ಮಂಡ್ಯ: ತಾಲೂಕಿನ ಹುಲಿವಾನ ಗ್ರಾಮದ ಗುತ್ತಿಗೆದಾರ ದಯಾನಂದ್ ಅವರು ಅಕಾಲಿಕವಾಗಿ ನಿಧನರಾದ ಹಿನ್ನೆಲೆಯಲ್ಲಿ ಅವರ ಧರ್ಮಪತ್ನಿ ಸೌಮ್ಯ ಅವರಿಗೆ ಸರ್ಕಾರದಿಂದ ಬರಬೇಕಿದ್ದ ₹೧೦ ಲಕ್ಷ ಸಿಬಿಎಫ್ (ಕಾಂಟ್ರಾಕ್ಟರ್ ಬೆನಿಫಿಟ್ ಫಂಡ್) ಹಣವನ್ನು ರಾಜ್ಯ ಗುತ್ತಿಗೆದಾರರ ಸಂಘ ಹಾಗೂ ಜಿಲ್ಲಾ ಗುತ್ತಿಗೆದಾರರ ಸಂಘದ ವತಿಯಿಂದ ವಿತರಿಸಲಾಗಿದೆ ಎಂದು ಹಾಗೂ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಂ.ಎಚ್. ಯತಿರಾಜ್ ತಿಳಿಸಿದರು.

ನಗರದ ಶಂಕರನಗರದಲ್ಲಿರುವ ದಯಾನಂದ್ ಅವರ ನಿವಾಸಕ್ಕೆ ತೆರಳಿದ ಸಂಘದ ಪದಾಧಿಕಾರಿಗಳು, ಅವರ ಪತ್ನಿ ಸೌಮ್ಯ ಅವರಿಗೆ ಹಣ ಮಂಜೂರಾತಿ ಆದೇಶದ ಪ್ರತಿಯನ್ನು ವಿತರಿಸಿದರು. ಬಳಿಕ ಮಾತನಾಡಿದ ಯತಿರಾಜ್, ಸಿಬಿಎಫ್ ಹಣವನ್ನು ಆರ್‌ಟಿಜಿಎಸ್ ಮೂಲಕ ನೇರವಾಗಿ ಕುಟುಂಬದ ಖಾತೆಗೆ ವರ್ಗಾಯಿಸಲಾಗಿದೆ ಎಂದರು.

ಗುತ್ತಿಗೆದಾರರ ಕಾಮಗಾರಿಗಳ ಬಿಲ್‌ಗಳಿಂದ ಕಡಿತವಾಗುವ ಹಣವನ್ನು ಸಿಬಿಎಫ್ ನಿಧಿಯಾಗಿ ಸಂಗ್ರಹಿಸಲಾಗುತ್ತದೆ. ಗುತ್ತಿಗೆದಾರರು ಮೃತಪಟ್ಟ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ಅವರ ನಾಮಿನಿ ಅಥವಾ ಅರ್ಹ ಕುಟುಂಬದ ಸದಸ್ಯರಿಗೆ ತಲಾ ₹೧೦ ಲಕ್ಷ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ನಿರ್ದೇಶಕರಾದ ಚನ್ನೇಗೌಡ, ಎಲ್.ಎನ್.ನಂಜುಂಡಪ್ಪ, ಡಿ.ಎಸ್. ಶ್ರೀನಿಧಿ, ಗುತ್ತಿಗೆದಾರರಾದ ಪುಟ್ಟಲಿಂಗೇಗೌಡ ಹಾಗೂ ಎನ್.ಶಶಿಧರ್ ಉಪಸ್ಥಿತರಿದ್ದರು.