ವಾಣಿಜ್ಯ ಬೆಳೆಗಳ ಜೊತೆ ಭತ್ತ ಕೃಷಿಗೂ ಜಾಗವಿರಲಿ: ಶಾಸಕ ಅಶೋಕ್ ಕುಮಾರ್ ರೈ

| Published : Sep 01 2024, 01:59 AM IST

ವಾಣಿಜ್ಯ ಬೆಳೆಗಳ ಜೊತೆ ಭತ್ತ ಕೃಷಿಗೂ ಜಾಗವಿರಲಿ: ಶಾಸಕ ಅಶೋಕ್ ಕುಮಾರ್ ರೈ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಶನಿವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಯಾಂತ್ರೀಕೃತ ಭತ್ತ ನಾಟಿಗೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಹೆಚ್ಚಿನ ಭಾಗಗಳನ್ನು ವಾಣಿಜ್ಯ ಬೆಳೆಗಳು ಆವರಿಸಿಕೊಂಡಿವೆ. ಆದರೆ ನಮಗೆ ಹಸಿವು ಆದಾಗ ವಾಣಿಜ್ಯ ಬೆಳೆಯನ್ನು ತಿಂದು ನೀಗಿಸಿಕೊಳ್ಳಲು ಸಾಧ್ಯವಿಲ್ಲ. ಹಸಿವನ್ನು ನಿವಾರಿಸಲು ಅನ್ನವೇ ಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ರೈತರು ವಾಣಿಜ್ಯ ಬೆಳೆಗಳ ಮಧ್ಯೆ ಸ್ಪಲ್ಪ ಜಾಗವನ್ನು ಭತ್ತದ ಕೃಷಿಗೂ ಮೀಸಲಿಡಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಶನಿವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ನಡೆದ ಯಾಂತ್ರೀಕೃತ ಭತ್ತ ನಾಟಿಗೆ ಚಾಲನೆ ನೀಡಿ ಮಾತನಾಡಿದರು.ಹಿಂದೆಲ್ಲಾ ನಮ್ಮ ಜಿಲ್ಲೆಯಲ್ಲಿ ಭತ್ತವೇ ಪ್ರಧಾನವಾಗಿತ್ತು. ಆದರೆ ಇದೀಗ ಎಲ್ಲಿ ಹುಡುಕಿದರೂ ಗದ್ದೆಗಳು ಸಿಗುವುದಿಲ್ಲ. ವಾಣಿಜ್ಯ ಬೆಳೆಗಳ ಕಾರಣದಿಂದ ಭವಿಷ್ಯದಲ್ಲಿ ಅಪಾಯ ಉಂಟಾದೀತು. ಕನಿಷ್ಠ ತಮ್ಮ ಅವಶ್ಯಕತೆಗೆ ಬೇಕಾಗುವಷ್ಟು ಅಕ್ಕಿಗಾಗಿ ಭತ್ತವನ್ನು ರೈತರು ತಮ್ಮಲ್ಲೇ ಬೆಳೆಸಬೇಕು. ಇದರಿಂದ ಮುಂದೆ ಅಕ್ಕಿಗಾಗಿ ನಾವು ಅಲೆದಾಡುವ ದಿನ ಬಾರದು ಎಂದು ಹೇಳಿದರು.ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತಾಧಿಕಾರಿ ನವೀನ್ ಕುಮಾರ್ ಭಂಡಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇಂದ್ರ ಕಚೇರಿಯ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್, ಯೋಜನಾಧಿಕಾರಿ ಉಮೇಶ್ ಗೌಡ, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ, ಪ್ರಮುಖರಾದ ಪಂಜಿಗುಡ್ಡೆ ಈಶ್ವರ ಭಟ್, ದಿನೇಶ್ ಪಿ.ವಿ., ಮುರಳಿಧರ ರೈ ಮಠಂತಬೆಟ್ಟು, ಕೃಷ್ಣ ಪ್ರಸಾದ್ ಆಳ್ವಾ, ವಿನಯ ಸುವರ್ಣ, ಉಮಾನಾಥ ಶೆಟ್ಟಿ, ಸುಧೇಶ್ ಚಿಕ್ಕಪುತ್ತೂರು, ದೇವಳದ ಕಚೇರಿ ವ್ಯವಸ್ಥಾಪಕರಾದ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.