ಸಾರಾಂಶ
ಬಸವಣ್ಣ ಅಸಮಾನತೆ, ಅಹಂಕಾರ, ಆಡಂಬರ ಶೋಷಣೆಗಳ ವಿರುದ್ದ ವಚನ ಕ್ರಾಂತಿ ಮಾಡಿದ್ದರು. ಅನುಭವ ಮಂಟಪವೆಂಬ ಮಹಾ ವಿಶ್ವ ವಿದ್ಯಾನಿಲಯವನ್ನು ಸ್ಥಾಪಿಸಿ ವಿಶ್ವದಲ್ಲೇ ವಿರಾಜಿಸಿದರು ಎಂದು ಪ್ರಾಂಶುಪಾಲ ಪ್ರದೀಪ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಬಸವಣ್ಣ ಅಸಮಾನತೆ, ಅಹಂಕಾರ, ಆಡಂಬರ ಶೋಷಣೆಗಳ ವಿರುದ್ದ ವಚನ ಕ್ರಾಂತಿ ಮಾಡಿದ್ದರು. ಅನುಭವ ಮಂಟಪವೆಂಬ ಮಹಾ ವಿಶ್ವ ವಿದ್ಯಾನಿಲಯವನ್ನು ಸ್ಥಾಪಿಸಿ ವಿಶ್ವದಲ್ಲೇ ವಿರಾಜಿಸಿದರು ಎಂದು ಪ್ರಾಂಶುಪಾಲ ಪ್ರದೀಪ್ ತಿಳಿಸಿದರು.ನಗರದ ಟೈಮ್ಸ್ ಪಿಯು ಕಾಲೇಜಿನಲ್ಲಿ ಬಸವೇಶ್ವರ ಜಯಂತಿ ಆಚರಿಸಿ ಮಾತನಾಡಿದರು. ಪ್ರಸ್ತುತ ಸನ್ನಿವೇಶದಲ್ಲಿ ಬಸವಣ್ಣನವರಿಗೆ ನುಡಿನಮನ ಸಲ್ಲಿಸುವುದಕ್ಕಿಂತ ಹೆಚ್ಚಾಗಿ ಅವರ ಆದರ್ಶ ಹಾಗೂ ಮೌಲ್ಯಗಳನ್ನ ಇಟ್ಟುಕೊಂಡು ಬದುಕಿನಲ್ಲಿ ಜಾರಿಗೆ ಬರುವುದು ಶ್ರೇಷ್ಠಕರ. ಬಸವಾದಿ ಶರಣರು ತಮ್ಮ ಅನುಭವದ ನೆಲೆಯಲ್ಲಿ ರಚಿಸಿದ್ದ ವಚನಗಳನ್ನ ಮೆಲುಕು ಹಾಕುತ್ತ ಜಯಂತಿಗಳನ್ನ ಆಚರಿಸಿದರೆ ಸಾಲದು. ಬದಲಾಗಿ ಅವರ ಜೀವನದ ಆದರ್ಶ ಮೌಲ್ಯಗಳನ್ನು ಮತ್ತು ಸಿದ್ಧಾಂತಗಳನ್ನ ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸುಧಾರಣೆಯ ಪ್ರಯತ್ನ ಮಾಡಬೇಕು. ಇಂತಹ ಮಹಾನ್ ನಾಯಕ ಆದರ್ಶಗಳು ನಮಗೆ ದಾರಿ ದೀಪವಾಗಿವೆ ಎಂದರು.ಆಡಳಿತಾಧಿಕಾರಿ ಅನೂಪ್ ಮಾತನಾಡಿ, ಬಸವಣ್ಣನವರ ಜಯಂತಿಯಂದು ಮಾತ್ರ ಅವರನ್ನು ನೆನಪಿಸಿಕೊಳ್ಳದೆ ತಮ್ಮ ಬದುಕಿನಲ್ಲಿ ಬಸವಣ್ಣ ಅವರ ತತ್ವಗಳನ್ನು ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎಂಬುದನ್ನು ತಿಳಿದುಕೊಳ್ಳಬೇಕು. ಶರಣದ ಸಾಮಾಜಿಕ ಚಿಂತನೆಗಳು ಅವರ ಸರಳ ವಚನಗಳ ಮೂಲಕ ಮನೆ ಮನೆ ಮುಟ್ಟಿವೆ. ಆದರೆ ಅವು ಮನಸ್ಸನ್ನು ತಟ್ಟಬೇಕು. ಆತ್ಮಸಾಕ್ಷಿಯನ್ನು ಜಾಗೃತಗೊಳಿಸಬೇಕು ಎಂದರು.
ಉಪನ್ಯಾಸಕರಾದ ಯೋಗೀಶ್, ಚಂದನ್ ಇದ್ದರು.