ವಿಜಯಪುರದ ಬಳಮಕರ ಮಂಗಲ ಕಾರ್ಯಾಲಯದಲ್ಲಿ ಸಂವಿಧಾನ ರಕ್ಷಣೆಗಾಗಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದ ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ವಿಧಾನ ಪರಿಷತ್ ಸದಸ್ಯ ಸುದಮದಾಸ ಅವರು ಉದ್ಘಾಟನೆ ನೆರವೇರಿಸಿದರು. | Kannada Prabha
Image Credit: KP
ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ
ಕನ್ನಡಪ್ರಭ ವಾರ್ತೆ ವಿಜಯಪುರ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ದೇಶ ಕಂಡ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಸರ್ವ ಜನಾಂಗದ ಏಳಿಗೆಗೆ ಶ್ರಮಿಸಿದ ಮಹಾನುಭಾವರು ಎಂದು ವಿ.ಪ ಸದಸ್ಯ ಎಚ್.ಪಿ. ಸುಧಾಮದಾಸ ಹೇಳಿದರು. ಶುಕ್ರವಾರ ನಡೆದ ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ದೇಶದ ಜನತೆಯ ಸಂಕಷ್ಟ ದೂರ ಮಾಡಲು ಶ್ರಮಿಸಿದರು ಎಂದು ಹೇಳಿದರು. ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರ ಮಾತನಾಡಿ, ಅಂಬೇಡ್ಕರ್ ಚಿಂತೆನೆಗಳನ್ನು ಕರ್ನಾಟಕದಲ್ಲಿ ದಲಿತ ಚಳವಳಿ ಪ್ರಾರಂಭವಾದಾಗಿನಿಂದಲೂ ಅನುಸರಿಸಿಕೊಂಡು ಬರುತ್ತಿದೆ. ಈಗ ನಮ್ಮ ಸಂವಿಧಾನ ಅಪಾಯದಲ್ಲಿದೆ. ಅದರ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು. ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಮುಂದುವರೆದ ಉನ್ನತ ವರ್ಗಗಳಿಗೆ ಮೀಸಲಾತಿ ಸಂವಿಧಾನಕ್ಕೆ ವಿರುದ್ಧ. ಕೇಂದ್ರ ಬಿಜೆಪಿ ಸರ್ಕಾರ ದಲಿತರು, ಅಲ್ಪಸಂಖ್ಯಾತರ ಕಡೆಗಣನೆ ಮಾಡಿದೆ ಎಂದರು. ರಾಜ್ಯ ಪ್ರಚಾರ ಸಮಿತಿ ಉಪಾಧ್ಯಕ್ಷ, ಕೆಪಿಸಿಸಿ ಶ್ರೀನಿವಾಸ ಹೆಣ್ಣೂರ, ನಾಗರಾಜ ಲಂಬು, ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ (ಗಣಿಯಾರ) ಶರಣು ಸಿಂಧೆ, ಅನಿಲ ಕೊಡತೆ, ರಾಜು ತೊರವಿ, ಲಕ್ಕಪ್ಪ ಬಡಿಗೇರ, ಪರಶುರಾಮ ದಿಂಡವಾರ, ಪ್ರಕಾಶ ಗುಡಿಮನಿ, ವಾಯ್.ಎಸ್. ಮ್ಯಾಗೇರಿ, ಮಲ್ಲೇಶಿ ಸಜ್ಜನ, ಮರೀಶ ನಾಗಣ್ಣವರ, ರವೀಂದ್ರ ಎ.ಶ್ರೀಧರ ಪೂಜಾರಿ, ಅಡಿವೆಪ್ಪ ಸಾಲಗಲ್ಲ, ರಾಹುಲ ಕುಬಕಡ್ಡಿ, ಚಂದ್ರಕಾಂತ ಸಿಂಗೆ, ರಾಜಶೇಖರ ಕುಚಬಾಳ, ಮುತ್ತಪ್ಪ ಚಮಲಾಪುರ, ಅಣ್ಣಾರಾಯ ಪೂಜಾರಿ, ದಶರತ ಸಿಂಗೆ, ಜಿ.ಎಸ್. ತಳವಾರ, ಯಶೋಧಾ ಮೇಲಿನಕೇರಿ, ರೇಣುಕಾ ಮಾದರ, ಜಯಶ್ರೀ ಡಿಂಗಿ, ಮಲ್ಲಮ್ಮ ಚಲವಾದಿ, ದೇವಮ್ಮ ಬಂಡಿವಡ್ಡರ, ಶಿವಸೀಲಾ ಚಲವಾದಿ, ಸುಭದ್ರಾ ಮೇಲಿನಮನಿ, ಪುಷ್ಪಾ ಮಣೂರ, ಸುಶೀಲಾ ಹರಿಜನ ಮತ್ತಿತರರು ಇದ್ದರು. ಕಾಂಗ್ರೆಸ್ ಸೇರ್ಪಡೆ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪ.ಪಂ 8 ಸದಸ್ಯರು ಬಿಜೆಪಿ ತೊರೆದು ಶಿವನಗೌಡ ಗುಜಗೊಂಡ ನೇತೃತ್ವದಲ್ಲಿ ಹಾಗೂ ಇಂಡಿ ತಾಲೂಕಿನ ಮಹಮ್ಮದ ದೇವರ ಮತ್ತು ಪುಂಡಲಿತ ಆಲಭಗೊಂಡ ನೇತೃತ್ವದಲ್ಲಿ ಜೆಡಿಎಸ್‌ನ 25 ಜನ, ದೇವರಹಿಪ್ಪರಗಿ ಕ್ಷೇತ್ರದ ಹನಮಂತ ಮಾದರ ನೇತೃತ್ವದಲ್ಲಿ ಬಿಜೆಪಿ ತೊರೆದು ಮಾದರ, ಗಾಣಿಗೇರ, ವಿಶ್ವಕರ್ಮ, ರಡ್ಡಿ, ಗಂಗಾಮತ, ಚಲವಾದಿ,ಲಂಬಾಣಿ ಅಲ್ಪಸಂಖ್ಯಾತ ಸಮುದಾಯದವರು, ಸಿಂದಗಿ, ಆಲಮೇಲ, ಕೊಲ್ಹಾರ, ನಿಡಗುಂದಿ, ಬಬಲೇಶ್ವರ, ತಿಕೋಟಾ, ತಾಳಿಕೋಟೆ, ವಿಜಯಪುರ ತಾಲೂಕಿನ ಸಹಸ್ರಾರು ಜನರು ಎಂ.ಎಲ್.ಸಿ. ಸುಧಾಮದಾಸ, ಮಾಜಿ ಶಾಸಕ ರಾಜು ಆಲಗೂರ, ಶರಣಪ್ಪ ಸುಣಗಾರ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.