ಬೆಂಗಳೂರು : ಚಾಮರಾಜಪೇಟೆ, ಕಬ್ಬನ್‌ ಪಾರ್ಕ್‌, ಹೈಗ್ರೌಂಡ್ಸ್‌ ಠಾಣೆಗಳ ಕಟ್ಟಡ ಉದ್ಘಾಟನೆ

| Published : Jan 09 2025, 01:46 AM IST / Updated: Jan 09 2025, 09:13 AM IST

ಬೆಂಗಳೂರು : ಚಾಮರಾಜಪೇಟೆ, ಕಬ್ಬನ್‌ ಪಾರ್ಕ್‌, ಹೈಗ್ರೌಂಡ್ಸ್‌ ಠಾಣೆಗಳ ಕಟ್ಟಡ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸ್‌ ವಸತಿ ಯೋಜನೆಯನ್ನು ಮುಂದುವರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.

  ಬೆಂಗಳೂರು : ರಾಜ್ಯ ಸರ್ಕಾರವು ಪೊಲೀಸ್‌ ಸಿಬ್ಬಂದಿಗಾಗಿ ಜಾರಿಗೊಳಿಸಿರುವ ‘ಪೊಲೀಸ್‌ ಗೃಹ ಯೋಜನೆ’ಯನ್ನು ಮುಂದುವರೆಸಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ.

ರಾಜ್ಯ ಪೊಲೀಸ್‌ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದಿಂದ ನಿರ್ಮಿಸಲಾಗಿರುವ ಚಾಮರಾಜಪೇಟೆ ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ ಪೊಲೀಸ್‌ ಠಾಣೆಗಳ ಕಟ್ಟಡ, ಕೇಂದ್ರ ವಿಭಾಗದ ಡಿಸಿಪಿ ಕಚೇರಿ, ಕಬ್ಬನ್‌ ಪಾರ್ಕ್‌ ಸಂಚಾರ ಠಾಣೆ ಕಟ್ಟಡ, ಶೇಷಾದ್ರಿಪುರಂ ಎಸಿಪಿ ಕಚೇರಿ, ಹೈಗ್ರೌಂಡ್ಸ್‌ ಸಂಚಾರ, ಕಾನೂನು ಮತ್ತು ಸುವ್ಯವಸ್ಥೆ ಠಾಣೆ ಕಟ್ಟಡ ಹಾಗೂ ಪುಲಕೇಶಿನಗರದ ಲಾಜರ್‌ ರಸ್ತೆಯಲ್ಲಿ ನಿರ್ಮಿಸಿರುವ ಪೊಲೀಸ್‌ ವಸತಿ ಗೃಹಗಳ ಸಮುಚ್ಛಯವನ್ನು ಬುಧವಾರ ಉದ್ಘಾಟಿಸಿದ ಬಳಿಕ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಪೊಲೀಸ್‌ ಗೃಹ ಯೋಜನೆ ಮುಂದುವರೆಸುತ್ತೇವೆ. ಪೊಲೀಸ್‌ ಇಲಾಖೆಯಲ್ಲಿ ಕಾನ್‌ಸ್ಟೇಬಲ್‌, ಹೆಡ್‌ ಕಾನ್‌ಸ್ಟೇಬಲ್‌, ಪಿಎಸ್ಐ, ಇನ್‌ಸ್ಪೆಕ್ಟರ್‌ಗಳು ಹೆಚ್ಚು ಕೆಲಸ ಮಾಡುತ್ತಾರೆ. ಪೊಲೀಸರು ಜನರಿಗೆ ರಕ್ಷಣೆ ಕೊಡುವ ಕೆಲಸ ಮಾಡಿದರೆ, ನಾವು ಪೊಲೀಸರಿಗೆ ಎಲ್ಲಾ ಸೌಕರ್ಯ-ಸವಲತ್ತು ಕೊಡುತ್ತೇವೆ. ಪೊಲೀಸರು ಜನಪರ, ಸಮಾಜಮುಖಿ ಕೆಲಸ ಮಾಡಬೇಕು ಎಂದು ಹೇಳಿದರು.

ಭಯ ಮುಕ್ತ ವಾತಾವರಣ ನಿರ್ಮಿಸಿ:

