ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಬೆಳಗಾವಿಯಲ್ಲಿ 16 ರಂದು ಸಮಾವೇಶ

| Published : Dec 14 2024, 12:47 AM IST

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಬೆಳಗಾವಿಯಲ್ಲಿ 16 ರಂದು ಸಮಾವೇಶ
Share this Article
  • FB
  • TW
  • Linkdin
  • Email

ಸಾರಾಂಶ

Conference on 16th in Belgaum demanding implementation of internal reservation

ಕನ್ನಡಪ್ರಭ ವಾರ್ತೆ ವಡಗೇರಾ

ಸುಪ್ರೀಂಕೋರ್ಟಿನ ತೀರ್ಪು ಬಂದು ನಾಲ್ಕು ತಿಂಗಳಾದರೂ ಒಳಮೀಸಲಾತಿ ಜಾರಿ ಮಾಡದೆ, ರಾಜ್ಯ ಕಾಂಗ್ರೆಸ್‌ ಸರ್ಕಾರ ಕಾಲಹರಣದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಮಾದಿಗ ಹೋರಾಟ ಸಮಿತಿ ಮುಖಂರು ಡಿ. 16ರಂದು ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ನೆಡಸಲಾಗುವುದು ಎಂದು ಎಂಆರ್‌ಪಿಎಸ್ ಜಿಲ್ಲಾಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ ತಿಳಿಸಿದರು.

ಕೆಂಚಮ್ಮದೇವಿ ಗುಡಿಯಲ್ಲಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸುಪ್ರಿಂಕೋರ್ಟ್ ಪೀಠವೇ ಆಯಾ ರಾಜ್ಯ ಸರ್ಕಾರಗಳು ಒಳಮೀಸಲಾತಿ ಕಲ್ಪಿಸಬೇಕೆಂದು ಹೇಳಿದ್ದರೂ ವಿನಾಕಾರಣ ಕಾಲಹರಣ ಮಾಡುತ್ತಾ, ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸಿರುವ ರಾಜ್ಯದ ಸಿದ್ದರಾಮಯ್ಯ ಸರ್ಕಾರ ನ್ಯಾಯಾಂಗ ನಿಂದನೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮುಖ್ಯಮಂತ್ರಿಯೇ ಸುಪ್ರಿಂಕೋರ್ಟ್ ಆದೇಶಕ್ಕೆ ಬದ್ಧನಾಗಿ ನಡೆದುಕೊಳ್ಳದೇ ಏಕಕಾಲಕ್ಕೆ ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಎಲ್ಲದಕ್ಕೂ ಅಪಚಾರ ಮಾಡುತ್ತಾ ಒಳಮೀಸಲಾತಿ ಜಾರಿ ಮಾಡದೇ ಮಾದಿಗ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಸರ್ಕಾರದ ಕಣ್ಣು ತೆರೆಸಲು ಡಿ.16 ರಂದು ರಾಜ್ಯದ ಸಮಸ್ತ ಮಾದಿಗ ಒಕ್ಕೂಟದಿಂದ ಬೆಳಗಾವಿ ಅಧಿವೇಶನದಲ್ಲಿ ಗಮನ ಸೆಳೆಯಲು ಸಮಾವೇಶಗೊಳ್ಳುತ್ತಿರುವುದಾಗಿ ತಿಳಿಸಿದರು.

ಎಂಆರ್‌ಪಿಎಸ್ ವಡಗೇರಾ ತಾಲೂಕು ಗೌರವಾಧ್ಯಕ್ಷ ಮರೆಪ್ಪ ವಡಗೇರಾ, ಅಧ್ಯಕ್ಷ ಶರಣಪ್ಪ ವಡಗೇರಾ, ಮುಖಂಡರಾದ ಲಿಂಗಪ್ಪ ಯೆಕ್ಕೆಲಿ ಬಿಳ್ಹಾರ, ಉಪಾಧ್ಯಕ್ಷ ಹಯ್ಯಾಳಪ್ಪ ಚಿಗಮೇಟಿ ಬಿಳ್ಹಾರ, ಭೀಮರಾಯ ಕೋನಳ್ಳಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮ ಘಟಕದ ಅಧ್ಯಕ್ಷರು ಹಾಗೂ ಮುಖಂಡರು ಭಾಗವಹಿಸಿದ್ದರು.

-------

13ವೈಡಿಆರ್11: ವಡಗೇರಾ ಪಟ್ಟಣದ ಕೆಂಚಮ್ಮದೇವಿ ಗುಡಿಯಲ್ಲಿ ಎಂಆರ್ ಪಿಎಸ್ ವತಿಯಿಂದ ಸಭೆ ಜರುಗಿತು.