ಎರಡು ಗುಂಪುಗಳ ನಡುವೆ ಮಾರಾಮಾರಿ: ಪ್ರಕರಣ ದಾಖಲು

| Published : Jan 11 2024, 01:31 AM IST

ಸಾರಾಂಶ

ಯುವತಿಯೋರ್ವಳ ವಿಚಾರಕ್ಕಾಗಿ ಅನ್ಯಕೋಮಿನ ಎರಡು ಯುವಕರ ಗುಂಪುಗಳು ಹೊಡೆದಾಡಿಕೊಂಡ ಘಟನೆ ಮಂಗಳವಾರ ಸಂಜೆ ಮೂಡಿಗೆರೆ ಬಸ್ ನಿಲ್ದಾಣದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಯುವತಿಯೋರ್ವಳ ವಿಚಾರಕ್ಕಾಗಿ ಅನ್ಯಕೋಮಿನ ಎರಡು ಯುವಕರ ಗುಂಪುಗಳು ಹೊಡೆದಾಡಿಕೊಂಡ ಘಟನೆ ಮಂಗಳವಾರ ಸಂಜೆ ಮೂಡಿಗೆರೆ ಬಸ್ ನಿಲ್ದಾಣದಲ್ಲಿ ನಡೆದಿದೆ.

ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಹಿಂದೂ ಹುಡುಗಿಯರಿಗೆ ಬಣಕಲ್ ಮೂಲದ ಮುಸ್ಲಿಂ ಯುವಕ ಮುನಾಜ್ ಎಂಬಾತ ಚಾಕಲೇಟ್ ನೀಡಿದ್ದ ಎಂಬ ವಿಚಾರವಾಗಿ ಎರಡು ಕೋಮಿನ ಯುವಕರ ನಡುವೆ ಗಲಾಟೆ ನಡೆದಿದೆ. ಬಸ್ ನಿಲ್ದಾಣ ಆವರಣದಲ್ಲಿಯೇ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಯುವಕರ ಗುಂಪು ಚದುರಿ ಪರಾರಿಯಾಗಿದ್ದ ಬಗ್ಗೆ ಸಿ.ಸಿ.ಕ್ಯಾಮರದಲ್ಲಿಯೂ ದೃಶ್ಯ ಸೆರೆಯಾಗಿದೆ. ಇದರಿಂದ ಪಟ್ಟಣದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರು ಮುನ್ನೆಚ್ಚರಿಕೆ ವಹಿಸಿ, ಪಟ್ಟಣದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಘಟನೆ ಬಗ್ಗೆ ಮುನಾಜ್ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರತಿಯಾಗಿ ಮೂಡಿಗೆರೆ ಪಟ್ಟಣದ ಅನಿಲ್ ಪೂಜಾರಿ ಪ್ರತಿದೂರು ನೀಡಿದ್ದಾರೆ. ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 144, 148, 149, 324, 325, 504, 506 ರ ಅಡಿ ಪ್ರಕರಣ ದಾಖಲಿಸಲಾಗಿದೆ. 10ಎಂಡಿಜಿ3ಎ:

ಮೂಡಿಗೆರೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಡಿಕೊಂಡಿರುವ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ.