ಗುಣಾತ್ಮಕ ಫಲಿತಾಂಶಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳಿ: ಕೆಬಿ ಯಕ್ಲಾಸಪುರ

| Published : Jan 11 2024, 01:31 AM IST / Updated: Jan 11 2024, 02:21 PM IST

ಗುಣಾತ್ಮಕ ಫಲಿತಾಂಶಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳಿ: ಕೆಬಿ ಯಕ್ಲಾಸಪುರ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು

ಗದಗ: ಗುಣಾತ್ಮಕ ಪರೀಕ್ಷಾ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ಜ. ಪಂಚಾಚಾರ್ಯ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆಬಿ ಯಕ್ಲಾಸಪುರ ಹೇಳಿದರು.

ನಗರದ ಜ. ಪಂಚಾಚಾರ್ಯ ಪ್ರೌಢಶಾಲೆಯಲ್ಲಿ ನಡೆದ ಗುಣಾತ್ಮಕ ಪರೀಕ್ಷಾ ಫಲಿತಾಂಶಕ್ಕಾಗಿ ಪೂರ್ವ ತಯಾರಿ ಹಾಗೂ ಎಸ್ಸೆಸ್ಸೆಲ್ಸಿ ನಂತರ ಮುಂದೇನು ಎಂದು ಹತ್ತನೇ ತರಗತಿಯ ಮಕ್ಕಳಿಗಾಗಿ ಆಯೋಜಿಸಿದ್ದ ಒಂದು ದಿನದ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಹರ ಶಿಕ್ಷಣ ಸಂಯೋಜಕ ಐ.ಬಿ. ಮಡಿವಾಳರ ಮಾತನಾಡಿ, ಮಕ್ಕಳು ಪರೀಕ್ಷೆಗೆ ಯಾವ ರೀತಿ ಓದಬೇಕು ಎಂಬುದರ ಕುರಿತು ವಿವರಿಸಿ, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಜ. ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಾ.ಡಾ.ಬಿ.ಬಿ.ಹೊಳಗುಂದಿ ಮಾತನಾಡಿ, ಮುಂದೆ ಗುರಿಯಿರಲಿ ಹಿಂದೆ ಸದಾ ಗುರು ಇರುವನು.ವಿದ್ಯಾರ್ಥಿಗಳು ಏನಾನ್ನಾದರೂ ಸಾಧಿಸಬೇಕಂದರೆ ಪರಿಶ್ರಮ ಜೀವಿಯಾಗಿರಬೇಕು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ವಿನಯ್.ಪಿ. ಟಿಕಾರೆ ಅವರು,ಎಸ್ಸೆಸ್ಸೆಲ್ಸಿ ನಂತರ ಯಾವ ಕೋರ್ಸ ಮಾಡಿದರೆ ಏನಾಗುತ್ತದೆ ಎಂದು ಮಕ್ಕಳಿಗೆ ವಿವರಣೆ ನೀಡಿದರು.

ಕಾರ್ಯಕ್ರಮದಲ್ಲಿ ಜೆ.ಪಿ. ಪ್ರೌಢಶಾಲೆಯ ಶಿಕ್ಷಕಿ ಜಿ.ಎ. ಹಿತ್ತಲಮನಿ ಶಿಕ್ಷಕಿ, ಎಸ್.ಎಂ. ರಾಟಿ, ಎಸ್.ಎಂ. ಪಾಟೀಲ್, ಪರಶುರಾಮ, ಹುಲಿಗೆಮ್ಮ ಹಂಚಿನಾಳ, ವಿ.ಜಿ. ಹಿರೇಮಠ ಸೇರಿದಂತೆ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಇದ್ದರು. ಹನುಮಂತ ಕಳಕಾಪುರ ನಿರೂಪಿಸಿದರು. ಅಕ್ಷತಾ ಈಳಗೇರ ವಂದಿಸಿದರು.