ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಅಭಿನಂದನಾ ಕಾರ್ಯಕ್ರಮ

| Published : Dec 13 2024, 12:47 AM IST

ಸಾರಾಂಶ

ಉಡುಪಿ ಶ್ರೀ ಅದಮಾರು ಮಠ ಎಜುಕೇಶನ್‌ ಕೌನ್ಸಿಲ್‌ ಮತ್ತು ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಗಳು ಪೂರ್ಣಪ್ರಜ್ಞಾ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಿತು.

ಕನ್ನಡಪ್ರಭ ವಾರ್ತೆ ಉಡುಪಿ

ತನ್ನ ಬದುದಕಿಗೆ ಒಂದು ವಿಶಿಷ್ಟ ಅರ್ಥ ಕಲ್ಪಿಸಿದ್ದೇ ಅದಮಾರು ಮಠಾಧೀಶರಾದ ಹರಿಪಾದಾಂಗತ ಶ್ರೀ ವಿಭುದೇಶ ತೀರ್ಥ ಶ್ರೀಪಾದರು ಎಂದು ಉಡುಪಿ ಶ್ರೀ ಅದಮಾರು ಮಠ ಎಜುಕೇಶನ್‌ ಕೌನ್ಸಿಲ್‌ನ ನಿಕಟಪೂರ್ವ ಗೌರವ ಕಾರ್ಯದರ್ಶಿ ಡಾ.ಶ್ರೀಹರಿ ಹೇಳಿದರು.

ಅವರು ಉಡುಪಿ ಶ್ರೀ ಅದಮಾರು ಮಠ ಎಜುಕೇಶನ್‌ ಕೌನ್ಸಿಲ್‌ ಮತ್ತು ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಗಳು ಪೂರ್ಣಪ್ರಜ್ಞಾ ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು.

ಕೌನ್ಸಿಲ್‌ನ ನೂತನ ಗೌರವ ಕಾರ್ಯದರ್ಶಿಯಾಗಿ ನೇಮಕಗೊಂಡ ಡಾ.ಎ.ಪಿ.ಭಟ್‌ ಮಾತನಾಡಿ, ಶಿಕ್ಷಣದ ಮೂಲಕ ಸರ್ವತೋಮುಖ ಬೆಳವಣೆಗೆ ಸಾಧ್ಯ ಎಂಬುದನ್ನು ಅರಿತ ಶ್ರೀಪಾದರು ವಿಶೇಷವಾಗಿ ಭೌತಶಾಸ್ತ್ರ ಮತ್ತು ಇಂಗ್ಲಿಷ್‌ ವಿಷಯಗಳಲ್ಲಿ ವಿಭಿನ್ನ ಆಸಕ್ತಿಯನ್ನು ಹೊಂದಿದ್ದರು. ಎಲ್ಲ ಶಿಕ್ಷಕ ಶಿಕ್ಷಕೇತರನ್ನು ಪ್ರೀತಿ ಗೌರವದಿಂದ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತಿದ್ದರು ಎಂದು ನೆನಪಿಸಿಕೊಂಡರು.

ಸನ್ಮಾನ ನೆರೆವೇರಿಸಿದ ಸಂಸ್ಥೆಯ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ೬೦ರ ದಶಕದ ನಂತರದಲ್ಲಿ ತಮ್ಮ ಪರಮಗುರುಗಳು ಸ್ಥಾಪಿಸಿದ್ದ ವಿದ್ಯಾಸಂಸ್ಥೆಗಳಲ್ಲಿ ಅತ್ಯಂತ ಪ್ರಮಾಣಿಕರಾಗಿ ಸೇವೆಯನ್ನು ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಿ ಅರ್ಥವನ್ನು ಕಲ್ಪಿಸಿಕೊಟ್ಟ ಎಲ್ಲ ನಿವೃತ್ತ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕೇತರರು ಹಾಗೂ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು ಮತ್ತು ಹಿತೈಷಿಗಳನ್ನು ಶ್ಲಾಘಿಸಿದರು. ಮುಂದೆಯೂ ಪ್ರಸ್ತುತ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ನೌಕರರು ಹಾಗೂ ನಿವೃತ್ತರೆಲ್ಲರೂ ಪೂರ್ಣಪ್ರಜ್ಞ ಕುಟುಂಬದ ಜೊತೆ ಸಹಕರಿಸಿದರೆ ವಿಶ್ವ ಮಾನ್ಯತೆಯ ವಿಶ್ವವಿದ್ಯಾನಿಲಯ ಕಟ್ಟಬಹುದು ಎಂದು ಅಭಿಪ್ರಾಯಪಟ್ಟರು.ಕಾಲೇಜಿನ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್‌ ಸ್ವಾಗತಿಸಿದರು. ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ.ಶ್ರೀರಮಣ ಐತಾಳ್‌ ಅತಿಥಿಗಳನ್ನು ಪರಿಚಯಸಿದರು. ಪ್ರಾಂಶುಪಾಲ ಡಾ.ರಾಮು ಎಲ್. ಅತಿಥಿಗಳಿಗೆ ಹೂ ಗುಚ್ಚನೀಡಿದರು. ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಗೌರವ ಕಾರ್ಯದರ್ಶಿ ಸಿಎ ಟಿ.ಪ್ರಶಾಂತ ಹೊಳ್ಳ ವಂದಿಸಿದರು. ಉಪನ್ಯಾಸಕಿಯರಾದ ಪ್ರತಿಭಾ ಆರ್ಚಾಯ ಮತ್ತು ಪ್ರತಿಭಾ ಭಟ್‌ ಪ್ರಾರ್ಥಿಸಿದರು. ಕಾಲೇಜಿನ ಹಿರಿಯ ಉಪನ್ಯಾಸಕ ಡಾ.ರಮೇಶ್‌ ಟಿ.ಎಸ್‌. ಕಾರ್ಯಕ್ರಮ ನಿರೂಪಿಸಿದರು.