ಸಾರಾಂಶ
ಹೋಳಿ ಹಿನ್ನೆಲೆಯಲ್ಲಿ ಪಟ್ಟಣದ ಟಿಎಪಿಸಿಎಂಸಿ ಬಯಲು ಜಾಗದಲ್ಲಿ ವಿಶ್ವಹಿಂದೂ ಪರೀಷತ್ ಹಾಗೂ ಬಜರಂಗದಳವತಿಯಿಂದ ಹಮ್ಮಿಕೊಂಡಿದ್ದ ಬಣ್ಣದ ಮಡಕೆ ಹೊಡೆಯುವ ಸ್ಪರ್ಧೆಗೆ ರಂಗೇರಿತ್ತು.
ಮಾನ್ವಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಹೋಳಿ ಹಿನ್ನೆಲೆಯಲ್ಲಿ ಪಟ್ಟಣದ ಟಿಎಪಿಸಿಎಂಸಿ ಬಯಲು ಜಾಗದಲ್ಲಿ ವಿಶ್ವಹಿಂದೂ ಪರೀಷತ್ ಹಾಗೂ ಬಜರಂಗದಳವತಿಯಿಂದ ಹಮ್ಮಿಕೊಂಡಿದ್ದ ಬಣ್ಣದ ಮಡಕೆ ಹೊಡೆಯುವ ಸ್ಪರ್ಧೆಗೆ ವಿಹಿಂಪ ತಾಲೂಕು ಅಧ್ಯಕ್ಷ ವಿಜಯೇಂದ್ರ ಇಬ್ರಾಯಿ ಚಾಲನೆ ನೀಡಿದರು.ಪಟ್ಟಣದ 10ಕ್ಕೂ ಹೆಚ್ಚು ಯುವಕರ ತಂಡಗಳು ಉತ್ಸಹದಿಂದ ಭಾಗವಹಿಸಿ ಬಣ್ಣದ ಮಡಿಕೆಯನ್ನು ಒಡೆದು ಸಂಭ್ರಮಿಸಿದರು. ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ಟಿಎಪಿಸಿಎಂಸಿ ಹಮಾಲರ ಸಂಘದ ಯುವಕರಿಗೆ ಬಸವನಗೌಡ ಚೀಕಲಪರ್ವಿ ಅವರು 5 ಸಾವಿರ ರು. ನಗದನ್ನು ನೀಡಿದರು. ಎರಡನೇ ಸ್ಥಾನ ಪಡೆದ ಮಾರುತಿ ನಗರದ ಶ್ರೀರಾಮಸೇನೆ ಯುವಕರ ತಂಡಕ್ಕೆ ಮೂರು ಸಾವಿರ ಅದೇ ರೀತಿ ಮೂರನೇ ಸ್ಥಾನ ಪಡೆದ ನಮಾಜಗೇರಿ ಗುಡ್ಡ ಯುವಕರ ತಂಡಕ್ಕೆ ಒಂದು ಸಾವಿರ ನಗದನ್ನು ನೀಡಿದರು.
ಈ ವೇಳೆ ಮುಖಂಡರಾದ ಬಸವನಗೌಡ ಚೀಕಲಪರ್ವಿ, ಶರಣ ಮೇದಾ, ಆಯೋಜಕರು, ಸಾವಿರಾರು ಯುವಕರು ಆಗಮಿಸಿ ಸ್ಪರ್ಧೆಗೆ ಪ್ರೋತ್ಸಾಹ ನೀಡಿದರು.