ಸ್ವಂತ ಸಾಮರ್ಥ್ಯದಲ್ಲಿ ಅನುದಾನ ತರದೆ ಕಾಂಗ್ರೆಸ್‌ ಮೇಲೆ ಟೀಕೆ

| Published : Nov 04 2025, 12:15 AM IST

ಸಾರಾಂಶ

ಗ್ರಾಮೀಣ ರೈತರ ಸಮಸ್ಯೆ ಬಗ್ಗೆ ಚಿಂತನೆ ಮಾಡದೇ ಪ್ರತಿ ಭಾಷಣದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಶಾಸಕ ಎಚ್. ಕೆ ಸುರೇಶ್ ಸರ್ಕಾರದ ವಿರುದ್ಧ ಸುಖಾಸುಮ್ಮನೆ ಟೀಕೆ ಮಾಡುವುದು ಬಿಟ್ಟು ತಮ್ಮ ಶ್ರಮದಿಂದ ಅನುದಾನ ತಂದು ಕೆಲಸ ಮಾಡಲಿ ಎಂದು ಮಾಜಿ ಶಾಸಕ ಬಿ. ಶಿವರಾಂ ಕಿಡಿಕಾರಿದರು. ಸರ್ಕಾರದ ವಿರುದ್ಧ ಶಾಸಕರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಅದು ಶುದ್ಧ ಸುಳ್ಳು ಎನ್ನುವುದಕ್ಕೆ ಸಾಕ್ಷಿಯಾಗಿ ತಮ್ಮ ಪ್ರಾಮಾಣಿಕ ಪ್ರಯತ್ನದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ 127.37 ಕೋಟಿ ಅನುದಾನಕ್ಕೆ ಅನುಮೋದನೆ ಸರ್ಕಾರದಿಂದ ದೊರಕಿದ್ದು ನಮ್ಮ ಪಕ್ಷ ಟೀಕೆ ಮಾಡುವವರಿಗೆ ಉತ್ತರ ದೊರಕಿದಂತಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರುಗ್ರಾಮೀಣ ರೈತರ ಸಮಸ್ಯೆ ಬಗ್ಗೆ ಚಿಂತನೆ ಮಾಡದೇ ಪ್ರತಿ ಭಾಷಣದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಶಾಸಕ ಎಚ್. ಕೆ ಸುರೇಶ್ ಸರ್ಕಾರದ ವಿರುದ್ಧ ಸುಖಾಸುಮ್ಮನೆ ಟೀಕೆ ಮಾಡುವುದು ಬಿಟ್ಟು ತಮ್ಮ ಶ್ರಮದಿಂದ ಅನುದಾನ ತಂದು ಕೆಲಸ ಮಾಡಲಿ ಎಂದು ಮಾಜಿ ಶಾಸಕ ಬಿ. ಶಿವರಾಂ ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಶಾಸಕರು ಕೇವಲ 10, 20 ಲಕ್ಷದ ಗುದ್ದಲಿ ಪೂಜೆಗಳಿಗೆ ಹಾಗೂ ಶಂಕುಸ್ಥಾಪನೆಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಅಲ್ಲದೆ ಸ್ವಾತಂತ್ರ್ಯ ದಿನಾಚರಣೆ , ಗಣರಾಜ್ಯೋತ್ಸವ ಅಂತ ಕಾರ್ಯಕ್ರಮಗಳಲ್ಲಿ ತ್ಯಾಗ ಬಲಿದಾನ ಮಾಡಿದಂತ ಮಹಾನ್ ವ್ಯಕ್ತಿಗಳನ್ನ ನೆನೆಯದೆ ಬೇಲೂರಿನ ಅಭಿವೃದ್ಧಿ ನನ್ನ ಗುರಿ ಎಂದು ಭಾಷಣದುದ್ದಕ್ಕೂ ಮಾತನಾಡುತ್ತಾರೆ. ವಿದ್ಯುಚ್ಛಕ್ತಿಯ ಬಗ್ಗೆ ತಾಲೂಕಿನಲ್ಲಿ ಇವರ ಕೊಡುಗೆ ಏನು ನೀರಾವರಿ ಬಗ್ಗೆ ಇವರ ಕೊಡುಗೆ ಏನಿದೆ ಎಂಬುದನ್ನು ಹೇಳಲಿ. ಸರ್ಕಾರದಿಂದ ತಾಲೂಕಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೆ 127.37 ಕೋಟಿ ಅನುದಾನ ನಮ್ಮ ಕೊಡುಗೆ ಅವರ ಕೊಡುಗೆ ಏನಿದೆ ಎಂಬುದನ್ನು ತೋರಿಸಲಿ ಅದನ್ನ ಬಿಟ್ಟು ಕಾರ್ಯಕ್ರಮಗಳಲ್ಲಿ ದೊಡ್ಡದಾದ ಭಾಷಣ ಮಾಡುವುದಕ್ಕೆ ಸೀಮಿತವಾಗಿದ್ದಾರೆ ಎಂದರು. ತಮ್ಮ ಶ್ರಮದಿಂದ ಸಬ್ ಸ್ಟೇಷನ್ ಮಂಜೂರು:

