ನಗರ ಸಾರಿಗೆ ಬಸ್ ಸಂಚಾರ ಮಾರ್ಗ: ಟಿಕೆಟ್ ದರ ನಿಗದಿ

| Published : Sep 13 2025, 02:04 AM IST

ನಗರ ಸಾರಿಗೆ ಬಸ್ ಸಂಚಾರ ಮಾರ್ಗ: ಟಿಕೆಟ್ ದರ ನಿಗದಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಮಗ ಜಿಲ್ಲಾ ಕೇಂದ್ರ ರಾಮನಗರದಲ್ಲಿ ಸೌಲಭ್ಯ ಕಲ್ಪಿಸುತ್ತಿರುವ ನಗರ ಸಾರಿಗೆ ಬಸ್‌ಗಳು ಸಂಚರಿಸುವ ಮಾರ್ಗ, ನಿಲುಗಡೆ ಸ್ಥಳ ಹಾಗೂ ಟಿಕೆಟ್ ದರವನ್ನು ನಿಗದಿ ಪಡಿಸಿದೆ.

ರಾಮನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಮಗ ಜಿಲ್ಲಾ ಕೇಂದ್ರ ರಾಮನಗರದಲ್ಲಿ ಸೌಲಭ್ಯ ಕಲ್ಪಿಸುತ್ತಿರುವ ನಗರ ಸಾರಿಗೆ ಬಸ್‌ಗಳು ಸಂಚರಿಸುವ ಮಾರ್ಗ, ನಿಲುಗಡೆ ಸ್ಥಳ ಹಾಗೂ ಟಿಕೆಟ್ ದರವನ್ನು ನಿಗದಿ ಪಡಿಸಿದೆ.

ಈಗ ಮೊದಲ ಹಂತದಲ್ಲಿ ಎರಡು ಮಿನಿ ಬಸ್ ಗಳು ಜನರಿಗೆ ಸೇವೆ ಸಲ್ಲಿಸಲಿದ್ದು, ಎರಡು ಮಾರ್ಗಗಳನ್ನು ಅಂತಿಮಗೊಳಿಸಲಾಗಿದೆ. ಟಿಕೆಟ್ ದರ ಕನಿಷ್ಠ 6 ರಿಂದ 19 ರುಪಾಯಿವರೆಗೆ ನಿಗದಿಯಾಗಿದ್ದು, ನಗರ ಸಾರಿಗೆ ಬಸ್ ಪ್ರತಿನಿತ್ಯ ಮೂರು ಬಾರಿ ಚನ್ನಪಟ್ಟಣದವರೆಗೂ ಸಂಚಾರ ಮಾಡಲಿದೆ.

ಮಾರ್ಗ - 1:

ಕೆಂಗಲ್-ಮಧುರಾ ಗಾರ್ಮೆಂಟ್ಸ್:

ರಾಮನಗರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 7 ಗಂಟೆಗೆ ಹೊರಟು ಜಿಲ್ಲಾಧಿಕಾರಿಗಳ ಕಚೇರಿ ಮಾರ್ಗವಾಗಿ 7:20ಕ್ಕೆ ಕಾನೂನು ಕಾಲೇಜು, ಮಧುರಾ ಗಾರ್ಮೆಂಟ್ಸ್ ವರೆಗೆ ಸಂಚರಿಸಲಿದೆ. ನಂತರ ಅಲ್ಲಿಂದ ಹಿಂತಿರುಗಿ ಡಿಸಿ ಕಚೇರಿ, ಅರ್ಚಕರಹಳ್ಳಿ, ಸರಕಾರಿ ಎಂಜಿನಿಯರಿಂಗ್ ಕಾಲೇಜು ಮಾರ್ಗವಾಗಿ ಕೆಂಗಲ್‌ವರೆಗೆ ಸಾಗಲಿದೆ. ನಂತರ ಅಲ್ಲಿಂದ ಹಿಂತಿರುಗಿ ಅದೇ ಮಾರ್ಗದಲ್ಲಿ ಕಾನೂನು ಕಾಲೇಜುವರೆಗೆ ಬರಲಿದೆ. ನಂತರ ಇಲ್ಲಿಂದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ತೆರಳಲಿದೆ.

ನಂತರ ಇದೇ ಮಾರ್ಗ ಪುನರಾವರ್ತನೆಯಾಗಲಿದ್ದು, ಈ ರೀತಿ 16 ಟ್ರಿಪ್ ಗಳಲ್ಲಿ ಮಿನಿ ಬಸ್ ಬೆಂಗಳೂರು ಹೆದ್ದಾರಿ ಮಾರ್ಗದಲ್ಲಿ ಮಾತ್ರ ಸಂಚರಿಸಲಿದೆ. ಪ್ರತಿ ಟ್ರಿಪ್ ಕನಿಷ್ಠ 20 ರಿಂದ ಗರಿಷ್ಠ 35 ನಿಮಿಷದವರೆಗೆ ಇರಲಿದೆ.

