ದ್ವಿಚಕ್ರ ವಾಹನದ ಮೂಲಕ 12 ಜ್ಯೋತಿರ್ಲಿಂಗ ದರ್ಶನ ಪಡೆದ ಭಾಗೀರಥಿ

| Published : May 27 2024, 01:01 AM IST

ದ್ವಿಚಕ್ರ ವಾಹನದ ಮೂಲಕ 12 ಜ್ಯೋತಿರ್ಲಿಂಗ ದರ್ಶನ ಪಡೆದ ಭಾಗೀರಥಿ
Share this Article
  • FB
  • TW
  • Linkdin
  • Email

ಸಾರಾಂಶ

ದ್ವಿಚಕ್ರ ವಾಹನದಲ್ಲಿ ಒಬ್ಬಂಟಿಯಾಗಿ (ಸೋಲೋ ರೈಡ್) ಉತ್ತರಾಖಂಡದ ವರೆಗೆ ಪ್ರಯಾಣ ಬೆಳೆಸಿದ್ದ ಯುವತಿ (ಹವ್ಯಾಸಿ ಬೈಕ್ ರೈಡರ್) ಭಾಗೀರಥಿ ಅಜಗೊಂಡ ಭಾನುವಾರ ಸುರಕ್ಷಿತವಾಗಿ ಹುಬ್ಬಳ್ಳಿಗೆ ವಾಪಸಾದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ದ್ವಿಚಕ್ರ ವಾಹನದಲ್ಲಿ ಒಬ್ಬಂಟಿಯಾಗಿ (ಸೋಲೋ ರೈಡ್) ಉತ್ತರಾಖಂಡದ ವರೆಗೆ ಪ್ರಯಾಣ ಬೆಳೆಸಿದ್ದ ಯುವತಿ (ಹವ್ಯಾಸಿ ಬೈಕ್ ರೈಡರ್) ಭಾಗೀರಥಿ ಅಜಗೊಂಡ ಭಾನುವಾರ ಸುರಕ್ಷಿತವಾಗಿ ಹುಬ್ಬಳ್ಳಿಗೆ ವಾಪಸಾದರು. ಈ ಸಾಧನೆಯೊಂದಿಗೆ ಮೂಲಕ ವಿಶ್ವ ದಾಖಲೆ ನಿರ್ಮಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಕಳೆದ ಏಪ್ರಿಲ್‌ 25ರಂದು ನಗರದ ಸಿದ್ಧಾರೂಢ ಮಠದಿಂದ ಪ್ರಯಾಣ ಕೈಗೊಂಡಿದ್ದ ಭಗೀರಥಿ ದೇಶದ ವಿವಿಧ ಭಾಗಗಳಲ್ಲಿರುವ 12 ಜ್ಯೋತಿರ್ಲಿಂಗ ಪುಣ್ಯ ಕ್ಷೇತ್ರಗಳ ದರ್ಶನ ಪಡೆದುಕೊಂಡು ಭಾನುವಾರ ಹುಬ್ಬಳ್ಳಿಯ ಶ್ರೀಮಠಕ್ಕೆ ಆಗಮಿಸುತ್ತಿದ್ದಂತೆ ಭಾಗೀರಥಿ ಅವರನ್ನು ಸ್ನೇಹಿತೆಯರು ಹಾಗೂ ಕುಟುಂಬ ವರ್ಗದವರು ಆತ್ಮೀಯವಾಗಿ ಹೂವಿನಹಾರ ಹಾಕಿ ಕೇಕ್‌ ಕತ್ತರಿಸುವ ಮೂಲಕ ಅವರ ಸ್ವಾಗತಿಸಿಕೊಂಡರು. ಆನಂತರ ಶ್ರೀ ಸಿದ್ಧಾರೂಢರು ಮತ್ತು ಗುರುನಾಥ ರೂಢರ ಗದ್ದುಗೆ ದರ್ಶನ ಪಡೆದುಕೊಂಡ ಭಗೀರಥಿ ತಾವು ಪ್ರಯಾಣದಲ್ಲಿ ಎದುರಿಸಿದ ಸವಾಲುಗಳನ್ನು ಹಂಚಿಕೊಂಡರು.