ಸಾರಾಂಶ
ದಾಬಸ್‌ಪೇಟೆ: ನಟ ಅರ್ಜುನ್ ಸರ್ಜಾ ನೆಲಮಂಗಲದ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಕನ್ನಡ ಸಿನಿಮಾರಂಗದ ಹಿರಿಯ ನಟಿ ಲೀಲಾವತಿ ಅವರ ಆರೋಗ್ಯ ವಿಚಾರಿಸಿದರು.
ದಾಬಸ್‌ಪೇಟೆ: ನಟ ಅರ್ಜುನ್ ಸರ್ಜಾ ನೆಲಮಂಗಲದ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಕನ್ನಡ ಸಿನಿಮಾರಂಗದ ಹಿರಿಯ ನಟಿ ಲೀಲಾವತಿ ಅವರ ಆರೋಗ್ಯ ವಿಚಾರಿಸಿದರು.
ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಲೀಲಾವತಿ ಅವರು ಹಾಸಿಗೆ ಹಿಡಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಕಲಾವಿದರು, ಸಿನಿಮಾ ನಟ, ನಟಿಯರು, ನಿರ್ದೇಶಕರು ಮತ್ತು ತಂತ್ರಜ್ಞರು ಸೋಲದೇವನಹಳ್ಳಿಗೆ ತೆರಳಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಶನಿವಾರ ಅರ್ಜುನ್ ಸರ್ಜಾ ಬಂದು 87 ವರ್ಷದ ಹಿರಿಯ ನಟಿ ಲೀಲಾವತಿಯವರ ಆರೋಗ್ಯ ವಿಚಾರಿಸಿ ಕೆಲಸ ಸಮಯ ಅವರ ಮನೆಯಲ್ಲಿಯೇ ಕಳೆದರು.ತಾಯಿಯ ಆರೋಗ್ಯ ವಿಚಾರಿಸುವಾಗ ಲೀಲಾವತಿ ಪುತ್ರ ವಿನೋದ್ ರಾಜ್ ಕಣ್ಣೀರಿಟ್ಟರು. ಕನ್ನಡ ಚಿತ್ರರಂಗದಲ್ಲಿ ಲೀಲಾವತಿ ಅವರು ಅಭಿನಯಿಸಿ ಕನ್ನಡಿಗರ ಮನಸೆಳೆದಿದ್ದರು. ಅದಲ್ಲದೆ ಅವರ ಮಗನೊಂದಿಗೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದರು. ಇದೀಗ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದು, ಅವರ ಆರೋಗ್ಯ ಬೇಗ ಸುಧಾರಣೆಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ನಟ ಅರ್ಜುನ್ ಸರ್ಜಾ ತಿಳಿಸಿದ್ದಾರೆ.