ರಾಜ್ಯದ ಜನಸಂಖ್ಯೆ ಏಳು ಕೋಟಿ ದಾಟಿ ಹೋಗುತ್ತಿದೆ. ಇವರೆಲ್ಲರ ರಕ್ಷಣೆ, ಆಸ್ತಿ-ಪಾಸ್ತಿ, ಮಾನ ಪ್ರಾಣ ರಕ್ಷಿಸಿ ನೆಮ್ಮದಿಯ ಬದುಕಿಗೆ ಸುರಕ್ಷಿತ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಇದಕ್ಕಾಗಿ ಇಲಾಖೆಗೆ ಅಗತ್ಯವಾದ ಸವಲತ್ತು ಮತ್ತು ನೂತನ ಠಾಣೆಗಳನ್ನು ಒದಗಿಸಲು ಸರ್ಕಾರ ಸದಾ ಸಿದ್ಧವಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇದ್ದಾಗ ಅಭಿವೃದ್ಧಿಯ ವೇಗ ಹೆಚ್ಚುತ್ತದೆ. ಹೀಗಾಗಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಿ ಠಾಣೆಗೆ ಬರುವವರನ್ನು ಉತ್ತಮ ರೀತಿ ನಡೆಸಿಕೊಳ್ಳಬೇಕು. ಸಮಾಜದಲ್ಲಿ ಭಯ ಮುಕ್ತ ವಾತಾವರಣ ನಿರ್ಮಿಸಬೇಕು. ಇದರಿಂದ ಪೊಲೀಸರಿಗೂ ಮತ್ತು ಸರ್ಕಾರಕ್ಕೂ ಒಳ್ಳೇಯ ಹೆಸರು ಬರಲಿದೆ ಎಂದು ತಿಳಿಸಿದರು.

ಸಚಿವ ಕೆ.ಜೆ.ಜಾರ್ಜ್‌, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌, ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌, ಪೊಲೀಸ್‌ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ರಾಮಚಂದ್ರ ರಾವ್‌, ಶಾಸಕರಾದ ಎ.ಸಿ.ಶ್ರೀನಿವಾಸ್‌, ರಿಜ್ವಾನ್‌ ಅರ್ಷಾದ್‌ ಉಪಸ್ಥಿತರಿದ್ದರು.

ಶೇ.46 ಪೊಲೀಸರಿಗೆ ಮನೆ: ಪರಂ

ಲೀಸ್ ವಸತಿ ನಿಗಮದಿಂದ ಇಲಾಖೆಯ ಅಧಿಕಾರಿ‌ ಮತ್ತು ಸಿಬ್ಬಂದಿಗೆ ₹28 ಲಕ್ಷ ವೆಚ್ಚದಲ್ಲಿ ಎರಡು ಕೊಠಡಿಗಳ‌ ಸುಸಜ್ಜಿತ ಮನೆ ನಿರ್ಮಿಸಿ ಕೊಡಲಾಗುತ್ತಿದೆ. ಪೊಲೀಸರಿಗೆ ವಾಸ ಯೋಗ್ಯ ಮನೆಗಳನ್ನು ಕಲ್ಪಿಸುವ ಉದ್ದೇಶದಿಂದ ಪೊಲೀಸ್ ವಸತಿ ಗೃಹ ಯೋಜನೆ ಆರಂಭಿಸಲಾಯಿತು.

-ಡಾ। ಜಿ.ಪರಮೇಶ್ವರ್‌, ಗೃಹ ಸಚಿವಪೊಲೀಸರಿಗೆ ಖಾಕಿ ಖದರ್‌,

ಸ್ವಾಭಿಮಾನ ಮುಖ್ಯ: ಡಿಕೆಶಿ

ರಾಜಕಾರಣಿಗಳು ಪೊಲೀಸರನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ನಿಮ್ಮ ಕರ್ತವ್ಯ, ನಿಮ್ಮ ಸಮವಸ್ತ್ರ, ನಿಮ್ಮ ಘನತೆಗೆ ಯಾವತ್ತೂ ಕಳಂಕ ಬರಬಾರದು. ನಿಮ್ಮ ಖಾಕಿ, ಅದರ ಖದರ್, ಶಿಸ್ತು, ಪೊಲೀಸರಿಗೆ ಇರುವ ಸ್ವಾಭಿಮಾನಕ್ಕೆ ಧಕ್ಕೆ ಬರಬಾರದು.

-ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ.

ವಸತಿ ಸಮುಚ್ಛಯದಲ್ಲಿ 128 ಮನೆ

ರಾಜ್ಯ ಪೊಲೀಸ್‌ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ಪುಲಕೇಶಿನಗರದ ಲಾಜರ್‌ ರಸ್ತೆಯಲ್ಲಿ ಪೊಲೀಸ್‌ ವಸತಿ ಗೃಹಗಳ ಸಮುಚ್ಛಯ ನಿರ್ಮಿಸಲಾಗಿದೆ. ಅಪಾರ್ಟೆಮೆಂಟ್‌ ಮಾದರಿಯಲ್ಲಿ ಈ ವಸತಿ ಸಮುಚ್ಛಯ ನಿರ್ಮಿಸಿದ್ದು, 128 ಮನೆಗಳಿವೆ. ಒಂದೊಂದು ಮನೆಯಲ್ಲಿ ತಲಾ 2 ಬೆಡ್‌ ರೂಮ್‌, ಕಿಚನ್‌, ಹಾಲ್‌ ಸೇರಿದಂತೆ ಹಲವು ಸೌಲಭ್ಯ ಒದಗಿಸಲಾಗಿದೆ.