ವಿಜ್ಞಾನಿ ಸರ್ವಮಂಗಳಾಗೆ ಬೆಸ್ಟ್ ಸೈಂಟಿಸ್ಟ್ ಅವಾರ್ಡ್

| Published : Sep 25 2025, 01:00 AM IST

ವಿಜ್ಞಾನಿ ಸರ್ವಮಂಗಳಾಗೆ ಬೆಸ್ಟ್ ಸೈಂಟಿಸ್ಟ್ ಅವಾರ್ಡ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ ಸೆಂಟ್ರಲ್‌ ಸಿಲ್ಕ್‌ ಬೋಡ್‌ ನ ನ್ಯಾಷನಲ್ ಸಿಲ್ಕ್ ವರ್ಮ ಸೀಡ್‌ ಪ್ರಾಜೆಕ್ಟ್‌ ನ ವಿಜ್ಞಾನಿ ಎಚ್.ಎಸ್. ಸರ್ವಮಂಗಳ ಅವರಿಗೆ ಕೇಂದ್ರ ರೇಷ್ಮೆ ಮಂಡಳಿ ಜವಳಿ ಮಂತ್ರಾಲಯ ಬೆಸ್ಟ್ ಸೈಂಟಿಸ್ಟ್ ಪ್ರಶಸ್ತಿ ಪ್ರದಾನಮಾಡಿ ಗೌರವಿಸಿದೆ.

ಕನ್ನಡಪ್ರಭ ವಾರ್ತೆ, ತರೀಕೆರೆ

ಸೆಂಟ್ರಲ್‌ ಸಿಲ್ಕ್‌ ಬೋಡ್‌ ನ ನ್ಯಾಷನಲ್ ಸಿಲ್ಕ್ ವರ್ಮ ಸೀಡ್‌ ಪ್ರಾಜೆಕ್ಟ್‌ ನ ವಿಜ್ಞಾನಿ ಎಚ್.ಎಸ್. ಸರ್ವಮಂಗಳ ಅವರಿಗೆ ಕೇಂದ್ರ ರೇಷ್ಮೆ ಮಂಡಳಿ ಜವಳಿ ಮಂತ್ರಾಲಯ ಬೆಸ್ಟ್ ಸೈಂಟಿಸ್ಟ್ ಪ್ರಶಸ್ತಿ ಪ್ರದಾನಮಾಡಿ ಗೌರವಿಸಿದೆ.ಬೆಂಗಳೂರಿನ ಹೆಬ್ಬಾಳ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ನಡೆದ 76ನೇ ಸಂಸ್ಥಾಪನ ದಿನದ ಅಂವಾಗಿ ನಡೆದ ಸಮಾರಂಭದಲ್ಲಿ , 2020-2025 ನೇ ಸಾಲಿನ ವಿಜ್ಞಾನಿಗಳ ಅತ್ಯುತ್ತಮ ಸೇವೆ ಪರಿಗಣಿಸಿ ನೀಡಿದ ಬೆಸ್ಟ್ ಸೈಂಟಿಸ್ಟ್ ಅವಾರ್ಡ್ ನ್ನು ಕೇಂದ್ರ ಜವಳಿ ಮಂತ್ರಾಲಯ (ಟೆಕ್ಸ್ ಟೈಲ್) ಜಂಟಿ ಕಾರ್ಯದರ್ಶಿ ಪದ್ಮಿನಿ ಶಿಂಗ್ಲಾ ಪ್ರದಾನ ಮಾಡಿದರು.ಪ್ರಶಸ್ತಿ ಪುರಸ್ಕೃತ ಎಚ್.ಎಸ್. ಸರ್ವಮಂಗಳ ತರೀಕೆರೆ ಪಟ್ಟಣದ ಮೆಸ್ಕಾಂ (ಹಿಂದಿನ ಕೆಇಬಿ)ನಿವೃತ್ತ ನೌಕರ ಎನ್.ಎಸ್. ಶೇಷಪ್ಪ ಮತ್ತು ಲೀಲಾವತಿ ಅವರ ಸೊಸೆ, ಬೆಂಗಳೂರಿನ ಡಾನ್ ಬಾಸ್ಕೋ ವಿದ್ಯಾಲಯ ಪ್ರೊಫೆಸರ್ ಡಾ.ಚಂದ್ರಶೇಖರ್ ಅವರ ಪತ್ನಿ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಗೋಣಿಬೀಡು ದಿ.ಎಚ್.ಎಸ್.ಸೂರ್ಯನಾರಾಯಣ ಮತ್ತು ಶಾಂತ ಅವರ ಪುತ್ರಿಯಾಗಿದ್ದಾರೆ. ಪ್ರಶಸ್ತಿ ಪುರಸ್ಕೃತ ಸರ್ವಮಂಗಳ ಅವರನ್ನು ಪಟ್ಟಣದ ಅಂಚೆವಾರ್ತೆ ಪ್ರತಿಷ್ಠಾನ ಕಾರ್ಯಾಧ್ಯಕ್ಷ ಎ.ವಿ.ನಾಗಭೂಷಣ್, ಖಚಾಂಚಿ ಎಚ್.ವಿ.ಸತ್ಯನಾರಾಯಣ್, ಹಿರಿಯರಾದ ಎಸ್.ಎಸ್. ಕುಮಾರಸ್ವಾಮಿ, ಎನ್.ಕೆ.ಸುಬ್ರಹ್ಮಣ್ಯ, ಎನ್.ಎಸ್. ಸೀತಾರಾಮ್ ಬೆಂಗಳೂರು ಕಾಫಿ ಮಂಡಳಿ ನಿವೃತ್ತ ಉಪ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ, ಐಒಬಿ ನಿವೃತ್ತ ಮುಖ್ಯ ವ್ಯವಸ್ಥಾಪಕ ಎನ್.ಪಿ.ಶಂಕರಮೂರ್ತಿ, ಕೆನರಾ ಬ್ಯಾಂಕ್‌ ನಿವೃತ್ತ ಹಿರಿಯ ವ್ಯವಸ್ಥಾಪಕ ಎನ್.ಎಸ್.ಆಂಜನ್ ಕುಮಾರ್, ನಾಡಿಗ್ ಏಜೆನ್ಸಿ ಎನ್.ಸುಬ್ರಹ್ಮಣ್ಯ ಅಭಿನಂದಿಸಿದ್ದಾರೆ.

-

24ಕೆಟಿಆರ್.ಕೆ.10 ಎನ್.ಎಸ್.ಎಸ್.ಒ-ಸಿಎಸ್.ಬಿ ವಿಜ್ಞಾನಿ ಎಚ್.ಎಸ್.ಸರ್ವಮಂಗಳ ಅವರಿಗೆ ಜವಳಿ ಮಂತ್ರಾಲಯ, ಕೇಂದ್ರ ರೇಷ್ಣೆ ಮಂಡಳಿ ಜವಳಿ ಮಂತ್ರಾಲಯ ವತಿಯಿಂದ ಬೆಸ್ಟ್ ಸೈಂಟಿಸ್ಟ್ ಅವಾರ್ಡ್ ಪ್ರಶಸ್ತಿ ವಿತರಿಸಿ ಗೌರವಿಸಲಾಗಿದೆ.