ಸಾರಾಂಶ
ಪಾಂಡವಪುರ:
ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ (ಡಿಸಿಸಿ) ನಿರ್ದೇಶಕರಾಗಿ ಆಯ್ಕೆಯಾದ ಜೆಡಿಎಸ್ ಬೆಂಬಲಿತ ಎಚ್.ಸಿ. ಪುಟ್ಟಸ್ವಾಮೀಗೌಡ (ಹೊಸಕೋಟೆ ಪುಟ್ಟಣ್ಣ) ಅವರನ್ನು ಪಟ್ಟಣದಲ್ಲಿ ತಾಲೂಕು ಹಾಗೂ ಹಳೇಬೀಡು ಗ್ರಾಪಂ ವ್ಯಾಪ್ತಿಯ ಮುಖಂಡರು ಅಭಿನಂದಿಸಿದರು.ಬಳಿಕ ನಿರ್ದೇಶಕ ಎಚ್.ಸಿ.ಪುಟ್ಟಸ್ವಾಮೀಗೌಡ ಮಾತನಾಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ ನನ್ನನ್ನು ಗುರುತಿಸಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುವ ಮೂಲಕ ನನ್ನನ್ನು ನಿರ್ದೇಶಕನಾಗಿ ಆಯ್ಕೆ ಮಾಡಿದ್ದಾರೆ ಎಂದರು.
ಸಾಮಾಜಿಕ ನ್ಯಾಯದಡಿ ಸಾಮಾನ್ಯ ಕಾರ್ಯಕರ್ತರಿನಿಗೂ ಅಧಿಕಾರಿ ನೀಡಬೇಕು ಎಂಬ ಗುಣವುಳ್ಳಂತ ನನ್ನ ನಾಯಕರಾದ ಸಿ.ಎಸ್.ಪುಟ್ಟರಾಜು ಅವರ ಸಲಹೆ, ಸೂಚನೆ, ಮಾರ್ಗದರ್ಶನದಲ್ಲಿ ಮುಂದಿನ ದಿನಗಳಲ್ಲಿ ಕೆಲಸ ಮಾಡುವ ಮೂಲಕ ರೈತರಿಗೆ ಅನುಕೂಲ ದೊರಕಿಸಿಕೊಡಲಾಗುವುದು ಎಂದರು.ಈ ವೇಳೆ ಗ್ರಾಪಂ ಅಧ್ಯಕ್ಷ ಧನಂಜಯ್, ವಿಎಸ್.ಎಸ್.ಎನ್.ಬಿ ಅಧ್ಯಕ್ಷ ಎಚ್.ಲಿಂಗರಾಜು, ಮಾಜಿ ಅಧ್ಯಕ್ಷ ಕುಳ್ಳೇಗೌಡ, ಉಪಾಧ್ಯಕ್ಷ ಎಚ್.ಗುರುಮೂರ್ತಿ, ನಿರ್ದೇಶಕರಾದ ಎಚ್.ಎಂ.ರಮೇಶ್, ಅರವಿಂದ್, ಗ್ರಾಪಂ ಸದಸ್ಯ ಪುಟ್ಟೇಗೌಡ, ಮುಖಂಡರಾದ ಅನಿಲ್, ರವಿ, ಪಾರ್ಥ ಸೇರಿದಂತೆ ಹಲವರು ಇದ್ದಾರೆ.
ವಸತಿ ಶಾಲೆ ವಿದ್ಯಾರ್ಥಿಗಳಿಗೆ ಪಿ.ಎಂ.ನರೇಂದ್ರಸ್ವಾಮಿ ಪ್ರೋತ್ಸಾಹಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಕನಕದಾಸ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜೋತ್ಸವದಲ್ಲಿ ನಾಡು, ನುಡಿ, ನೆಲ ಜಲ ಸಂಬಂಧಿಸಿದ ಹಾಡಿಗೆ ಉತ್ತಮ ನೃತ್ಯ ಪ್ರದರ್ಶನ ಮಾಡಿದ ಮಾರೇಹಳ್ಳಿ ಅದರ್ಶ ವಿದ್ಯಾಲಯ ಹಾಗೂ ಐನೋರು ಹುಂಡಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.ಪೂಜೆ ಕುಣಿತ, ಪಟ್ಟದ ಕುಣಿತ, ಹುಲಿವೇಷ, ಯಕ್ಷಗಾನ ಸೇರಿದಂತೆ ವಿವಿಧ ರೀತಿಯ ವೇಷಭೂಷಣಗಳನ್ನು ತೊಟ್ಟು ಕನ್ನಡಕ್ಕೆ ಸಂಬಂಧಪಟ್ಟ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಪ್ರೇಕ್ಷರನ್ನು ರಂಜಿಸಿದರು.
ನೃತ್ಯ ಮುಗಿಯುತ್ತಿದ್ದಂತೆ ನೃತ್ಯ ಮಾಡಿದ ವಿದ್ಯಾರ್ಥಿಗಳನ್ನು ವೇದಿಕೆಗೆ ಕರೆಸಿದ ಶಾಸಕರು ಎರಡು ತಂಡಗಳಿಗೂ ನಗದು ಬಹುಮಾನ ನೀಡಿ ನೃತ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿಯೂ ಪಠ್ಯದ ಜೊತೆಗೆ ಪಠ್ಯೇತ್ತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಶಿಕ್ಷಕರು ಸಹಕಾರ ನೀಡಬೇಕೆಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಲೊಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ ಉಮಾ, ತಾಪಂ ಇಒ ಶ್ರೀನಿವಾಸ್, ಡಿವೈಎಸ್‌ಪಿ ಯಶ್ವಂತ್‌ಕುಮಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
;Resize=(128,128))
;Resize=(128,128))