ್ಗೆ ಸ್ಥೂಲವಾದ ಅಧ್ಯಯನ ಮಾಡಿ ಅವರನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕೆಂದು ಆರ್‌ಎಸ್‌ಎಸ್‌ ವಕ್ತಾರ ರವೀಂದ್ರ ಜಿ. ಹೇಳಿದರು.

ಇಲ್ಲಿನ ಅರವಿಂದ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಘಟಕದಿಂದ ಭಾನುವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ 135ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಜೀವನ ಚರಿತ್ರೆಯನ್ನು ಸಮಗ್ರ ಅಧ್ಯಯನ ಮಾಡಿದರೆ, ಸಮಾಜ ಒಡೆಯುವವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂಬ ಕಾರಣಕ್ಕಾಗಿ ತಮಗೆ ಬೇಕಾದಷ್ಟು ಮಾತ್ರ ಅವರ ಚರಿತ್ರೆಯನ್ನು ಸಮಾಜಕ್ಕೆ ತಿಳಿಸುವ ಕೆಲಸ ಆಗುತ್ತಿದೆ. ಆ ಮೂಲಕ ಸಮಾಜವನ್ನು ವೋಟ್‌ ಬ್ಯಾಂಕ್ ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದನ್ನು ಅರಿತುಕೊಳ್ಳಬೇಕಿದೆ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ನಿತೀನ್ ನಭಿ ನೇತೃತ್ವದಲ್ಲಿ ಡಾ. ಅಂಬೇಡ್ಕರ್ ಅವರ ಜೀವನ ಚರಿತ್ರೆ ಸಾರುವ ನಿಟ್ಟಿನಲ್ಲಿ ಮೂರು ಬಗೆ ಕಾರ್ಯಕ್ರಮ ಹಮ್ಮಿಕೊಂಡು ಗೌರವ ಸಲ್ಲಿಸಲ್ಲಿಸಲಾಗುತ್ತಿದೆ ಎಂದು ಹೇಳಿದರು.

ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಜ್ಯೋತಿ ಪಾಟೀಲ, ಮಾಜಿ ಶಾಸಕ ಅಶೋಕ ಕಾಟವೆ, ಡಾ. ಕ್ರಾಂತಿಕಿರಣ, ವಸಂತ ನಾಡಜೋಶಿ, ಜಯತೀರ್ಥ ಕಟ್ಟಿ, ಲಿಂಗರಾಜ ಪಾಟೀಲ, ಮಹೇಂದ್ರ ಕೌತಾಳ, ಎಸ್ಸಿ ಮೋರ್ಚಾ ಅಧ್ಯಕ್ಷ ಹನುಮಂತ ಹರಿವಾಣ, ಅಶೋಕ ವಾಲ್ಮೀಕಿ, ಮಣಿಕಂಠ ಶ್ಯಾಗೋಟಿ, ವೆಂಟಕೇಶ ಕಾಟವೆ, ಮಾರುತಿ ಚಾಕಲಬ್ಬಿ, ವೆಂಕಟೇಶ ಮೇಸಿ, ಪ್ರವೀಣ ಹುರಳಿ, ವಿಜಯ ಗುಂಟ್ರಾಳ, ಶಶಿಕಾಂತ ಬಿಜವಾಡ, ಪ್ರಕಾಶ ಕ್ಯಾರಕಟ್ಟಿ, ಲಕ್ಷ್ಮಣ ಬೀಳಗಿ, ದುರ್ಗಮ್ಮ ಬಿಜವಾಡ, ಅರುಣ ಹುಟಗಿ, ರಾಜು ಕೊರ್ಯಾಣಮಠ ಸೇರಿದಂತೆ ಹಲವರಿದ್ದರು.