ಸಾರಾಂಶ
ಆಹಾರ ಕ್ರಮಗಳನ್ನು ಸರಿಯಾಗಿ ಪರಿಶೀಲಿಸದೆ ಅನುಸರಿಸುವುದರಿಂದ ಉಂಟಾಗುವ ಅಪಾಯಗಳ ಅರಿವು ಮೂಡಿಸಲು ಬ್ರಹ್ಮಾವರದ ಸಮೀಪವಿರುವ ‘ಆಶ್ರಯ - ಹಿರಿಯ ನಾಗರಿಕರ ಮನೆ’ಯ ಸದಸ್ಯರಿಗೆ ಆಹಾರ ಮತ್ತು ತಂತ್ರಜ್ಞಾನದ ಕುರಿತು ಕಾರ್ಯಾಗಾರ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಅನಧಿಕೃತ ಮೂಲಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಲಾದ ಅಥವಾ ಹಂಚಿಕೊಳ್ಳಲಾದ ಆಹಾರ ಕ್ರಮಗಳನ್ನು ಸರಿಯಾಗಿ ಪರಿಶೀಲಿಸದೆ ಅನುಸರಿಸುವುದರಿಂದ ಉಂಟಾಗುವ ಅಪಾಯಗಳ ಅರಿವು ಮೂಡಿಸಲು ಬ್ರಹ್ಮಾವರದ ಸಮೀಪವಿರುವ ‘ಆಶ್ರಯ - ಹಿರಿಯ ನಾಗರಿಕರ ಮನೆ’ಯ ಸದಸ್ಯರಿಗೆ ಆಹಾರ ಮತ್ತು ತಂತ್ರಜ್ಞಾನದ ಕುರಿತು ಕಾರ್ಯಾಗಾರ ನಡೆಸಲಾಯಿತು.ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಯ ಸಂಶೋಧನಾ ತಂಡವು ಐಸಿಎಂಆರ್ ಪ್ರಾಯೋಜಿತ - ಜೆರೋಂಟೆಕ್ನಾಲಜಿ ಸಬಲೀಕರಣ ಕಾರ್ಯಕ್ರಮದ (ಜಿಇಪಿ) ಭಾಗವಾಗಿ ಈ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತ್ತು.ಮಣಿಪಾಲದ ವೆಲ್‌ಕಮ್ ಗ್ರೂಫ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿನಿಸ್ಟ್ರೇಷನ್ (ವಾಗ್ಶ) ಇದರ ಡಯಾಟೆಟಿಕ್ಸ್ ಮತ್ತು ಅಪ್ಲೈಡ್ ನ್ಯೂಟ್ರಿಷನ್ ವಿಭಾಗದ ಆಹಾರ ಪರಿಣಿತರಾದ ಪಲ್ಲವಿ ಮಹೇಶ್ ಶೆಟ್ಟಿಗಾರ್, ಈ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಹಿರಿಯ ಸದಸ್ಯರು ಪ್ರಶ್ನೆಗಳನ್ನು ಕೇಳುವ ಮೂಲಕ ಸಕ್ರಿಯವಾಗಿ ಭಾಗವಹಿಸಿದರು.ಆಶ್ರಯದ ಮುಖ್ಯ ಲೆಕ್ಕಾಧಿಕಾರಿ ಕರುಣಾಕರ ಶೆಟ್ಟಿ ತಂಡವನ್ನು ಸ್ವಾಗತಿಸಿ, ಪರಿಚಯಿಸುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ವಾಗ್ಶದ ಅಧ್ಯಾಪಕರಾದ ರಾಘವೇಂದ್ರ ಜಿ. ಅವರು ಅಧಿವೇಶನದ ಉದ್ದೇಶದ ಬಗ್ಗೆ ಸಭಿಕರಿಗೆ ವಿವರಿಸಿದರು.ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್‌ನ ಡಾ. ಶಾದಿಧರ ವೈ.ಎನ್. ಅವರು ಈ ಸಂಶೋಧನಾ ತಂಡದ ನೇತೃತ್ವ ವಹಿಸಿದ್ದರು. ಅಶ್ರಯ ಸಂಸ್ಥೆಯ ಗಣೇಶ್, ಅಕ್ಷತಾ ಹಾಗೂ ಜಿಇಪಿ ತಂಡದಿಂದ ಅಶ್ವಿನಿ, ಅರ್ಪಿತಾ ಕಾರ್ಯಕ್ರಮವನ್ನು ಸಂಯೋಜಿಸಲು ಮತ್ತು ಸುಗಮವಾಗಿ ನಡೆಸಲು ಸಹಾಯ ಮಾಡಿದರು.;Resize=(128,128))
;Resize=(128,128))