ಮಾರ್ಗ 1ರ ನಿಲುಗಡೆ ಸ್ಥಳಗಳ:

ಸರ್ಕಾರಿ ಕಾನುನು ಕಾಲೇಜು, ಬಸವನಪುರ ಗೇಟ್, ಅಗ್ನಿ ಶಾಮಕ ಠಾಣೆ, ವಡೇರಹಳ್ಳಿ, ಡಿಸಿ ಆಫೀಸ್, ಗೌಸಿಯಾ ಕಾಲೇಜು, ಜಿಲ್ಲಾಸ್ಪತ್ರೆ, ವಿಜಯ ನಗರ ಆಂಜಿನೇಯ ಸ್ವಾಮಿ ಪ್ರತಿಮೆ, ಎಸ್ಪಿ ಆಫೀಸ್, ಕಂದಾಯ ಭವನ, ಕಾಂಗರೂ ಕೇರ್ ಆಸ್ಪತ್ರೆ(ರೋಟರಿ ಆಸ್ಪತ್ರೆ) ಶಾಂತಿನಿಕೇತನ ಕಾಲೇಜು, ರೇಷ್ಮೆ ಮಾರುಕಟ್ಟೆ, ಶಾಸಕರ ಕಚೇರಿ, ಐಜೂರು ಬಸ್ ನಿಲ್ದಾಣ, ತಾಲೂಕು ಕಚೇರಿ, ಎಂಪಿಎಂಸಿ ಮಾರುಕಟ್ಟೆ, ಕನಕಪುರ ಸರ್ಕಲ್, ಕೆಎಸ್ಆರ್ ಟಿಸಿ ಡಿಪೊ, ಅರ್ಚಕರಹಳ್ಳಿ, ಯೂನಿವರ್ಸಲ್ ಕಾಲೇಜು, ಕುಂಬಾಪುರ ಗೇಟ್, ಸರ್ಕಾರಿ ಡಿಪ್ಲೊಮಾ ಕಾಲೇಜು, ಸರ್ಕಾರಿ ಎಂಜಿನಿಯರಿಗ್ ಕಾಲೇಜು, ಮಂಚಶೆಟ್ಟಿಹಳ್ಳಿ ಗೇಟ್, ಕೇಂದ್ರೀಯ ವಿದ್ಯಾಲಯ ಹಾಗೂ ಕೆಂಗಲ್ ನಲ್ಲಿ ಪ್ರಯಾಣಿಕರು ಬಸ್ ಇಳಿಯಬಹುದು ಹಾಗೂ ಹತ್ತಬಹುದು.

ಮಾರ್ಗ - 2:

ವಿಜಯನಗರ, ಯಾರಬ್ ನಗರ, ಚನ್ನಪಟ್ಟಣ, ಐಜೂರು:

