ಸಾರಾಂಶ
ಮಕ್ಕಳು ಪಠ್ಯದ ಜತೆಗೆ ಕಥೆ, ಕಾದಂಬರಿಗಳನ್ನು ಓದುವ ಮೂಲಕ ಭಾಷಾ ಫ್ರೌಡಿಮೆ ಹೆಚ್ಚಿಸಿಕೊಳ್ಳಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಎಸ್. ಬೋರೇಗೌಡ ಕಿವಿಮಾತು ಹೇಳಿದರು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮಕ್ಕಳು ಪಠ್ಯದ ಜತೆಗೆ ಕಥೆ, ಕಾದಂಬರಿಗಳನ್ನು ಓದುವ ಮೂಲಕ ಭಾಷಾ ಫ್ರೌಡಿಮೆ ಹೆಚ್ಚಿಸಿಕೊಳ್ಳಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಎಸ್. ಬೋರೇಗೌಡ ಕಿವಿಮಾತು ಹೇಳಿದರು.ಸಮೀಪದ ಮೆಣಸಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿ.ರಾಮಕೃಷ್ಣೇಗೌಡರ ಪುತ್ರ ರಾಮಣ್ಣ ಸ್ಮರಣಾರ್ಥ ಹಮ್ಮಿಕೊಂಡಿದ್ದ ನನ್ನ ಪ್ರೀತಿಯ ಪುಸ್ತಕ ಕುರಿತ ಭಾಷಣ ಸ್ಪರ್ಧೆಯಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ತರಗತಿಯಲ್ಲಿ ಪಠ್ಯಕ್ಕೆ ಮಾತ್ರ ಸಿಮೀತವಾಗದೆ ಕಥೆ, ಕಾದಂಬರಿ, ದಿನ ಪ್ರತಿಕೆಗಳನ್ನು ಓದಿದರೆ ತಮ್ಮಲ್ಲಿನ ಜ್ಞಾನ ಹೆಚ್ಚುತ್ತದೆ. ಕಲಿಯುವ ಹಂತದಲ್ಲೇ ತಮ್ಮ ಬುದ್ದಿ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು. ಇದರಿಂದ ಭವಿಷ್ಯ ಉಜ್ವಲವಾಗಿ ರೂಪುಗೊಳ್ಳುತ್ತದೆ ಎಂದು ತಿಳಿಸಿದರು.ಭಾರತೀ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ಎಂ.ಮಾಯಪ್ಪ ಮಾತನಾಡಿ, ಮಕ್ಕಳು ಚಿಕ್ಕಂದಿನಲ್ಲಿಯೇ ಕಲಿಕೆಗೆ ಪೂರಕವಾಗಿರುವ ಪುಸ್ತಕ- ಪತ್ರಿಕೆಗಳನ್ನು ಓದುವ ಮೂಲಕ ಜ್ಞಾಪಕಶಕ್ತಿ ವೃದ್ಧಿಸಿಕೊಳ್ಳಬೇಕು. ಪ್ರತಿಭೆ ಬಡತನದಲ್ಲಿ ಹುಟ್ಟಿ ಶ್ರೀಮಂತಿಕೆಯಲ್ಲಿ ಸಾಯುತ್ತವೆ. ಉತ್ತಮ ವಿದ್ಯೆ ಕಲಿಯಲು ಉತ್ತಮ ಭಾವನೆಗಳನ್ನು ಬಿತ್ತಬೇಕು ಎಂದು ಅಭಿಪ್ರಾಯಪಟ್ಟರು.
ಈ ವೇಳೆ ವಿದ್ಯಾರ್ಥಿಗಳು ಪುಸ್ತಕ ಕುರಿತು ಭಾಷಣ ಮಾಡಿದರು. ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕೀಲಾರ ಕೃಷ್ಣೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಕೆ.ಮಹದೇವು, ಎಸ್‌ಡಿಎಂಸಿ ಅಧ್ಯಕ್ಷ ಸೋಮ, ಸದಸ್ಯರಾದ ದೇವರಾಜು, ರಾಮಲಿಂಗೇಗೌಡ, ವೆಂಕಟೇಶ್, ತನುಶ್ರೀ, ಮಾಧು, ಗ್ರಂಥಪಾಲಕ ಆಲೂರೇಗೌಡ, ಸಿಆರ್‌ಸಿ ಬೋರಯ್ಯ, ಮುಖ್ಯ ಶಿಕ್ಷಕಿ ಮಮತಾ ಸೇರಿದಂತೆ ಹಲವರಿದ್ದರು.