ಬಸ್‌ ದರ ಏರಿಕೆಯ ಬೆನ್ನಲ್ಲೇ ಈಗ ಬಿಎಂಟಿಸಿ ಬಸ್ ಪಾಸ್‌ ದರ . ಶೇ.15ರಷ್ಟು ಏರಿಕೆ ಮಾಡಿ ನಿಗಮ ಆದೇಶ

| Published : Jan 09 2025, 01:47 AM IST / Updated: Jan 09 2025, 09:12 AM IST

ಬಸ್‌ ದರ ಏರಿಕೆಯ ಬೆನ್ನಲ್ಲೇ ಈಗ ಬಿಎಂಟಿಸಿ ಬಸ್ ಪಾಸ್‌ ದರ . ಶೇ.15ರಷ್ಟು ಏರಿಕೆ ಮಾಡಿ ನಿಗಮ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ಬಸ್‌ ದರ ಏರಿಕೆಯ ಬೆನ್ನಲ್ಲೇ ಈಗ ಬಿಎಂಟಿಸಿ ಬಸ್ ಪಾಸ್‌ ದರವೂ ಏರಿಕೆ ಆಗಿದೆ. ಶೇ.15ರಷ್ಟು ಏರಿಕೆ ಮಾಡಿ ನಿಗಮ ಆದೇಶ ಹೊರಡಿಸಿದ್ದು, ಶುಕ್ರವಾರದಿಂದಲೇ ಜಾರಿಗೆ ಬರಲಿದೆ.

 ಬೆಂಗಳೂರು : ಬಸ್‌ ಪ್ರಯಾಣ ದರ ಶೇಕಡ 15ರಷ್ಟು ಹೆಚ್ಚಿಸಿದ ಹಿನ್ನೆಲೆಯಲ್ಲಿ, ಬಿಎಂಟಿಸಿ ಸಾಮಾನ್ಯ ಪಾಸುಗಳು ಸೇರಿದಂತೆ ಎಲ್ಲ ರೀತಿಯ ಪಾಸುಗಳ ದರವನ್ನೂ ಹೆಚ್ಚಿಸಿ ಆದೇಶಿಸಿದೆ.

ಕಳೆದ ಭಾನುವಾರದಿಂದ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್‌ ಪ್ರಯಾಣದರ ಹೆಚ್ಚಳ ಮಾಡಲಾಗಿದೆ. ಅದರ ಜತೆಗೆ ಇದೀಗ ಬಿಎಂಟಿಸಿಯು ವಿದ್ಯಾರ್ಥಿ ಪಾಸುಗಳನ್ನು ಹೊರತುಪಡಿಸಿ ಉಳಿದೆಲ್ಲ ಪಾಸುಗಳು ದರವನ್ನು ಹೆಚ್ಚಿಸಲಾಗಿದ್ದು, ನೂತನ ದರವು ಜ. 9ರಿಂದ ಅನ್ವಯವಾಗಲಿದೆ. ಅಲ್ಲದೆ, ವಾಯುವಜ್ರ ಸೇರಿದಂತೆ ಮತ್ತಿತರ ಹವಾನಿಯಂತ್ರಿತ ಪಾಸುಗಳ ದರ ಹೆಚ್ಚಳದ ಜತೆಗೆ ಹೆಚ್ಚುವರಿಯಾಗಿ ಜಿಎಸ್‌ಟಿ ಅನ್ವಯವಾಗಲಿದೆ. ವಜ್ರ ದೈನಿಕ ಪಾಸು ಮತ್ತು ಮಾಸಿಕ ಪಾಸು ಪಡೆದವರು ಪಾಸುಗಳ ದರದ ಜತೆಗೆ ಟೋಲ್‌ ಶುಲ್ಕವನ್ನು ಹೆಚ್ಚುವರಿಯಾಗಿ ಪಾವತಿಸಬೇಕು ಎಂದು ನೂತನ ಆದೇಶದಲ್ಲಿ ತಿಳಿಸಲಾಗಿದೆ.

ಅದರ ಜತೆಗೆ ಖಾಸಗಿ ಸಂಸ್ಥೆ, ಕಾರ್ಖಾನೆಗಳಿಗೆ ಸೇವೆ ನೀಡುವ ಬಸ್‌ಗಳಲ್ಲಿ ಪ್ರಯಾಣಿಸುವ ನೌಕರರಿಗೆ ನೀಡುವ ಡೆಡಿಕೇಟೆಡ್‌ ಪಾಸ್‌ಗಳ ದರವನ್ನೂ ಹೆಚ್ಚಿಸಲಾಗಿದೆ. ಅದರಂತೆ ಕನಿಷ್ಠ 2,500 ರು. ಮೊತ್ತದ ಪಾಸ್‌ ದರ 3 ಸಾವಿರ ರುಗೆ ಹೆಚ್ಚಳ ಹಾಗೂ ಗರಿಷ್ಠ 2,850 ರು. ಇದ್ದಂತಹ ಪಾಸ್‌ ದರವನ್ನು 5 ಸಾವಿರ ರು.ಗೆ ಏರಿಕೆ ಮಾಡಿ ಆದೇಶಿಸಲಾಗಿದೆ.

ದರ ಪರಿಷ್ಕರಣೆ ವಿವರ

ಪಾಸಿನ ವರ್ಗಪ್ರಸ್ತುತ ದರಪರಿಷ್ಕೃತ ದರ

ಸಾಮಾನ್ಯ ದೈನಿಕ ₹70 ₹80

ಸಾಮಾನ್ಯ ಸಾಪ್ತಾಹಿಕ ₹300 ₹350

ಹಿರಿಯ ನಾಗರಿಕರ ಸಾಮಾನ್ಯ ಮಾಸಿಕ ₹945 ₹1,080

ಸಾಮಾನ್ಯ ಮಾಸಿಕ₹1,050₹1,200

ನೈಸ್‌ ರಸ್ತೆ ಸಾಮಾನ್ಯ ಮಾಸಿಕ ₹2,200 ₹2,350

ವಜ್ರ ದೈನಿಕ ₹120 ₹140

ವಜ್ರ ಮಾಸಿಕ ₹1,800 ₹2 ಸಾವಿರ

ವಾಯುವಜ್ರ ಮಾಸಿಕ ₹3,755 ₹4 ಸಾವಿರ

ವಿದ್ಯಾರ್ಥಿ ವಜ್ರ ಮಾಸಿಕ ₹1,200 ₹1,400