ರಾಮನಗರ ಬಸ್ ನಿಲ್ದಾಣದಿಂದ ಬೆಳಿಗ್ಗೆ 7 ಗಂಟೆಗೆ ಆರಂಭವಾಗುವ ಬಸ್ ಸಂಚಾರ 7:15ಕ್ಕೆ ಗಾಂಧಿನಗರ ಹಾಗೂ ಕೊಂಕಣಿದೊಡ್ಡಿ ಮಾರ್ಗವಾಗಿ ವಿಜಯನಗರಕ್ಕೆ ತಲುಪಲಿದೆ. ನಂತರ ಅದೇ ಮಾರ್ಗದಲ್ಲಿ ಹಿಂತಿರುಗುವ ಬಸ್ ಐಜೂರು ವಾಟರ್ ಟ್ಯಾಂಕ್ ಬಳಿ 7:45ಕ್ಕೆ ತಲುಪಲಿದೆ. ನಂತರ ಅಲ್ಲಿದ ರಾಮನಗರ ಬಸ್ ನಿಲ್ದಾಣ, ಎಸ್ಪಿ ಕಚೇರಿ, ಬಾಲಗೇರಿ ಮಾರ್ಗವಾಗಿ ಯಾರಬ್ ನಗರ ತಲುಪಲಿದೆ. ನಂತರ ಅದೇ ಮಾರ್ಗದಲ್ಲಿ ಐಜೂರು ವಾಟರ್ ಟ್ಯಾಂಕ್ ಸರ್ಕಲ್ ಗೆ ಹಿಂತಿರುಗಲಿದೆ. ನಂತರ 9 ಗಂಟೆಗೆ ಇಲ್ಲಿಂದ ಹೊರಡುವ ಬಸ್ 9:30ಕ್ಕೆ ಕೆಂಗಲ್ ಮಾರ್ಗವಾಗಿ ಚನ್ನಪಟ್ಟಣಕ್ಕೆ ತಲುಪಲಿದೆ. ನಂತರ ಇದೇ ಮಾರ್ಗಗಳು ಪುನರಾರ್ವತನೆಯಾಗಲಿದ್ದು, 22 ಟ್ರಿಪ್ ಗಳು ಸಂಚರಿಸಲಿವೆ. ಈ ಮಾರ್ಗದಲ್ಲಿ ಕನಿಷ್ಠ 15 ರಿಂದ ಗರಿಷ್ಠ 30 ನಿಮಿಷಗಳ ವರೆಗ ಬಸ್ ಸಂಚಾರ ನಡೆಯಲಿದೆ. ಮೂರು ಟ್ರಿಪ್ ಗಳು ಚನ್ನಪಟ್ಟಣಕ್ಕೆ ತಲುಪಲಿವೆ. ವಿಜಯ ನಗರ ಡೆಸ್ಟಿನೇಷನ್ ಗೆ ನಾಲ್ಕು ಬಾರಿ, ಯಾರಬ್ ನಗರ ಡೆಸ್ಟಿನೇಷನ್ ಗೆ 5 ಬಾರಿ ಬಸ್ ಸೇವೆ ದೊರೆಯಲಿದೆ.

ನಿಲುಗಡೆ ಸ್ಥಳಗಳು:

1. ಐಜೂರು ವಾಟರ್ ಟ್ಯಾಂಕ್, ಕೇಕ್ ವಲ್ಡ್ರ್ , ರಾಮನರ ಬಸ್ ನಿಲ್ದಾಣ, ರೇಷ್ಮೆ ಮಾರುಕಟ್ಟೆ, ಶಾಂತಿನಿಕೇತನ ಸ್ಕೂಲ್, ರೋಟರಿ ಆಸ್ಪತ್ರೆ, ಗಾಂಧಿನಗರ, ಒಕ್ಕಲಿಗರ ಭವನ/ಅಕಾವತಿ ಭವನ, ಅರಳಿಕಟ್ಟೆ, ಅಂಚೆಕೆಂಪಯ್ಯನದೊಡ್ಡಿ, ದ್ಯಾವರಸೇಗೌಡನದೊಡ್ಡಿ, ಸಿಂ ಬೋವಿದೊಡ್ಡಿ, ಬೈಪಾಸ್ ರೋಡ್, ಕೊಂಕಣಿದೊಡ್ಡಿ, ಕೊಂಕಣಿದೊಡ್ಡಿ ಸ್ಕೂಲ್, ಎಂ.ಎಂ.ಯ.ಕಾಲೇಜು, ರಾಮದುರ್ಗ ಪ್ರೌಢಶಾಲೆ, ವಿಜಯನಗರ(ರಾಜಕುಮಾರ್ ರಸ್ತೆ)

2.ಐಜೂರು ವಾಟರ್ ಟ್ಯಾಂಕ್, ಕೇಕ್ ವಲ್ಡ್ರ್ , ರಾಮನರ ಬಸ್ ನಿಲ್ದಾಣ, ರೇಷ್ಮೆ ಮಾರುಕಟ್ಟೆ, ಶಾಂತಿನಿಕೇತನ ಸ್ಕೂಲ್, ರೋಟರಿ ಆಸ್ಪತ್ರೆ, ಗಾಂಧಿನಗರ, ಎಸ್.ಪಿ. ಆಫೀಸ್, ಬಿಒಒ ಕಛೇರಿ/ಬಾಲಕಿಯರ ಸರಕಾರಿ ಕಾಲೇಜು, ನಗರಸಭಾ ಕಾರ್ಯಾಲಯ, ರೈಲ್ವೆ ನಿಲ್ದಾಣ, ಬಾಲಗೇರಿ, ಕೊತ್ತಿಪುರ, ವಾಟರ್ ಟ್ಯಾಂಕ್, ಎಂ.ಡಿ.ಆರ್ ಕನ್ವೆನ್ಷನ್ ಹಾಲ್, ಯಾರಬ್ ನಗರ.

12ಕೆಆರ್ ಎಂಎನ್ 5.ಜೆಪಿಜಿ

ಸಾಂದರ್ಬಿಕ ಚಿತ್ರ.