ಪರವಾನಗಿಯಿಲ್ಲದೇ ಪಟಾಕಿ ಸಂಗ್ರಹ: ಗೋದಾಮು ಸೀಜ್

| Published : Oct 14 2023, 01:01 AM IST / Updated: Oct 14 2023, 01:02 AM IST

ಸಾರಾಂಶ

ಪರವಾನಗಿಯಿಲ್ಲದೇ ಪಟಾಕಿ ಮಾರಾಟ, ಸಂಗ್ರಹದ ಗೋದಾಮಿನಿ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಗೋದಾಮು ಸೀಜ್ ಮಾಡುವ ಜೊತೆಗೆ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಿದ ಘಟನೆ ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಪರವಾನಗಿಯಿಲ್ಲದೇ ಪಟಾಕಿ ಮಾರಾಟ, ಸಂಗ್ರಹದ ಗೋದಾಮಿನಿ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಗೋದಾಮು ಸೀಜ್ ಮಾಡುವ ಜೊತೆಗೆ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಿದ ಘಟನೆ ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ ನಡೆದಿದೆ.

ಇತ್ತೀಚೆಗೆ ತಾಪಂ ಇಒ ಸುಮಲತಾ ಎಸ್.ಪಿ. ನೇತೃತ್ವದ ಅಧಿಕಾರಿಗಳ ತಂಡ ಗ್ರಾಮದಲ್ಲಿ ಪಟಾಕಿ ಮಾರಾಟ ಮಾಡುವವರ ಅಂಗಡಿಗಳನ್ನು ಪರಿಶೀಲನೆ ನಡೆಸಿದ ವೇಳೆ ಅಂಗಡಿಯೊಂದರಲ್ಲಿ ಮಹಮ್ಮದ್ ಸಿಕ್ಕಲಗಾರ, ಅಜಗರಸಾಬ ಸಿಕ್ಕಲಗಾರ ಎಂಬವರು ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೇ 50 ಕೆಜಿಯಷ್ಟು ಪಟಾಕಿ ಮಾರಾಟ ಮಾಡಿರುವುದು ಕಂಡುಬಂದಿತು. ಕೂಡಲೇ ಎಚ್ಚೆತ್ತುಕೊಂಡ ತಂಡ ಗೋದಾಮಿಗೆ ತೆರಳಿ ಅಕ್ರಮವಾಗಿ ದಾಸ್ತಾನು ಮಾಡಿಕೊಂಡ 465 ಕೆಜಿಯಷ್ಟು ಪಟಾಕಿಯನ್ನು ಸೀಜ್ ಮಾಡಿದೆ. ಈ ಕುರಿತು ಗ್ರಾಮ ಪಂಚಾಯಿತಿ ಪಿಡಿಒ ಪ್ರಕಾಶ ಎಂ.ಕೆ. ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.