ಮಂಗಳೂರು : ಹೈನುಗಾರರು ತೀರಾ ಸಂಕಷ್ಟದಲ್ಲಿದ್ದು, ಹೈನುಗಾರ ಕ್ಷೇತ್ರ ಬಹಳ ದುಸ್ಥಿತಿಯಲ್ಲಿರುವುದನ್ನು ಅರಿತ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈನುಗಾರರು ಸ್ವತಂತ್ರವಾಗಿ ಬದುಕು ಮಾಡಬೇಕು, ಅವರ ಕುಟುಂಬಕ್ಕೆ ಜೀವನಾಧಾರ ಹೈನುಗಾರ ಕ್ಷೇತ್ರ ಅಗಬೇಕು ಎಂಬ ಕಲ್ಪನೆಯೊಂದಿಗೆ ಹಾಲಿನ ದರವನ್ನು 8 ರು. ಹೆಚ್ಚಿಸಿ ನೇರವಾಗಿ ಹೈನುಗಾರರಿಗೆ 7 ರು. ಸಂದಾಯವಾಗುವಂತಹ ದಿಟ್ಟ ನಿರ್ಧಾರ ಕೈಗೊಂಡಿರುವುದಕ್ಕಾಗಿ ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಮತ್ತು ಕೆ.ಎಂ.ಎಫ್. ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು ಮುಖ್ಯಮಂತ್ರಿಗಳನ್ನು ಅಭಿನಂದಿಸಿದ್ದಾರೆ.ರಾಜ್ಯದ ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿಗೆ ಹೈನುಗಾರಿಕೆಗೆ ಒಂದು ಶಕ್ತಿ ತುಂಬುವ ಅಭೂತ ಪೂರ್ವ ಕಾರ್ಯವನ್ನು ಮುಖ್ಯಮಂತ್ರಿಗಳು ತಮ್ಮ ನಿರ್ಧಾರದ ಮೂಲಕ ರೈತನ ಜೀವನಕ್ಕೆ ಬೆಳಕು ಚೆಲ್ಲಿದ್ದಾರೆ. ಎಲ್ಲ ಗ್ರಾಹಕರು ಇದಕ್ಕೆ ಸಹಕಾರ ನೀಡಬೇಕು. ತಮಗೆ ಹಾಲಿನ ದರ ಬಹಳ ಕಡಿಮೆ ಇತ್ತು. ಇದೀಗ ಮುಖ್ಯಮಂತ್ರಿಗಳು ಅದಕ್ಕೆ ಒಂದು ದೊಡ್ಡ ಕೊಡುಗೆ ನೀಡಿದ್ದಾರೆ. ಇದಕ್ಕೆ ನಾವೆಲ್ಲಾ ಇಡೀ ರಾಜ್ಯದ ಹೈನುಗಾರರು ಅವರಿಗೆ ಅಭಿನಂದನೆ ಸಲ್ಲಿಸುತ್ತಾ, ರಾಜ್ಯದಲ್ಲಿ ಎಲ್ಲ ಜಿಲ್ಲಾವಾರು ಬೃಹತ್ ಮಟ್ಟದಲ್ಲಿ ಹೈನುಗಾರರು ಮತ್ತು ರೈತರು ಸೇರಿ ಸಮಾವೇಶ ನಡೆಸಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುವುದೆಂದು ಕೂಡಾ ತೀರ್ಮಾನ ಕೈಗೊಂಡಿದೆ. ಸೋಮವಾರ ಮುಖ್ಯಮಂತ್ರಿಗಳಿಗೆ ಅವರ ''''ಕೃಷ್ಣ'''' ಕಚೇರಿಯಲ್ಲಿ ದ.ಕ. ಒಕ್ಕೂಟದ ವತಿಯಿಂದ ಹಾಗೂ ಕೆ.ಎಂ.ಎಫ್. ವತಿಯಿಂದ ಸನ್ಮಾನಿಸಲಾಯಿತು. ಸಹಕಾರ ಸಚಿವ ಲಕ್ಷ್ಮಣ ಸವದಿ, ಪಶು ಸಂಗೋಪನಾ ಸಚಿವ ಪುಟ್ಟರಂಗಣ್ಣ ಶೆಟ್ಟಿ, ಕೋಲಾರ ಶಾಸಕ, ಕೆ.ಎಂ.ಎಫ್. ನಿರ್ದೇಶ ನಂಜೇಗೌಡ, ಮಾಜಿ ಸಂಸದ, ಕೆ.ಎಂ.ಎಫ್.
ನಿರ್ದೇಶಕರ ಡಿ.ಕೆ.ಸುರೇಶ್ ಮತ್ತು ಸಹಕಾರಿ ಸಂಘದ ನಿಬಂಧಕ ಡಾ. ವೆಂಕಟೇಶ್ ಹಾಗೂ ಎಲ್ಲ ಒಕ್ಕೂಟದ ಅಧ್ಯಕ್ಷರು, ಕೆ.ಎಂ.ಎಫ್. ನಿರ್ದೇಶಕರು ಈ ಅಭಿನಂದನಾ ಕಾರ್ಯಕ್ರಮದಲ್ಲಿ ಇದ್ದರು.ಹೈನುಗಾರರ ಜೀವನದಲ್ಲಿ ಶಕ್ತಿ ತುಂಬಿದ ಸಿಎಂ ದಿಟ್ಟ ನಿರ್ಧಾರ: ದೇವಿಪ್ರಸಾದ್ ಶೆಟ್ಟಿ
ಹೈನುಗಾರರು ತೀರಾ ಸಂಕಷ್ಟದಲ್ಲಿದ್ದು, ಹೈನುಗಾರ ಕ್ಷೇತ್ರ ಬಹಳ ದುಸ್ಥಿತಿಯಲ್ಲಿರುವುದನ್ನು ಅರಿತ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೈನುಗಾರರು ಸ್ವತಂತ್ರವಾಗಿ ಬದುಕು ಮಾಡಬೇಕು, ಅವರ ಕುಟುಂಬಕ್ಕೆ ಜೀವನಾಧಾರ ಹೈನುಗಾರ ಕ್ಷೇತ್ರ ಅಗಬೇಕು ಎಂಬ ಕಲ್ಪನೆಯೊಂದಿಗೆ ಹಾಲಿನ ದರವನ್ನು 8 ರು. ಹೆಚ್ಚಿಸಿ ನೇರವಾಗಿ ಹೈನುಗಾರರಿಗೆ 7 ರು. ಸಂದಾಯವಾಗುವಂತಹ ದಿಟ್ಟ ನಿರ್ಧಾರ ಕೈಗೊಂಡಿರುವುದಕ್ಕಾಗಿ ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಮತ್ತು ಕೆ.ಎಂ.ಎಫ್. ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು ಮುಖ್ಯಮಂತ್ರಿಗಳನ್ನು ಅಭಿನಂದಿಸಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.