ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮದ್ದೂರಿನಲ್ಲಿ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಅನ್ಯಕೋಮಿನರಿಂದ ಕಲ್ಲು ತೂರಾಟ ನಡೆಸಿರುವುದನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಕರೆ ನೀಡಿದ ಭಾರತೀನಗರ ಬಂದ್ ಯಶಸ್ವಿಯಾಯಿತು.ಬೆಳಗ್ಗೆಯಿಂದ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಬಂದ್‌ಗೆ ಬೆಂಬಲ ಸೂಚಿಸಿ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿ ಬಂದ್‌ನ್ನು ಯಶಸ್ವಿಗೆ ಪರೋಕ್ಷ ಬೆಂಬಲ ನೀಡಿದರು. ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
ಹಿಂದೂಪರ ಸಂಘಟನೆ ನೂರಾರು ಕಾರ್ಯಕರ್ತರು ಮೆಳ್ಳಹಳ್ಳಿ ಸಮೀಪದ ಹುತಾತ್ಮ ವೀರಯೋಧ ಎಚ್.ಗುರು ಅವರ ಸಮಾಧಿಗೆ ಪೂಜೆ ಸಲ್ಲಿಸಿ ಹಿಂದೂಪರ ಘೋಷಣೆಗಳನ್ನು ಕೂಗಿ ಮದ್ದೂರು-ಮಳವಳ್ಳಿಯ ಮುಖ್ಯ ರಸ್ತೆಯಲ್ಲಿ ಬೈಕ್ ರ್‍ಯಾಲಿ ನಡೆಸಿ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.ನಂತರ ಪಟ್ಟಣದ ಹೃದಯಭಾಗದ ಸರ್.ಎಂ.ವಿಶ್ವೇಶ್ವರಯ್ಯ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ಮಾಡಿ ಮಾನವ ಸರಪಳಿ ರಚಸಿಕೊಂಡು ಹಿಂದೂಪರ ಘೋಷಣೆ ಕೂಗಿ ಅನ್ಯಕೋಮಿನವರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು.
ಬೈಕ್ ರ್‍ಯಾಲಿಯಲ್ಲಿ ಬರುತ್ತಿದ್ದ ಹಿಂದು ಕಾರ್ಯಕರ್ತರನ್ನು ತಡೆದ ಸರ್ಕಲ್ ಇನ್ಸ್‌ಪೆಕ್ಟರ್ ಆನಂದ್ ಬೈಕ್ ರ್‍ಯಾಲಿಗೆ ಅವಕಾಶವಿಲ್ಲ ಕಾಲ್ನಡಿಗೆಯಲ್ಲಿ ಜಾಥಾ ಮಾಡಿ ಎಂದು ಪ್ರತಿಭಟನಾ ನಿರತರ ಮನವೊಲಿಸಿದರು.ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್ ಮಾತನಾಡಿ, ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಲೆ ಕಲ್ಲು ತೂರಿ ಶಾಂತಿ ಉಂಟು ಮಾಡಿರುವ ವಿರುದ್ಧ ಸೂಕ್ತ ಕಾನೂನು ಜರುಗಿಸಬೇಕು, ಹಿಂದು ಕಾರ್ಯಕರ್ತರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿರುವ ಕ್ರಮ ಖಂಡನೀಯ. ಕೂಡಲೇ ಪ್ರಕರಣ ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದ್ದು ಹಿಂದೂಗಳಿಗೆ ಸ್ವತಂತ್ರವಿಲ್ಲವಾಗಿದೆ. ಶಾಂತಿಯುತವಾಗಿ ಗಣೇಸ ವಿಸರ್ಜನೆಗೆ ಮೆರವಣಿಗೆ ಮೂಲಕ ತೆರಳುತಿದ್ದ ವೇಳೆ ಪೂರ್ವ ನಿಯೋಜಿತವಾಗಿ ಸಂಚು ರೂಪಿಸಿ ಮೆರವಣಿಗೆಗೆ ಕಲ್ಲು ತೂರಿರುವುದು ನಿಜಕ್ಕೂ ಖಂಡನೀಯವಾಗಿದ್ದು ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನಾ ಕಾರ್ಯಕ್ರಮಕ್ಕೆ ಹಿಂದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ನಮ್ಮ ಹಿಂದೂತ್ವದ ದ್ವನಿ ಮತ್ತಷ್ಟು ಗಟ್ಟಿಗೊಳಿಸಲು ಪ್ರತಿಯೊಬ್ಬರು ಆಗಮಿಸಬೇಕು ಎಂದು ಕೋರಿದರು.
ಪ್ರತಿಭಟನೆಗೆ ಹಿಂದೂ ಕಾರ್ಯಕರ್ತರು ಸೇರಿದಂತೆ ಬಿಜೆಪಿ, ಜೆಡಿಎಸ್, ರೈತ ಸಂಘ ಮತ್ತು ಪ್ರಗತಿಪರ ಸಂಘಟನೆಗಳು ಸಹ ಬೆಂಬಲ ಸೂಚಿಸಿದವು.ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಹಾಗಲಹಳ್ಳಿ ಚಿಕ್ಕತಿಮ್ಮೇಗೌಡ, ಹಿಂದುಪರ ಹೋರಾಟಗಾರ ಮೆಡಿಕಲ್ ಗಿರೀಶ್, ಯುವ ಬ್ರಿಗೇಡ್ ವಿಜಯ್ ಕುಮಾರ್, ಅಣ್ಣೂರು ಮನೋಹರ್, ವಿನಯ್ ಕುಮಾರ್, ಶಿವರಾಮು, ಕೆ.ಟಿ. ಸುರೇಶ್, ಅಣ್ಣೂರು ವಿನು, ರಘು, ಮುಟ್ಟನಹಳ್ಳಿ ಚಂದ್ರು, ಕರಡಕೆರೆ ಯೋಗೇಶ್, ಜಯಕುಮಾರ್, ಸುನೀಲ್, ಸತೀಶ್ ಸೇರಿದಂತೆ ಹಲವರು ಸೇರಿದಂತೆ ಹಲವರು ಭಾಗವಹಿಸಿದರು
;Resize=(128,128))
;Resize=(128,128))
;Resize=(128,128))