ಸಾರಾಂಶ
ಬಕ್ರೀದ್ ಹಬ್ಬ ನಮ್ಮ ಪೂರ್ವಜರ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿದೆ. ಮುಸ್ಲಿಂ ಸಮಾಜದವರು ಹಬ್ಬವನ್ನು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಣೆ ಮಾಡಬೇಕು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ಬಕ್ರೀದ್ ಹಬ್ಬ ನಮ್ಮ ಪೂರ್ವಜರ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿದೆ. ಮುಸ್ಲಿಂ ಸಮಾಜದವರು ಹಬ್ಬವನ್ನು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಣೆ ಮಾಡಬೇಕು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ನಗರದ ಈದ್ಗಾ ಮೈದಾನದಲ್ಲಿ ನಗರದ ಮುಸ್ಲಿಂ ಸಮಾಜದವರು ಬಕ್ರೀದ್ ನಿಮಿತ್ತ ಏರ್ಪಡಿಸಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಮಾರಂಭಕ್ಕೆ ಭೇಟಿ ನೀಡಿ, ಸೇರಿದ ಮುಸ್ಲಿಮರಿಗೆ ಬಕ್ರೀದ್ ಹಬ್ಬದ ಶುಭಾಶಯ ತಿಳಸಿ ಮಾತನಾಡಿ, ಶತ್ರುತ್ವವಿಲ್ಲದೆ ಬಾಳಬೇಕೆಂಬ ಸಂದೇಶವನ್ನು ಸಾರುವ ಇಬ್ರಾಹಿಂ ಹಾಗೂ ಅವರ ಪುತ್ರ ಇಸ್ಮಾಯಿಲ್ ಅವರ ದೇವನಿಷ್ಠೆ ಹಾಗೂ ತ್ಯಾಗ ಜೀವನದ ಸ್ಮರಣೆಗಾಗಿ ದೇವ ನಿಷ್ಠೆಗಾಗಿ ತನಗೆ ಅತ್ಯಂತ ಪ್ರೀತಿಯ ಯಾವುದೇ ವಸ್ತುವನ್ನು ಇನ್ನೊಬ್ಬರಿಗೆ ದಾನ ಮಾಡಲು ಸಿದ್ಧನಿರಬೇಕು ಎಂಬುದೇ ಈ ಹಬ್ಬದ ಸಂದೇಶವಾಗಿದೆ ಎಂದು ತಿಳಿಸಿ, ಆ ದೇವರು ಆಯುರಾರೋಗ್ಯ ಸಿರಿ ಸಂಪತ್ತು ಹಾಗೂ ದೀರ್ಘ ಆಯುಷ್ಯ ಕರುಣಿಸಲಿ ಎಂದು ಶುಭ ಹಾರೈಸಿದರು. ಸಮಾರಂಭದಲ್ಲಿ ಮುಸ್ಲಿಂ ಸಮಾಜದ ಧುರೀಣ ಉಸ್ಮಾನಗಣಿ ಹುಮನಾಬಾದ ಹಾಗೂ ಇತರರು ಉಪಸ್ಥಿತರಿದ್ದರು.