ಸಾರಾಂಶ
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯನ್ನು ಎಷ್ಟೇ ಟೀಕೆ ಮಾಡಿದರೂ ಅವರು ನೀಲಕಂಠನಂತೆ ವಿಷ ನುಂಗಿ ಅಮೃತ ನೀಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಹಾವೇರಿ:ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯನ್ನು ಎಷ್ಟೇ ಟೀಕೆ ಮಾಡಿದರೂ ಅವರು ನೀಲಕಂಠನಂತೆ ವಿಷ ನುಂಗಿ ಅಮೃತ ನೀಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.ಲೋಕಸಭೆಯಲ್ಲಿ ಮಂಗಳವಾರ ಕೇಂದ್ರದ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷದಲ್ಲಿ ಈ ದೇಶದ ಭವಿಷ್ಯವನ್ನು ಬದಲಾಯಿಸಿದ್ದಾರೆ. ನರೇಂದ್ರ ಮೋದಿಯವರು ಇಲ್ಲದಿದ್ದರೆ ಈ ದೇಶದ ಪರಿಸ್ಥಿತಿ ಏನಾಗುತ್ತಿತ್ತು ಯೋಚಿಸಿ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಬಡತನವನ್ನು ದೇಶದ ವೈರಿ ಎಂದು ಪರಿಗಣಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶಕ್ಕೆ ಬಿಟೀಷರು ಒಬ್ಬರೇ ವೈರಿಗಳಿದ್ದರು. ಆದರೆ, ಸ್ವಾತಂತ್ರ್ಯಾ ನಂತರ ಬಡತನ, ಅನಕ್ಷರತೆ, ನಿರುದ್ಯೋಗ, ಅನಾರೋಗ್ಯ ನಮ್ಮ ವೈರಿಗಳಾಗಿವೆ. ನಾವು 140 ಕೋಟಿ ಜನರಿದ್ದೇವೆ. ಆರ್ಥಿಕತೆಯಲ್ಲಿ ಯಾವುದೇ ಮ್ಯಾಜಿಕ್ ನಡೆಯುವುದಿಲ್ಲ. ಇದರಲ್ಲಿ ಫಲಿತಾಂಶ ಮಾತ್ರ ಎಂದರು. ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಜನಸಂಖ್ಯೆಯನ್ನು ಪ್ರಜಾಪ್ರಭುತ್ವದ ಆಸ್ತಿಯನ್ನಾಗಿ ಮಾಡಿದರು. ದೇಶದ ಜನರಿಗೆ ಕೌಶಲ್ಯ ತರಬೇತಿ ನೀಡಿ ಅವರನ್ನು ಸಂಪನ್ಮೂಲವನ್ನಾಗಿ ಬಳಸಿಕೊಂಡರು. ಜಿಎಸ್‌ಟಿ, ಬ್ಯಾಂಕಿಂಗ್, ಉತ್ಪಾದನಾ ವಲಯದಲ್ಲಿ ಸಾಕಷ್ಟು ಪರಿವರ್ತನೆ ಮಾಡಿದ್ದಾರೆ. ಕಳೆದ ತಿಂಗಳ ಜಿಎಸ್‌ಟಿ ಸಂಗ್ರಹ 1.8 ಲಕ್ಷವಾಗಿದೆ. ನರೇಂದ ಮೋದಿಯವರ ಪರಿಜ್ಞಾನದಿಂದ ಜಿಎಸ್‌ಟಿ ಸಂಗ್ರಹ ಪ್ರಮಾಣ ಹೆಚ್ಚಾಗಿದೆ ಎಂದರು.