ಜ. 17, 18 ರಂದು ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರುನಗರದ ರಂಗಾಯಣವು ಬಾಬಾ ಸಾಹೇಬ್‌ ಸಮತೆಯಡೆಗೆ ನಡಿಗೆ ಹೆಸರಿನಲ್ಲಿ ಆಯೋಜಿಸಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಹಲವು ವಿಚಾರ ಸಂಕಿರಣ ನಡೆಯಲಿದೆ.ಜ. 17, 18 ರಂದು ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ. 17 ರಂದು ಬೆಳಗ್ಗೆ 10.30ಕ್ಕೆ ನವದೆಹಲಿಯ ದಿ ವೈರ್ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅಧ್ಯಕ್ಷತೆ ವಹಿಸಲಿದ್ದು, ಎಂಎಲ್‌ಸಿ ಯತೀಂದ್ರ, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಡಾ.ಕೆ. ರಾಕೇಶ್ ಕುಮಾರ್ ಭಾಗವಹಿಸುವರು.ಮೊದಲ ದಿನ ಜಾಗತಿಕ ಪ್ರಜಾಪ್ರಭುತ್ವಕ್ಕೆ ಎದುರಾಗುವ ಧಕ್ಕೆಗಳು, ಅಂಬೇಡ್ಕರ್ ಪರಿಕಲ್ಪನೆಯ ಪ್ರಜಾಪ್ರಭುತ್ವ: ಒಂದು ಮುಖಾಮುಖಿ, ಸಮಕಾಲಿನ ಭಾರತ ಮತ್ತು ಒಳಗೊಳ್ಳುವ ರಾಜಕಾರಣ, ಜಾಗತಿಕ ಮತ್ತು ಸ್ಥಳೀಯ ಸಾಮಾಜಿಕ ಅಸಮಾನತೆಗಳ ನಿರ್ಮೂಲನೆ: ಸವಾಲುಗಳು ಮತ್ತು ವಿದ್ಯಮಾನಗಳು, ಪ್ಯಾಸಿಸಂ ವಿರುದ್ಧ ಪ್ರತಿರೋಧದ ಸಂಕೇತವಾದ ಸಂವಿಧಾನದ ವಿಚಾರದ ಕುರಿತು ಅತಿಥಿಗಳು ಮಾತನಾಡುವರು.18 ರಂದು ಅಂಬೇಡ್ಕರ್ ಆರ್ಥಿಕ ಚಿಂತನೆಗಳು ಮತ್ತು ಅದರ ಅನುಷ್ಠಾನ, ತಳಸಮುದಾಯಗಳ ಸಾಂಸ್ಕೃತಿಕ ಪ್ರತಿರೋಧ, ಅಂಬೇಡ್ಕರ್ ಮತ್ತು ಆಧ್ಯಾತ್ಮಿಕ ವಿಮೋಚನೆ, ಅಂಬೇಡ್ಕರ್ ಪರಿಕಲ್ಪನೆಯ ಕಾರ್ಮಿಕ ಸುಧಾರಣೆ ಮತ್ತು ಚಳವಳಿಗಳು, ಭಾರತದಲ್ಲಿ ಜನಪರ ಚಳವಳಿಗಳ ಪ್ರತಿರೋಧ ಮತ್ತು ಅಭಿವೃದ್ಧಿ, ಮಹಿಳಾ ಚಳವಳಿ ಸವಾಲುಗಳು ಮತ್ತು ವಿದ್ಯಮಾನಗಳು, ಭಾರತ ಸಂವಿಧಾನ: ಆಶಯ ಮತ್ತು ಬಿಕ್ಕಟ್ಟುಗಳು ವಿಷಯ ಕುರಿತು ಗಣ್ಯರು ವಿಚಾರ ಮಂಡಿಸಲಿದ್ದಾರೆ.ಚಲನಚಿತ್ರೋತ್ಸವದಲ್ಲಿ ಸೋಮವಾರ ಶ್ರೀರಂಗ ಮಂದಿರದಲ್ಲಿ ರೂಟ್ಸ್‌, ಇಂಡಿಯಾ ಅನ್‌ಟಚ್ಡ್‌: ಸ್ಟೋರೀಸ್‌ಆಫ್‌ಎ ಪೀಪಲ್‌ ಅಪಾರ್ಟ್‌, ಫುಲೆ ಸಿನಿಮಾ ಪ್ರದರ್ಶನಗೊಂಡಿತು.13ರಂದು ಸಂವಿಧಾನ್‌ ಮೇಕಿಂಗ್‌ ಆಫ್‌ದಿ ಇಂಡಿಯನ್‌ ಕಾನ್ಸ್‌ ಟಿಟ್ಯೂಷನ್, ಜೈ ಭೀಮ್‌ ಕಾಮ್ರೇಡ್‌- 1, ಮಾರಿಕೊಂಡವರು ನಾಟಕ ಪ್ರದರ್ಶನಗೊಂಡರೆ, 14 ರಂದು ಮುಸಾಹರ್, ಜೈ ಭೀಮ್‌ ಕಾಮ್ರೇಡ್‌ - 2 ಕಾಳ್ಚೌಡಿ. 15 ರಂದು ಇನ್‌ಸೈಡ್‌ ದಿ ಲಾಸ್ಟ್‌ ಟ್ರೈಬ್‌ ಆಫ್‌ಬಿಹಾರ್, ಜೈ ಭೀಮ್‌ ಕಾಮ್ರೇಡ್‌ - 3, ಪರಿಯೇರುಮ್‌ ಪೆರುಮಾಳ್‌ ಬಿಎ, ಬಿಎಲ್‌ಸಿನಿಮಾ. 16 ರಂದು ಕರ್ನಾಟಕದಲ್ಲಿ ಅಂಬೇಡ್ಕರ್‌ ಹೆಜ್ಜೆಗಳು, ಋತುಮತಿ, ಪಲ್ಲಟ ಸಿನಿಮಾ ಪ್ರದರ್ಶನವಾಗುತ್ತದೆ.17 ರಂದು ಹೀರೋ, ಘುಟ್ಲೀ ಲಡೂ, 17 ರಂದು ಹೀರೋ, ಘುಟ್ಲೀ ಲಡೂ, ಹೆಬ್ಬುಲಿ ಕಟ್‌ ಸಿನಿಮಾವನ್ನು ಹಾಗೂ ಜ. 18 ರಂದು ಗಾಂಧಿ ಜಯಂತಿ, ಭಾರತದ ಪ್ರಜೆಗಳಾದ ನಾವು ಮತ್ತು ಹೇಮಾವತಿ ಸಿನಿಮಾವು ಪ್ರದರ್ಶನ ಆಗುವುದು.12 ರಂದು ಭೂಮಿಗೀತಾದಲ್ಲಿ ಅಂಬೇಡ್ಕರ್‌ ಕೊಲಾಜ್‌ ನಾಟಕ, 13 ರಂದು ಬಾಬ್‌ಮಾರ್ಲಿ ಫ್ರಂ ಕೋಡಿಹಳ್ಳಿ, 14ರಂದು ಪಿ ಥದೊಯ್‌, 15 ರಂದು ಮೀಡಿಯಾ, 16 ರಂದ ತೃತೀಯ ರತ್ನ, 17 ರಂದ ಕಳೆದು ಹೋದ ಹಾಡು, 18 ರಂದು ಕವನ್‌ ಆನ್‌ ಅಂಬೇಡ್ಕರೈಟ್‌ ಒಪೆರಾ ನಾಟಕ ಪ್ರದರ್ಶನಗೊಳ್ಳಲಿದೆ.ವನರಂಗದಲ್ಲಿ 13ರಂದು ದದನ್‌ರಾಜಾ, 14 ರಂದು ಸೇಮ್‌ ಸೇಮ್‌ ಬಟ್‌ ಡಿಫರೆಂಟ್, 15 ರಂದು ದಿ ಫೈಯರ್‌, 16 ರಂದು ಆಳಿದ ಮಾಸ್ವಾಮಿಗಳು, 17 ರಂದು ಕಿವುಡ ಮಾಡಿದ ಕಿತಾಪತಿ, 18 ರಂದು ರುಮು ರುಮು ರುಮು.ಕಿರುರಂಗ ಮಂದಿರದಲ್ಲಿ 12 ರಂದು ಬ್ಯಾಗ್‌ ಡಾನ್ಸಿಂಗ್‌ ನಾಟಕ ಪ್ರದರ್ಶನವಾಯಿತು. 13 ರಂದು ಕುಹೂ, 14 ರಂದು ಬೆಲ್ಲದ ದೋಣಿ, 15 ರಂದು ಈದಿ, 16 ರಂದು ಇಫಾರ್. ಕಲಾಮಂದಿರ ವೇದಿಕೆಯಲ್ಲಿ 12 ರಂದು ಮಾಯಾದ್ವೀಪ ನಾಟಕ, 13 ರಂದು ರೂಪಾಂತರ, 14 ರಂದು ಸೂರ್ಯ ಚಂದ್ರ, 15 ರಂದು ತಾರಾಸ್‌ ಟ್ರಿಯೋ, 16 ರಂದು ಅಂಬೇಡ್ಕರ್, 17 ರಂದು ಕಿಷ್ಕಿಂಧ ನಾಟಕ ಪ್ರದರ್ಶನಗೊಳ್ಳಲಿದೆ.ಬಣ್ಣಗಳಲ್ಲಿ ಭೀಮಯಾನ: ಕಲಾವಿದರಾದ ಸ್ಮೃದುಲ್, ಶ್ರೀದರ್ಶನ್, ಮಿನಲ್, ಪೃಥ್ವಿ.ಡಿ, ರಂಗನಾಥ್ ಅವರು ಬಣ್ಣಗಳಲ್ಲಿ ಭೀಮಯಾನ ಚಿತ್ರಿಸುವರು.