ಸಾರಾಂಶ
- ಬೆಂಗಳೂರಿನಲ್ಲಿ ಗೋವುಗಳ ಕೆಚ್ಚಲು ಕೊಯ್ದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ಬೆಂಗಳೂರಿನಲ್ಲಿ 3 ಗೋವುಗಳ ಕೆಚ್ಚಲನ್ನು ಕತ್ತರಿಸಿದ ಪೈಶಾಚಿಕ ಕೃತ್ಯ ಎಸಗಿದ ಮತಾಂಧರಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿ ಗೋವುಗಳ ಸಮೇತ ಬಿಜೆಪಿ ಜಿಲ್ಲಾ ಘಟಕ ಹಾಗೂ ಜಿಲ್ಲಾ ರೈತ ಮೋರ್ಚಾದಿಂದ ನಗರದಲ್ಲಿ ಮಂಗಳವಾರ ಕರಾಳ ಸಂಕ್ರಾಂತಿ ಆಚರಣೆ ಮುಖೇನ ಪ್ರತಿಭಟಿಸಲಾಯಿತು.ನಗರದ ಡಾ. ಎಂ.ಸಿ. ಮೋದಿ ವೃತ್ತದಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ತಮ್ಮೊಂದಿಗೆ ಕರೆ ತಂದಿದ್ದ ಗೋವುಗಳಿಗೆ ಅಕ್ಕಿ, ಬೆಲ್ಲ ತಿನ್ನಿಸಲಾಯಿತು. ಅಲ್ಲದೇ, ಹಸುಗಳ ಕೆಚ್ಚಲು ಕೊಯ್ದ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ನೇಣು ಹಾಕುವಂತೆ ಒತ್ತಾಯಿಸಲಾಯಿತು.
ಪಕ್ಷದ ಮುಖಂಡರು ಮಾತನಾಡಿ, ಬೆಂಗಳೂರಿನ ಚಾಮರಾಜ ಪೇಟೆಯ ವಿನಾಯಕ ನಗರದಲ್ಲಿ ಕರ್ಣ ಎಂಬುವರ ಗೋವುಗಳ ಕೆಚ್ಚಲನ್ನು ದುಷ್ಕರ್ಮಿಗಳು ಕೊಯ್ದಿದ್ದಾರೆ. ಕಾಂಗ್ರೆಸ್ ಸರ್ಕಾರದ ಮತ ಬ್ಯಾಂಕ್ ರಾಜಕಾರಣ, ತುಷ್ಟೀಕರಣದ ಫಲವಾಗಿ ರಾಜ್ಯದಲ್ಲಿ ಇಂಥ ಕೃತ್ಯ ಹೆಚ್ಚುತ್ತಿವೆ ಎಂದರು.ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಎಂಬುದಾಗಿ ಕಾಂಗ್ರೆಸ್ ಆಳ್ವಿಕೆಯಲ್ಲಿ ಘೋಷಣೆ ಕೂಗುತ್ತಾರೆ. ಲವ್ ಜಿಹಾದ್, ಬಾಂಬ್ ಸ್ಫೋಟದಂತಹ ಪ್ರಕರಣ ಕಾಂಗ್ರೆಸ್ ಆಳ್ವಿಕೆಯಲ್ಲಿ ಆಗುತ್ತವೆ. ಹಿಂದುಗಳು, ಮಠ ಮಂದಿರಗಳ ಆಸ್ತಿಯನ್ನು ವಕ್ಫ್ ಹೆಸರಿನಲ್ಲಿ ಕಬಳಿಸುವ ಕೆಲಸವಾಗುತ್ತಿದೆ. ಇದೀಗ ಹಿಂದುಗಳ ಆರಾಧ್ಯದೈವ, ಮೂರು ಕೋಟಿಗಳು ನೆಲೆಸಿರುವುದಾಗಿ ನಂಬಿ ಪೂಜಿಸುವ ಗೋವುಗಳ ಕೆಚ್ಚಲನ್ನೇ ಕೊಯ್ಯುವ ಮನಸ್ಥಿತಿಗೆ ಮತಾಂಧರು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ವಿಕೃತ, ರಕ್ಕಸಿ ಕೃತ್ಯ ಎಸಗಿದವರ ಕೈ-ಕಾಲುಗಳನ್ನು ಕತ್ತರಿಸುವಂಥ ಅತ್ಯುಗ್ರ ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರಬೇಕು. ಗೋವಿನ ಪೂಜೆ ಮಾಡಿ, ಕಿಚ್ಚು ಹಾಯಿಸಿ ಸಂಭ್ರಮಿಸುವ ಸಂಕ್ರಾಂತಿ ಹಬ್ಬದ 2 ದಿನ ಮುನ್ನವೇ ರಾಜ್ಯದ ರಾಜಧಾನಿಯಲ್ಲಿ ಗೋವುಗಳ ಕೆಚ್ಚಲು ಕೊಯ್ಯುವಂಹತಹ ವಿಕೃತಿ ಅಕ್ಷಮ್ಯ ಅಪರಾಧ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ನಿಕಟಪೂರ್ವ ಅಧ್ಯಕ್ಷ ಯಶವಂತ ರಾವ್ ಜಾಧವ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಬಿ.ಎಂ.ಸತೀಶ ಕೊಳೇನಹಳ್ಳಿ, ಶಿವನಹಳ್ಳಿ ರಮೇಶ, ಪಿ.ಸಿ.ಶ್ರೀನಿವಾಸ ಭಟ್, ಜಿ.ಎಸ್.ಶ್ಯಾಮ ಮಾಯಕೊಂಡ, ಎಚ್.ಎನ್.ಶಿವಕುಮಾರ, ಎಚ್.ಎನ್.ಗುರುನಾಥ ಇತರರು ಇದ್ದರು.
- - -ಕೋಟ್ ಆರೋಪಿಯು ಮದ್ಯ ಸೇವಿಸಿದ್ದ, ಮಾನಸಿಕ ಅಸ್ವಸ್ಥ, ಅಮಲಿನಲ್ಲಿ ಕೃತ್ಯ ಎಸಗಿದ್ದಾನೆಂಬ ಹೇಳಿಕೆ ನೀಡುತ್ತಿರುವುದು ತುಷ್ಟೀಕರಣದ ಪರಮಾವಧಿ. ಹಾಗಾದರೆ ಮದ್ಯ ಸೇವಿಸಿ ಏನಾದರೂ ಮಾಡಬಹುದೇ? ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅತಿಯಾದ ಮುಸ್ಲಿಮರ ತುಷ್ಟೀಕರಣಕ್ಕೆ ಟೊಂಕಕಟ್ಟಿ ನಿಂತಿದೆ. ರಾಜ್ಯದಲ್ಲಿ ಸರ್ಕಾರ, ಪೊಲೀಸ್ ಇಲಾಖೆಗಳು ಸತ್ತುಹೋಗಿವೆ
- ಬಿಜೆಪಿ ಮುಖಂಡರು, ದಾವಣಗೆರೆ- - -
-(ಪೋಟೋ ಬರಲಿವೆ):