ಬೆಳ್ತಂಗಡಿ ಬಿಜೆಪಿ ಮಂಡಲ ಪದಗ್ರಹಣ, ಕಾರ್ಯಕರ್ತರ ಸಮಾವೇಶ

| Published : Apr 04 2024, 01:00 AM IST

ಬೆಳ್ತಂಗಡಿ ಬಿಜೆಪಿ ಮಂಡಲ ಪದಗ್ರಹಣ, ಕಾರ್ಯಕರ್ತರ ಸಮಾವೇಶ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಬೆಳ್ತಂಗಡಿ ಮಂಡಲದ ಬೂತ್ ಸಮಿತಿ, ಶಕ್ತಿಕೇಂದ್ರ ಹಾಗೂ ವಿವಿಧ ಮೋರ್ಚಾಗಳ ಮತ್ತು ಮಂಡಲ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯು ಮೂರೂವರೆ ಲಕ್ಷದ ಅಂತರದಲ್ಲಿ ಗೆಲುವನ್ನು ಸಾಧಿಸಬೇಕು. ಅದಕ್ಕಾಗಿ‌ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮತದಾರರ ಕೊಡುಗೆ ಮಹತ್ವದ್ದಾಗಿರುತ್ತದೆ ಎಂದು ಸಂಸದ ನಳಿನ್‌ ಕುಮಾರ್ ಕಟೀಲ್ ಹೇಳಿದರು.

ಬಿಜೆಪಿ ಬೆಳ್ತಂಗಡಿ ಮಂಡಲದ ಬೂತ್ ಸಮಿತಿ, ಶಕ್ತಿಕೇಂದ್ರ ಹಾಗೂ ವಿವಿಧ ಮೋರ್ಚಾಗಳ ಮತ್ತು ಮಂಡಲ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಹಾಗೂ ಕಾರ್ಯಕರ್ತರ ಸಮಾವೇಶವನ್ನು ಮಂಗಳವಾರ ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿಯಮ್ಮ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ 241 ಬೂತ್ ಗಳಲ್ಲಿ ಪದಾಧಿಕಾರಿಗಳನ್ನು ಆಯ್ಕೆಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ. ಬ್ರಿಜೇಶ್ ಚೌಟ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿ ಹೊಸತನಕ್ಕೆ ಬಿಜೆಪಿ ನಾಂದಿ ಹಾಡಿದೆ. ಈ ಬಾರಿ ಬೆಳ್ತಂಗಡಿಯಲ್ಲಿ 60 ರಿಂದ 70 ಸಾವಿರ ಲೀಡ್ ಬರಬೇಕು ಎಂದರು.

ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮಾತನಾಡಿ, ಇಲ್ಲಿನ ರಸ್ತೆ, ರೈಲು, ಬಂದರು ಪ್ರವಾಸೋದ್ಯಮಕ್ಕೆ ಒತ್ತು ನೀಡುವುದರ ಜೊತೆಗೆ ಯಕ್ಷಗಾನ,‌ ಕಂಬಳವನ್ನು ವಿಶ್ವಕ್ಕೆ ಪರಿಚಯಿಸಲು ಶ್ರಮಿಸುತ್ತೇನೆ ಎಂದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷದ ಇಲ್ಲಸಲ್ಲದ ಆರೋಪಿಗಳಿಗೆ ಕಿವಿಗೊಡಬೇಡಿ ಎಂದರು.

ಮಂಡಲದ ಹೊಸ ಅಧ್ಯಕ್ಷ ಶ್ರೀನಿವಾಸ್ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ತಾಲೂಕು ಪ್ರಭಾರಿ ಹರಿಕೃಷ್ಣ ಬಂಟ್ವಾಳ, ತಾಲೂಕು ವಿಧಾನಸಭಾ ಕ್ಷೇತ್ರ ಸಂಚಾಲಕ ಕುಶಾಲಪ್ಪ ಗೌಡ , ಜಿಲ್ಲಾ ಸಹಪ್ರಭಾರಿ ರಾಜೇಶ್ ಕಾವೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

ಮಂಡಲದ ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ ಸ್ವಾಗತಿಸಿದರು. ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ ಪಾರೆಂಕಿ ವಂದಿಸಿದರು.

ದೇವಸ್ಥಾನಗಳ ಬ್ರಹ್ಮಕಲಶಗಳ ಮೂಲಕ ಹಣಗಳಿಸಿದ್ದೇನೆ ಎಂದು ರಕ್ಷಿತ್ ಶಿವರಾಂ ಆರೋಪಿಸಿದ್ದಾರೆ. ಇದರ ಬಗ್ಗೆ ಪ್ರಮಾಣಕ್ಕೆ ಬರಲು ನಾನು ಸಿದ್ಧ. ಅಂಬೇಡ್ಕರ್ ಭವನಕ್ಕೆ ಮಂಜೂರಾಗಿರುವ 8 ಕೋಟಿ ರು., ತಾಲೂಕು ಕ್ರೀಡಾಂಗಣಕ್ಕೆ ಮಂಜೂರಾದ 10 ಕೋಟಿ, ಅರಸಿನಮಕ್ಕಿಯ ಮಾದರಿ ಶಾಲೆಗಾಗಿ ಮಂಜೂರಾದ 25 ಕೋಟಿಯನ್ನು ಸರ್ಹಿಕಾರ ಡಿದಿರುವುದಕ್ಕೆ ರಕ್ಷಿತ್ ಶಿವರಾಂ ಉತ್ತರಿಸಬೇಕು. ಕಳೆದ 9 ತಿಂಗಳಲ್ಲಿ ಬೆಳ್ತಂಗಡಿಗೆ ಒಂದೇ ಒಂದು ರುಪಾಯಿ ಅನುದಾನ ಬಂದಿಲ್ಲ ಯಾಕೆ ? ಎಂದು ಶಾಸಕ ಹರೀಶ್ ಪೂಂಜ ಪ್ರಶ್ನಿಸಿದರು.