ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಬಿ.ಎಲ್.ಡಿ.ಇ ಸಂಸ್ಥೆಯ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ಮತ್ತು ಬೆಂಗಳೂರಿನ ಟೊಯೊಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಪ್ರೈ.ಲಿ ನಡುವೆ ಉದ್ಯೋಗ ಮತ್ತು ತರಬೇತಿಯ ಒಡಂಬಡಿಕೆಗೆ ಸಹಿ ಹಾಕಲಾಯಿತು. ನಗರದ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್‌ನಲ್ಲಿ ನಡೆದ ಒಪ್ಪಂದದ ವೇಳೆ ಟೊಯೊಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಪ್ರೈ.ಲಿ ಅಧ್ಯಕ್ಷ ಅಮಿತ ಜೈನ್ ಮತ್ತು ಬಿ.ಎಲ್.ಡಿ.ಇ ಸಂಸ್ಥೆ ಆಡಳಿತಾಧಿಕಾರಿ ವಿಲಾಸ ಬಗಲಿ, ಕಾಲೇಜು ಪ್ರಾಚಾರ್ಯ ಪಿ.ಬಿ.ಕಳಸಗೊಂಡ ಒಡಂಬಡಿಕೆಗೆ ಸಹಿ ಹಾಕಿದರು. ವ್ಯವಸ್ಥಾಪಕ ಶ್ರೀಧರ.ಹೆಚ್.ಎಸ್ ಮತ್ತು ಹಿರಿಯ ಅಧಿಕಾರಿ ಪ್ರವೀಣ ಕುಮಾರ ಇದ್ದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಬಿ.ಎಲ್.ಡಿ.ಇ ಸಂಸ್ಥೆಯ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ಮತ್ತು ಬೆಂಗಳೂರಿನ ಟೊಯೊಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಪ್ರೈ.ಲಿ ನಡುವೆ ಉದ್ಯೋಗ ಮತ್ತು ತರಬೇತಿಯ ಒಡಂಬಡಿಕೆಗೆ ಸಹಿ ಹಾಕಲಾಯಿತು. ನಗರದ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್‌ನಲ್ಲಿ ನಡೆದ ಒಪ್ಪಂದದ ವೇಳೆ ಟೊಯೊಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಪ್ರೈ.ಲಿ ಅಧ್ಯಕ್ಷ ಅಮಿತ ಜೈನ್ ಮತ್ತು ಬಿ.ಎಲ್.ಡಿ.ಇ ಸಂಸ್ಥೆ ಆಡಳಿತಾಧಿಕಾರಿ ವಿಲಾಸ ಬಗಲಿ, ಕಾಲೇಜು ಪ್ರಾಚಾರ್ಯ ಪಿ.ಬಿ.ಕಳಸಗೊಂಡ ಒಡಂಬಡಿಕೆಗೆ ಸಹಿ ಹಾಕಿದರು. ವ್ಯವಸ್ಥಾಪಕ ಶ್ರೀಧರ.ಹೆಚ್.ಎಸ್ ಮತ್ತು ಹಿರಿಯ ಅಧಿಕಾರಿ ಪ್ರವೀಣ ಕುಮಾರ ಇದ್ದರು.ಒಡಂಬಡಿಕೆಗೆ ಸಹಿಯಾದ ನಂತರ ಅಮಿತ ಜೈನ್ ಮಾತನಾಡಿ, ಟೊಯೋಟಾ ಕಂಪನಿಯು ಉದ್ಯೋಗಿಗಳಿಗೆ ಉತ್ತಮ ವೇತನದ ಜೊತೆಗೆ ಕೌಶಲ ಅಭಿವೃದ್ಧಿಯಂತಹ ಸೌಲಭ್ಯಗಳನ್ನು ಒದಗಿಸುವ ಮೂಲಕ ಉನ್ನತ ಮಟ್ಟಕ್ಕೆ ಬೆಳೆದಿದೆ. ಈ ಒಡಂಬಡಿಕೆಯಿಂದ ಸಿಬ್ಬಂದಿಗಳಿಗೆ ತರಬೇತಿ ನೀಡುವುದು, ಚರ್ಚೆ ಹಾಗೂ ಸತತ ಸಂಪರ್ಕ ಹೊಂದುವ ಮೂಲಕ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಪಡೆಯಲು ಅನುಕೂಲವಾಗಲಿದೆ. ಅಲ್ಲದೇ, ಉದ್ಯೋಗ ಕ್ಷೇತ್ರದಲ್ಲಿನ ಸವಾಲುಗಳನ್ನು ಎದುರಿಸಲು ಹಾಗೂ ಉದ್ಯೋಗ ಸೌಲಭ್ಯಗಳನ್ನು ಒದಗಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪನ್ಯಾಸಕಿ ಶಿಲ್ಪಾ ಜಗದಾಳೆ ಸ್ವಾಗತಿಸಿದರು. ಶ್ರೇಯಾ ಪಾಟೀಲ ವಂದಿಸಿದರು.