ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ರಥಬೀದಿಯಲ್ಲಿ ಯುವ ಮುಖಂಡ ಶೇಖರ ಪೂಜಾರಿ ಉಪ್ಪುಂದ ಸಾರಥ್ಯದಲ್ಲಿ, ಶ್ರೀ ದುರ್ಗಾ ಟೈಗರ್ಸ್ ಉಪ್ಪುಂದ ತಂಡದ ಸಂಯೋಜನೆಯಲ್ಲಿ ಮಂಗಳೂರು ಹಾಗೂ ಉಡುಪಿಯ ಆಯ್ದ ಹುಲಿವೇಷ ತಂಡಗಳ ನಡುವೆ ಸ್ಪರ್ಧೆ ‘ಉಪ್ಪುಂದ ಹುಲಿಪರ್ವ’ ನಡೆಯಿತು.ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ರಥಬೀದಿಯಲ್ಲಿ ಯುವ ಮುಖಂಡ ಶೇಖರ ಪೂಜಾರಿ ಉಪ್ಪುಂದ ಸಾರಥ್ಯದಲ್ಲಿ, ಶ್ರೀ ದುರ್ಗಾ ಟೈಗರ್ಸ್ ಉಪ್ಪುಂದ ತಂಡದ ಸಂಯೋಜನೆಯಲ್ಲಿ ಮಂಗಳೂರು ಹಾಗೂ ಉಡುಪಿಯ ಆಯ್ದ ಹುಲಿವೇಷ ತಂಡಗಳ ನಡುವೆ ಸ್ಪರ್ಧೆ ‘ಉಪ್ಪುಂದ ಹುಲಿಪರ್ವ’ ನಡೆಯಿತು.
ಕುಂದಾಪುರ: ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ರಥಬೀದಿಯಲ್ಲಿ ಯುವ ಮುಖಂಡ ಶೇಖರ ಪೂಜಾರಿ ಉಪ್ಪುಂದ ಸಾರಥ್ಯದಲ್ಲಿ, ಶ್ರೀ ದುರ್ಗಾ ಟೈಗರ್ಸ್ ಉಪ್ಪುಂದ ತಂಡದ ಸಂಯೋಜನೆಯಲ್ಲಿ ಮಂಗಳೂರು ಹಾಗೂ ಉಡುಪಿಯ ಆಯ್ದ ಹುಲಿವೇಷ ತಂಡಗಳ ನಡುವೆ ಸ್ಪರ್ಧೆ ‘ಉಪ್ಪುಂದ ಹುಲಿಪರ್ವ’ ನಡೆಯಿತು.ಬೆಳಗಾವಿ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಸ್ಪರ್ಧೆಯನ್ನು ಉದ್ಘಾಟಿಸಿ, ಕರಾವಳಿ ಜಿಲ್ಲೆಗಳು ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಆತಿಥ್ಯಕ್ಕೆ ಹೆಸರುವಾಸಿಯಾಗಿವೆ. ಇಲ್ಲಿನ ಯುವಜನತೆ ಇಂತಹ ಕ್ರಿಯಾತ್ಮಕ ಚಿಂತನೆಗಳ ಮೂಲಕ ಮುನ್ನಡೆಯುತ್ತಿರುವುದು ಪ್ರಶಂಸನೀಯ, ವೈಭವದ ಹುಲಿ ಪರ್ವ ಜಿಲ್ಲೆಯ ಜನರ ಸಾಂಸ್ಕೃತಿಕ ಉತ್ಸಾಹ ಮತ್ತು ಕಲಾಪ್ರೇಮಕ್ಕೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಹಿರಿಯರಾದ ಅರೆಹಾಡಿ ಮಂಜು ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಉಪ್ಪುಂದದಲ್ಲಿ ಹುಲಿ ಕುಣಿತದ ಪರಂಪರೆಯ ಹಿರಿಯ ಕಲಾವಿದರನ್ನು ಮತ್ತು ಸ್ಪರ್ಧಾ ಹುಲಿವೇಷ ತಂಡಗಳನ್ನೂ ಸನ್ಮಾನಿಸಲಾಯಿತು.ಶಾಸಕ ಗುರುರಾಜ ಗಂಟೆಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ಸದಸ್ಯರಾದ ಮಹಾಲಿಂಗ ನಾಯ್ಕ್, ರಘುರಾಮ ದೇವಾಡಿಗ, ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ನಾರಾಯಣ ಖಾರ್ವಿ, ಪ್ರಮುಖರಾದಎಸ್. ಪ್ರಕಾಶಚಂದ್ರ ಶೆಟ್ಟಿ, ಜಗದೀಶ ಪೂಜಾರಿ ಹಕ್ಕಾಡಿ, ಮಹಾದೇವ ನಾಯ್ಕ್, ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ, ಅರವಿಂದ ಪೂಜಾರಿ, ಅನಿತಾ ಆರ್.ಕೆ., ಶೇಖರ ಪೂಜಾರಿ, ಎಸ್. ರಾಜು ಪೂಜಾರಿ, ಗೌರಿ ದೇವಾಡಿಗ, ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ಕೇಶವ ದೇವಾಡಿಗ, ಡಿ.ಟಿ. ಸೀತಾರಾಮ ಮಯ್ಯ, ನಾಗರಾಜ ಖಾರ್ವಿ, ಓಂಗಣೇಶ್ ಕಾಮತ್ ಉಪ್ಪುಂದ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದ ಸಂಘಟಕ ಶೇಖರ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿದರು. ಜಿಪಂ ಮಾಜಿ ಸದಸ್ಯ ಎಸ್. ಮದನ್ ಕುಮಾರ್ ವಂದಿಸಿದರು.ಸ್ಪರ್ಧೆಯ ಫಲಿತಾಂಶ: ಕಾರ್ಕಳ ಟೈಗರ್ಸ್ ಮತ್ತು ಅಶೋಕರಾಜ್ ಬಳಗ ಕಾಡಬೆಟ್ಟು ಉಡುಪಿ ಜಂಟಿಯಾಗಿ ಪ್ರಥಮ ಬಹುಮಾನ ಪಡೆದುಕೊಂಡವು. ಕುರ್ಕಾಲು ಟೈಗರ್ಸ್ ಉಡುಪಿ ದ್ವಿತೀಯ ಬಹುಮಾನ ಗಳಿಸಿತು. ಸುಧರ್ಮ ಮೊಗವೀರ ಕರಿಹುಲಿ ಪ್ರಶಸ್ತಿಗೆ ಭಾಜನರಾದರು.