ಸರ್ಕಾರದ ವಿರುದ್ಧ ಶಾಸಕರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಅದು ಶುದ್ಧ ಸುಳ್ಳು ಎನ್ನುವುದಕ್ಕೆ ಸಾಕ್ಷಿಯಾಗಿ ತಮ್ಮ ಪ್ರಾಮಾಣಿಕ ಪ್ರಯತ್ನದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ 127.37 ಕೋಟಿ ಅನುದಾನಕ್ಕೆ ಅನುಮೋದನೆ ಸರ್ಕಾರದಿಂದ ದೊರಕಿದ್ದು ನಮ್ಮ ಪಕ್ಷ ಟೀಕೆ ಮಾಡುವವರಿಗೆ ಉತ್ತರ ದೊರಕಿದಂತಾಗಿದೆ ಎಂದರು.ಗ್ರಾಮೀಣ ಪ್ರದೇಶದ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗುಣಮಟ್ಟದ ವಿದ್ಯುತ್‌ ಸರಬರಾಜು ಮಾಡಲು ತಾಲೂಕಿನಾದ್ಯಂತ 13ಕ್ಕೂ ಹೆಚ್ಚು ಕಡೆ ಸಬ್‌ ಸ್ಟೇಷನ್‌ಗಳ ಕಾಮಗಾರಿಗಾಗಿ 127.37 ಕೋಟಿ ರು.ಗಳ ಅನುಮೋದನೆ ದೊರೆತಿದೆ, ಇದು ನಮ್ಮ ಶ್ರಮ ಕಾಂಗ್ರೆಸ್ ಸರ್ಕಾರದ ಕೊಡುಗೆಯಾಗಿದೆ. ವಿದ್ಯುತ್‌ ಸಬ್‌ ಸ್ಟೇಷನ್‌ ನಿರ್ಮಿಸಿ ತಾಲೂಕಿನ ರೈತರ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್‌ ದೊರಕಿಸಿ ಕೊಡಲಾಗುತ್ತದೆ. ಕ್ಷೇತ್ರ ವ್ಯಾಪ್ತಿಯಲ್ಲಿ ವಿದ್ಯುತ್‌, ನೀರಾವರಿ, ಆರೋಗ್ಯ ಮತ್ತು ಶಿಕ್ಣ ಕ್ಷೇತ್ರದ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಲಾಗಿದೆ. ನೆನಗುದಿಗೆ ಬಿದ್ದಿದ್ದ ಹೋಬಳಿಗಳಲ್ಲಿ ವಿದ್ಯುತ್ ಸಬ್ ಸ್ಟೇಷನ್‌ಗಳಲ್ಲಿ ವಿದ್ಯುತ್ ಲೋಡ್ ಹೆಚ್ಚಿಸಿ ಬಿಡುಗಡೆ ಅನುದಾನದಲ್ಲಿ ಕಾಮಗಾರಿ ಪುನಾರಂಭಕ್ಕೆ ಸಿದ್ಧತೆಯಾಗಿದೆ ಎಂದರು.ಶಾಸಕರು ಶ್ವೇತಪತ್ರ ಹೊರಡಿಸಲಿ:

