ಸಾರಾಂಶ
ಹಿರೇಕೆರೂರು: ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಮತ್ತು ಸಂಸ್ಕಾರ ಹಾಗೂ ಶಿಸ್ತಿನ ಜೀವನವನ್ನೂ ಅಳವಡಿಸಿಕೊಳ್ಳಲು ತಿಳಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ್ ಹೇಳಿದರು.ತಾಲೂಕಿನ ಹಂಸಭಾವಿ ಗ್ರಾಮದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 21ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಜೀವನ ಮತ್ತು ದಿನಚರಿಯಲ್ಲಿ ಶಿಸ್ತು ಬದ್ಧವಾಗಿ ಇರುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ನಾವು ಜೀವನದಲ್ಲಿ ನಮ್ಮ ಗುರಿಯನ್ನು ಮುಟ್ಟುವುದರಲ್ಲಿ ಶಿಸ್ತು ಬಹಳ ಪ್ರಾಮುಖ್ಯತೆವಹಿಸುತ್ತದೆ. ಮಕ್ಕಳು ಸದಾ ಓದುವ ಹವ್ಯಾಸ ಮತ್ತು ಕ್ರಿಯಾಶೀಲತೆಯಿಂದ ಹೆಚ್ಚು ಜ್ಞಾನವನ್ನು ಪಡೆದುಕೊಳ್ಳಬೇಕು ಎಂದರು. ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಕ್ಯಾಂಪಸ್ ಡೈರೆಕ್ಟರಾದ ಮಂಜುನಾಥ ಘಾಟೆ ಮಾತನಾಡಿದರು. ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಾತ್ಮಕ ಮತ್ತು ಧನಾತ್ಮಕವಾಗಿ ಇರುವುದನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಹೊಸತನ ಮತ್ತು ಉತ್ತಮ ಫಲಿತಾಂಶ ನಿಮ್ಮದೇ ಆಗುತ್ತದೆ ನಂತರ ವಿದ್ಯಾರ್ಥಿಗಳಿಗೆ ಅಪರಾಧ ಶಾಸ್ತ್ರದ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆ ನೀಡಿದರು. ಕಾರ್ಯಾಧ್ಯಕ್ಷರಾದ ಶಿವಯೋಗಿ ಕರೋಡಿ ಮಾತನಾಡಿ, ಸಮಾಜದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆದರೂ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನ, ನೈತಿಕತೆ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕನಸುಗಳನ್ನು ಕಟ್ಟಿಕೊಂಡು ಆತ್ಮ ವಿಶ್ವಾಸದಿಂದ ಗುರಿ ಮುಟ್ಟಿ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಮೇಶ್ ಮಡಿವಾಳರ, ಪ್ರಮೋದ್ ಎಸ್. ಗಿಣಿವಾಲದ, ಸದಸ್ಯರಾದ ರಾಜಶೇಖರ್ ಕೆರೂಡಿ, ರತ್ನಮ್ಮ ಕೆರೂಡಿ, ವಿಜಯಲಕ್ಷ್ಮಿ ಕೆರೂಡಿ, ಶೃತಿ ಕೆರೂಡಿ ಮತ್ತು ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಮುಖ್ಯಗುರುಗಳು ಹಾಗೂ ಶಿಕ್ಷಕರು ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಪಾಲಕರು ಇದ್ದರು.
;Resize=(128,128))
;Resize=(128,128))
;Resize=(128,128))