ತೆರಿಗೆಯಲ್ಲಿ ಸುಧಾರಣೆ:ತೆರಿಗೆದಾರರ ಸಂಖ್ಯೆ ಹೆಚ್ಚಳ ಮಾಡುವ ಮೂಲಕ ದೇಶದ ಆದಾಯ ಹೆಚ್ಚಳ ಮಾಡಲಾಗುತ್ತಿದೆ. ದೇಶದಲ್ಲಿ 2014ರಲ್ಲಿ 3.6 ಕೋಟಿ ಜನರು ತೆರಿಗೆ ಕಟ್ಟಿದ್ದರು. 2023ಯಲ್ಲಿ 8.18 ಕೋಟಿ ಜನರು ತೆರಿಗೆ ಕಟ್ಟಿದ್ದಾರೆ. ಪ್ರತಿ ವರ್ಷ ಶೇ 9 ರಷ್ಟು ಹೆಚ್ಚಳವಾಗುತ್ತಿದೆ. 1 ಕೋಟಿಗಿಂತ ಹೆಚ್ಚು ಆದಾಯ ಗಳಿಸುವವರು 48,417 ಜನರು ಮಾತ್ರ ತೆರಿಗೆ ಕಟ್ಟುತ್ತಿದ್ದರು. ಈಗ ಸುಮಾರು 2 ಲಕ್ಷ 16ಸಾವಿರ ಜನರು 1 ಕೋಟಿಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ನಾವು ಒಂದು ಕೋಟಿಗಿಂತ ಹೆಚ್ಚು ಆದಾಯ ಗಳಿಸುವವರನ್ನು ಹುಟ್ಟು ಹಾಕುತ್ತಿದ್ದೇವೆ. ಕೇವಲ ಒಬ್ಬಿಬ್ಬರು ಈ ದೇಶವನ್ನು ನಡೆಸುತ್ತಿಲ್ಲ. ಈ ದೇಶದ ನೀತಿ ನಿಯಮಗಳನ್ನು ಪಾಲಿಸುವವರು ಈ ದೇಶವನ್ನು ನಡೆಸುತ್ತಿದ್ದಾರೆ. ಸಾಮಾನ್ಯ ಜನರ ತಲಾ ಆದಾಯ 2013-14 ರಲ್ಲಿ 89 ಸಾವಿರ ಇತ್ತ. 2022-23 ರಲ್ಲಿ 1,94,879 ರೂ. ಆಗಿದೆ. ಇದು ಹತ್ತು ವರ್ಷದಲ್ಲಿ ಡಬಲ್ ಆಗಿದೆ. ಇದಕ್ಕೆ ಕಾರಣ ತೆರಿಗೆ ನೀತಿಗಳು ಕಾರಣ ಎಂದು ಹೇಳಿದರು.ಸಂವಿಧಾನ ಬದಲಾವಣೆಯ ಭಯ: ನಮ್ಮ ದೇಶದಲ್ಲಿ ಸಂವಿಧಾನ ಬದಲಾವಣೆಯ ಭಯ ಹುಟ್ಟಿಸಲಾಯಿತು. ಆದರೆ, ಕಳೆದ ಹತ್ತು ವರ್ಷದಲ್ಲಿ ಸಂವಿಧಾನವನ್ನು ಬಲಗೊಳಿಸುವ ಕೆಲಸ ಮಾಡಲಾಗಿದೆ. ಎಸ್ಸಿ- ಎಸ್ಟಿ ಜನರಿಗೆ ಭಯ ಹುಟ್ಟಿಸಲಾಯಿತು. ಮೀಸಲಾತಿಯನ್ನು ಪ್ರಧಾನಿ ನರೇಂದ್ರ ಮೋದಿ 10 ವರ್ಷ ವಿಸ್ತರಣೆ ಮಾಡಿದರು. ರಾಜ್ಯಗಳ ಹಿಂದುಳಿದ ವರ್ಗಗಳ ಆಯೋಗಗಳಿಗೆ ಸಂವಿಧಾನಿಕ ಮಾನ್ಯತೆಯನ್ನು ನೀಡಿದ್ದಾರೆ. ಜಮ್ಮು ಕಾಶ್ಮೀರದ ಎಸ್ಸಿ- ಎಸ್ಟಿ ಜನರಿಗೆ ಆರ್ಟಿಕಲ್ 370 ರದ್ದುಗೊಳಿಸುವ ಮೂಲಕ ಅವಕಾಶ ನೀಡಿದರು. 2047ರಲ್ಲಿ ನಮ್ಮ ಮಕ್ಕಳು ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಗೂ ಅವರ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದರು.