ಮಂಗಳೂರು: ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಸಿದ್ಧತೆ ಹಾಗೂ ವಿವಿಧ ಕಾರ್ಯಗಳ ಅನುಷ್ಠಾನಕ್ಕೆ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು 50 ಲಕ್ಷ ರು. ದೇಣಿಗೆಯನ್ನು ಸಮಿತಿ ಕಾರ್ಯಾಲಯದಲ್ಲಿ ನೀಡಿದರು.ದೇಣಿಗೆ ಚೆಕ್‌ ಅನ್ನು ಅವರು ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಇದೇ ವೇಳೆ ಸೋಂದೆ ಜೈನ ಮಠದ ಅಭಿವೃದ್ಧಿ ಕಾರ್ಯಗಳಿಗಾಗಿ 10 ಲಕ್ಷ ರು. ಕೊಡುಗೆಯನ್ನೂ ನೀಡಿದರು. ಮಹಾಮಸ್ತಕಾಭಿಷೇಕದ ಎಲ್ಲ ಪೂರ್ವಸಿದ್ಧತಾ ಕಾರ್ಯಗಳು ಸುಸೂತ್ರವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯುವಂತೆ ಅವರು ಅಗತ್ಯ ಮಾರ್ಗದರ್ಶನ ನೀಡಿದರು.

ಶಾಸಕ ವಿ.ಸುನಿಲ್ ಕುಮಾರ್, ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಮಹಾಮಸ್ತಕಾಭಿಷೇಕ ಸಮಿತಿಯ ಉಪಾಧ್ಯಕ್ಷ ಗುಣಪಾಲ ಕಡಂಬ, ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಮಂಗಳೂರು, ಸುನಿಲ್ ಕುಮಾರ್ ಬಜಗೋಳಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.

____