ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಹಾಕಿ ಕಪ್ ನ ಬುಧವಾರ ನಡೆದ ಪಂದ್ಯದಲ್ಲಿ ಅಂಜಪರವಂಡ, ಮುಕ್ಕಾಟಿರ, ಚಂಗುಲಂಡ ತಂಡಗಳು ಗೆಲುವು ಸಾಧಿಸಿತು.ಅಂಜಪರವಂಡ ಮತ್ತು ತಿರುಟೆರ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಅಂಜಪರವಂಡ ಜಯ ಸಾಧಿಸಿತು. ಕೊಚ್ಚೆರ ಮತ್ತು ಮುಕ್ಕಾಟಿರ (ಬೋಂದ) ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಮುಕ್ಕಾಟಿರ ತಂಡ ಗೆಲುವು ದಾಖಲಿಸಿತು.
ಚೋಳಂಡ ಮತ್ತು ಬೊಳ್ಳೆರ ನಡುವಿನ ಪಂದ್ಯದಲ್ಲಿ ನಿಗಧಿತ ಅವಧಿಯಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 4-2 ಗೋಲುಗಳ ಅಂತರದಲ್ಲಿ ಬೊಳ್ಳೆರ ತಂಡ ಗೆಲುವು ದಾಖಲಿಸಿತು.ಮಾತಂಡ ಮತ್ತು ಚಂಗುಲಂಡ ತಂಡಗಳ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಚಂಗುಲಂಡ ತಂಡ ಜಯ ಸಾಧಿಸಿತು. ಮಂಡೇಟಿರ ಮತ್ತು ಮೇಚಂಡ ನಡುವಿನ ಪಂದ್ಯದಲ್ಲಿ 4-2 ಗೋಲುಗಳ ಅಂತರದಲ್ಲಿ ಮಂಡೇಟಿರ ತಂಡ ಗೆಲುವು ಸಾಧಿಸಿತು.ಕೋಡಿಮಣಿಯಂಡ ಮತ್ತು ಮಾದಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ತಲಾ 1 ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 7-6 ಗೋಲುಗಳ ಅಂತರದಲ್ಲಿ ಮಾದಂಡ ತಂಡ ಗೆಲುವು ದಾಖಲಿಸಿತು.
ಅಮ್ಮಣಿಚಂಡ ಮತ್ತು ಕುಟ್ಟಂಡ (ಕಾರ್ಮಾಡ್) ನಡುವಿನ ಪಂದ್ಯದಲ್ಲಿ ಅಮ್ಮಣಿಚಂಡ ತಂಡ 4-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಚಿಲ್ಲವಂಡ ಮತ್ತು ಬೊಳಕಾರಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಬೊಳಕಾರಂಡ ಜಯ ಸಾಧಿಸಿತು. ಅಜ್ಜಮಾಡ ಮತ್ತು ಕಂಜಿತಂಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಅಜ್ಜಮಾಡ ತಂಡ ಗೆಲುವು ದಾಖಲಿಸಿತು.ಪೊನ್ನಿಮಾಡ ಮತ್ತು ಕೊಟ್ಟಂಗಡ ನಡುವಿನ ಪಂದ್ಯದಲ್ಲಿ 7-0 ಗೋಲುಗಳ ಅಂತರದಲ್ಲಿ ಕೊಟ್ಟಂಗಡ ತಂಡ ಗೆಲುವು ದಾಖಲಿಸಿತು. ಮೇರಿಯಂಡ ಮತ್ತು ಬೊಳ್ಳಚಂಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಮೇರಿಯಂಡ ಜಯ ಸಾಧಿಸಿತು. ಕುಟ್ಟಂಡ (ಅಮ್ಮತ್ತಿ) ಮತ್ತು ಕನ್ನಂಬೀರ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕುಟ್ಟಂಡ ಗೆಲುವು ದಾಖಲಿಸಿತು.
ನಂದೇಟಿರ ಮತ್ತು ನಾಗಂಡ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ನಾಗಂಡ ವಿಜಯ ಸಾಧಿಸಿತು. ಕಲಿಯಾಟಂಡ ಮತ್ತು ಚೇರಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕಲಿಯಾಟಂಡ ತಂಡ ಜಯ ಸಾಧಿಸಿತು. ಐತಿಚಂಡ ಮತ್ತು ಅಮ್ಮಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳ ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 11-10 ಗೋಲುಗಳ ಅಂತರದಲ್ಲಿ ಅಮ್ಮಂಡ ತಂಡ ಗೆಲುವು ದಾಖಲಿಸಿತು. ಬಾರಿಯಂಡ ಮತ್ತು ಮಾಳೇಟಿರ (ಕೆದಮಳ್ಳೂರು) ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಮಾಳೇಟಿರ ತಂಡ ಗೆಲುವು ಸಾಧಿಸಿತು.ಸುಳ್ಳಿಮಾಡ ಮತ್ತು ಮತ್ರಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಮತ್ರಂಡ ತಂಡ ಜಯ ಸಾಧಿಸಿತು. ಮತ್ರಂಡ ಪರ ವಿಶಾಲ್ 2 ಗೋಲು ದಾಖಲಿಸಿದರು. ಸುಳ್ಳಿಮಾಡ ಮಂಜು ತಮ್ಮಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೊಕ್ಕಂಡ ಮತ್ತು ಚೋಡುಮಾಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಚೋಡುಮಾಡ ಗೆಲುವು ದಾಖಲಿಸಿತು.