ಸಾರಾಂಶ
ಇಲ್ಲಿಯ ರಾಜಾಧ್ಯಕ್ಷ ಪೆವಿಲಿಯನ್ ಆವರಣದಲ್ಲಿ ಇರುವ ಐದು ಹಾರ್ಡ್ ಕೋರ್ಟ್ ಅಂಗಣಗಳಲ್ಲಿ ಈ ಪದ್ಯಗಳು ನಡೆಯಲಿವೆ. 20 ರಾಷ್ಟ್ರಗಳಿಂದ 44 ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಧಾರವಾಡ
ಧಾರವಾಡ ಜಿಲ್ಲಾ ಟೆನಿಸ್ ಸಂಸ್ಥೆ (ಡಿಡಿಎಲ್‌ಟಿಎ) ಆಶ್ರಯದಲ್ಲಿ ಅ. 15 ರಿಂದ 22ರ ವರೆಗೆ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ನಿನ ವಿಶ್ವ ಟೆನಿಸ್ ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್ ಟೆನಿಸ್ ಪಂದ್ಯಾವಳಿ ನಡೆಯಲಿವೆ.ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಿಡಿಎಲ್‌ಟಿಎ ಅಧ್ಯಕ್ಷರು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಇಲ್ಲಿಯ ರಾಜಾಧ್ಯಕ್ಷ ಪೆವಿಲಿಯನ್ ಆವರಣದಲ್ಲಿ ಇರುವ ಐದು ಹಾರ್ಡ್ ಕೋರ್ಟ್ ಅಂಗಣಗಳಲ್ಲಿ ಈ ಪದ್ಯಗಳು ನಡೆಯಲಿವೆ. 20 ರಾಷ್ಟ್ರಗಳಿಂದ 44 ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಭಾರತದ ಡೇವಿಸ್ ಕಪ್ ಆಟಗಾರ ರಾಮಕುಮಾರ ರಾಮನಾಥನ್, ದಿಗ್ವಿಜಯಸಿಂಗ್ ಪ್ರತಾಪಸಿಂಗ ಸೇರಿದಂತೆ 12 ಜನರು ಭಾರತೀಯ ಆಟಗಾರರು ಇದ್ದಾರೆ ಎಂದರು.
ಭಾರತ, ಅಮೇರಿಕಾ, ಫ್ರಾನ್ಸ್, ಜಪಾನ್, ಮಲೇಶಿಯಾ, ನೆದರಲ್ಯಾಂಡ್, ಕೋರಿಯಾ, ಸ್ವೀಡನ್, ಗ್ರೇಟ್ ಬ್ರಿಟನ್, ಇಟಲಿ, ವಿಯಟ್ನಾಂ, ಆಸ್ಟ್ರೇಲಿಯಾ, ನೇಪಾಳ, ಸ್ವೀಜರಲ್ಯಾಂಡ್, ತೈಪೇ, ಅರ್ಜೆಂಟಿನಾ, ಉಕ್ರೇನ್, ಜರ್ಮನಿ, ಇರಾಕ ಮತ್ತು ಕೆಮರೂನ್ ರಾಷ್ಟ್ರಗಳ ಆಟಗಾರರು ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ. ಜಿ.ಆರ್. ಅಮರನಾಥ ಪಂದ್ಯಾವಳಿಯ ನಿರ್ದೇಶಕರಾಗಿದ್ದು, ಐಟಿಎಫ್ ಮತ್ತು ಕೆಎಸ್‌ಎಲ್‌ಟಿಎ ಉಸ್ತುವಾರಿಯಲ್ಲಿ ಪಂದ್ಯಾವಳಿ ಜರುಗಲಿದೆ ಎಂದರು.