ಶಾಸಕರು ತಾಲೂಕಿನಲ್ಲಿ ತಾವು ಮಾಡಿರುವ ಅಭಿವೃದ್ಧಿ ಬಗ್ಗೆ ಜನತೆಗೆ ತಿಳಿಸಲು ಶ್ವೇತಪತ್ರ ಹೊರಡಿಸಲಿ. ಶಾಸಕರು ಸ್ಥಾನದಲ್ಲಿ ದೊಡ್ಡವರಿದ್ದು ವಿದ್ಯುತ್ ಮಂತ್ರಿ ಜಾರ್ಜ್ ಸೇರಿದಂತೆ ಮುಖ್ಯಮಂತ್ರಿ ಬಳಿ ಭೇಟಿ ನೀಡುತ್ತಾರೆ. ಆದರೆ ನಾವೆಲ್ಲ ಚಿಕ್ಕವರಾಗಿದ್ದು ಅಧಿಕಾರಿಗಳ ಹತ್ತಿರ ಹೋಗಿ ಕೆಲಸ ಮಾಡಿಸಿಕೊಂಡು ಬಂದಿದ್ದೇವೆ ಎಂದು ದಾಖಲೆ ತೋರಿಸಿದರು. ಐತಿಹಾಸಿಕ ಪ್ರವಾಸಿ ಕ್ಷೇತ್ರದಲ್ಲಿ ಹಿಂದಿನ ಮತ್ತು ಹಾಲಿ ಶಾಸಕರುಗಳು ಶಾಶ್ವತ ಅಭಿವೃದ್ಧಿ ಕ್ರಿಯಾ ಯೋಜನೆಗಳನ್ನು ರೂಪಿಸುವಲ್ಲಿ ಹಾಗೂ ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾಗಿದ್ದು ಇವರ ಅಭಿವೃದ್ಧಿಯ ಸಾಧನೆ ಬರೀ ಭಾಷಣದಲ್ಲಿ ಎದ್ದು ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು. ವಿದ್ಯುತ್ ಸ್ಟೇಷನ್‌ಗಳೇ ಇಲ್ಲ:

ತಾಲೂಕಿನ ಹೋಬಳಿ ಕೇಂದ್ರಗಳಲ್ಲಿ ವಿದ್ಯುತ್ ಉಪ ಸ್ಟೇಷನ್‌ಗಳು ಇಲ್ಲದಿರುವುದು ಬೇಸರದ ವಿಷಯ. ರಾಜ್ಯದಲ್ಲೇ ಹೋಬಳಿಯಲ್ಲಿ ವಿದ್ಯುತ್ ಸ್ಟೇಷನ್ ಇಲ್ಲದೇ ಇರುವುದು ಬೇಲೂರು ತಾಲೂಕು ಮಾತ್ರ ಎಂದರೆ ತಪ್ಪಾಗಲಾರದು. ತಾಲೂಕಿನ ಬಿಕ್ಕೋಡು ಕಸಬಾ ಹೋಬಳಿಯಲ್ಲಿ ವಿದ್ಯುತ್ ಸಬ್ ಸ್ಟೇಷನ್ ಇಲ್ಲದೆ ಇರುವುದು ವಿಪರ್ಯಾಸವಾಗಿದ್ದು ಶಾಸಕರು ಭಾಷಣಕ್ಕೆ ಮಾತ್ರ ಸೀಮಿತ ಎನ್ನುವುದಕ್ಕೆ ಇದಕ್ಕಿಂತ ಬೇರೆ ಇದಾಹರಣೆ ಬೇಕಿಲ್ಲ. ಇವರ ಅಭಿವೃದ್ಧಿ ಕಾರ್ಯಗಳು ಯಾವ ಪ್ರಮಾಣದಲ್ಲಿ ಇದೆ ಎಂಬುದನ್ನು ನಾಗರಿಕರು ಅರ್ಥ ಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ವಿದ್ಯುತ್ ಕಮಿಟಿಯ ಸದಸ್ಯ ಸುದಯ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶ್ರೀನಿವಾಸ್, ಕೆಡಿಪಿ ಸದಸ್ಯ ಬಿಕ್ಕೋಡು ಚೇತನ್ ನಂದೀಶ್ ಇದ್ದರು.