ಹೊಸ ಟೋಪಿಯಿಂದ ಪೊಲೀಸರ ತಲೆ ಬೋಳು, ಚರ್ಮ ರೋಗ

| N/A | Published : Nov 01 2025, 07:36 AM IST

Karnataka Police

ಸಾರಾಂಶ

ರಾಜ್ಯ ಪೊಲೀಸ್ ಇಲಾಖೆಯ ಪೊಲೀಸ್ ಸಿಬ್ಬಂದಿಗೆ ನೀಡಿರುವ ಹೊಸ ನೀಲಿ ಬಣ್ಣದ ಟೋಪಿ ಚರ್ಮ ರೋಗಕ್ಕೆ ಕಾರಣವಾಗುವುದರಿಂದ ಮೊದಲಿದ್ದಂತೆ ಸಮವಸ್ತ್ರವನ್ನು ಹೋಲುವ ಖಾಕಿ ಟೋಪಿ ಜಾರಿಗೆ ತರಬೇಕು ಇಲ್ಲದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು ಸಾಮಾಜಿಕ ಅಭಿವೃದ್ಧಿ ರಂಗ ಹೇಳಿದೆ.

  ಬೆಂಗಳೂರು :  ರಾಜ್ಯ ಪೊಲೀಸ್ ಇಲಾಖೆಯ ಪೊಲೀಸ್ ಸಿಬ್ಬಂದಿಗೆ ನೀಡಿರುವ ಹೊಸ ನೀಲಿ ಬಣ್ಣದ ಟೋಪಿ ಚರ್ಮ ರೋಗಕ್ಕೆ ಕಾರಣವಾಗುವುದರಿಂದ ಮೊದಲಿದ್ದಂತೆ ಸಮವಸ್ತ್ರವನ್ನು ಹೋಲುವ ಖಾಕಿ ಟೋಪಿ ಜಾರಿಗೆ ತರಬೇಕು ಇಲ್ಲದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು ಸಾಮಾಜಿಕ ಅಭಿವೃದ್ಧಿ ರಂಗ ಹೇಳಿದೆ.

ಟೋಪಿ ಬಣ್ಣ ಬದಲಿಸಿರುವುದು ಅವೈಜ್ಞಾನಿಕ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿವೃದ್ಧಿ ರಂಗದ ರಾಜ್ಯಾಧ್ಯಕ್ಷ ಟಿ.ಎಲ್. ರಂಗನಾಥ, ಟೋಪಿ ಬಣ್ಣ ಬದಲಿಸಿರುವುದು ಅವೈಜ್ಞಾನಿಕ ಕ್ರಮವಾಗಿದೆ. ನೀಲಿ ಬಣ್ಣ ಬಿಸಿಲಿಗೆ ಬೇಗ ಬಣ್ಣ ಕಳೆದುಕೊಳ್ಳುತ್ತದೆ. ಸೂರ್ಯನ ಶಾಖವನ್ನು ಎಳೆದುಕೊಳ್ಳುವುದರಿಂದ ತಲೆಯಲ್ಲಿ ಬೆವರು ಹೆಚ್ಚುತ್ತದೆ. ಇದರಿಂದ ತಲೆಯಲ್ಲಿ ಕೆರೆತ ಮತ್ತು ಕೂದಲು ಉದುರುವಿಕೆ ಸಂಭವಿಸಿ ತಲೆ ಚರ್ಮ ರೋಗಕ್ಕೆ ಕಾರಣವಾಗುತ್ತದೆ. ಖಾಕಿ ಸಮವಸ್ತ್ರಕ್ಕೆ ನೀಲಿ ಬಣ್ಣ ಸರಿದೂಗುವುದಿಲ್ಲ ಎಂದರು.

ಬೇರೆ ಯಾರೋ ಇರಬೇಕು ಎನ್ನುವ ಭಾವನೆ

ಜನರಿಗೆ ನೀಲಿ ಟೋಪಿನಲ್ಲಿ ಪೊಲೀಸರು ಬೇರೆ ಯಾರೋ ಇರಬೇಕು ಎನ್ನುವ ಭಾವನೆ ಮೂಡುತ್ತಿದೆ. ಸ್ವತಃ ಪೊಲೀಸರಿಗೂ ಈ ಸಮವಸ್ತ್ರದ ಬಗ್ಗೆ ಮುಜುಗರ ಉಂಟಾಗಿರಬಹುದು. ಆದರೆ, ಈ ಬಗ್ಗೆ ಸರ್ಕಾರದ ವಿರುದ್ಧ ಮಾತನಾಡಲು ಸಾಧ್ಯವಾಗದೇ ಪೊಲೀಸರು ಮೌನ ವಹಿಸಿದ್ದಾರೆ. ಸಾರ್ವಜನಿಕರು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೇ ಹೊರತು ಇಂತಹ ಅನಗತ್ಯ ವಿಚಾರಗಳನ್ನು ಮಾಡಬಾರದು ಎಂದು ಅವರು ಹೇಳಿದರು.

 

Read more Articles on